Advertisment

ಫಾಫ್ ಅದೇ ಹಾಡು, ಅದೇ ರಾಗ.. 3 ಭರ್ಜರಿ ಸಿಕ್ಸರ್​ ಬಾರಿಸಿಯೂ ನಿರಾಸೆ ಮೂಡಿಸಿದ ಕೊಹ್ಲಿ..!

author-image
Ganesh
Updated On
ಫಾಫ್ ಅದೇ ಹಾಡು, ಅದೇ ರಾಗ.. 3 ಭರ್ಜರಿ ಸಿಕ್ಸರ್​ ಬಾರಿಸಿಯೂ ನಿರಾಸೆ ಮೂಡಿಸಿದ ಕೊಹ್ಲಿ..!
Advertisment
  • ಆರ್​ಸಿಬಿಗೆ ಆರಂಭದಲ್ಲೇ ಆಘಾತ, 2 ವಿಕೆಟ್ ಪತನ
  • 13 ಬಾಲ್​ನಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಿದ ವಿರಾಟ್
  • ಸಂಕಷ್ಟದಲ್ಲಿರುವ ಆರ್​ಸಿಬಿಗೆ ಪಾಟಿದಾರ್ ಆಸರೆ

ಬೆಂಗಳೂರಲ್ಲಿ ನಡೆಯುತ್ತಿರುವ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ಟಾಸ್​ ಗೆದ್ದು ಆರ್​ಸಿಬಿಯನ್ನು ಮೊದಲು ಬ್ಯಾಟಿಂಗ್​ಗೆ ಆಹ್ವಾನಿಸಿತ್ತು. ಬ್ಯಾಟಿಂಗ್​ಗೆ ಬಂದ ಆರ್​ಸಿಬಿಗೆ ಆರಂಭದಲ್ಲೇ ಆಘಾತ ಎದುರಾಗಿದೆ.

Advertisment

ಕೇವಲ 23 ರನ್​ಗೆ ಕ್ಯಾಪ್ಟನ್​ ಡುಪ್ಲೆಸಿ ವಿಕೆಟ್ ಕಳೆದುಕೊಂಡಿತ್ತು. ಇದೀಗ ಕಿಂಗ್ ಕೊಹ್ಲಿ ವಿಕೆಟ್ ಕೂಡ ಬಿದ್ದಿದೆ. 7 ಬಾಲ್ ಆಡಿರುವ ಡುಪ್ಲೆಸಿ ರನ್​ಗಳಿಸಲು ಪರಾಟ ನಡೆಸಿದರು. ಕೇವಲ 6 ರನ್ ಬಾರಿಸಿ ಮುಕೇಶ್ ಕುಮಾರ್​​ಗೆ ವಿಕೆಟ್ ಒಪ್ಪಿಸಿದರು.

ಇದನ್ನೂ ಓದಿ:ಮಟಮಟ ಮಧ್ಯಾಹ್ನವೇ ತಂಪೆರೆದ ಮಳೆರಾಯ.. ರಾಜ್ಯದ ಈ ಜಿಲ್ಲೆಯಲ್ಲಿ ಭರ್ಜರಿ ಮಳೆ..!

ಇನ್ನು ವಿರಾಟ್ ಕೊಹ್ಲಿ 13 ಬಾಲ್​ ಎದುರಿಸಿ ಭರ್ಜರಿ ಬ್ಯಾಟಿಂಗ್ ನಡೆಸಿದರು. ಮೂರು ಸಿಕ್ಸರ್, ಒಂದು ಬೌಂಡರಿ ಬಾರಿಸಿ ಭರವಸೆ ಮೂಡಿಸಿದ್ದರು. ಆದರೆ, 3.4ನೇ ಓವರ್​ನಲ್ಲಿ ಇಶಾಂತ್ ಶರ್ಮಾಗೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. ಸದ್ಯ ರಜತ್ ಪಾಟೀದಾರ್ ಹಾಗೂ ವಿಲ್ ಜಾಕ್ಸ್ ಬ್ಯಾಟಿಂಗ್ ಮಾಡ್ತಿದ್ದಾರೆ. ರಜತ್ ಚೆನ್ನಾಗಿ ಆಡುತ್ತಿದ್ದಾರೆ.

Advertisment

ಆರ್​ಸಿಬಿ ತಂಡದಲ್ಲಿ ಯಾರೆಲ್ಲ ಇದ್ದಾರೆ..?
ಫಾಫ್ ಡುಪ್ಲೆಸಿಸ್ (ಕ್ಯಾಪ್ಟನ್), ವಿರಾಟ್ ಕೊಹ್ಲಿ, ವಿಲ್ ಜಾಕ್ಸ್, ರಜತ್ ಪಾಟಿದಾರ್, ಮಹಿಪಾಲ್ ಲೋಮ್ರರ್, ದಿನೇಶ್ ಕಾರ್ತಿಕ್, ಕರಣ್ ಶರ್ಮಾ, ಮೊಹ್ಮದ್ ಸಿರಾಜ್, ಲೊಕಿ ಫರ್ಗುಸನ್, ಯಶ್ ದಯಾಳ್ ತಂಡದಲ್ಲಿದ್ದಾರೆ. ಕಳೆದರಡು ಪಂದ್ಯಗಳಲ್ಲಿ ಮಿಂಚಿದ್ದ ಸ್ವಪ್ನಿಲ್ ಸಿಂಗ್ ಅವರನ್ನು ಇಂಪ್ಯಾಕ್ಟ್ ಪ್ಲೇಯರ್​ ಆಗಿ ಬಳಸಿಕೊಳ್ಳಲು ಪ್ಲಾನ್ ಮಾಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment