/newsfirstlive-kannada/media/post_attachments/wp-content/uploads/2025/05/DCvsSRH-1.jpg)
ರಾಜೀವ್ ಗಾಂಧಿ ಇಂಟರ್‌ನ್ಯಾಷನಲ್ ಸ್ಟೇಡಿಯಂನಲ್ಲಿ ಡೆಲ್ಲಿ ವಿರುದ್ಧ ಹೈದರಾಬಾದ್ ಡೆಡ್ಲಿ ಅಟ್ಯಾಕ್ ಮಾಡಿದೆ. ಪ್ಯಾಟ್ ಕಮ್ಮಿನ್ಸ್ ಮಾರಕ ಬೌಲಿಂಗ್ ದಾಳಿಗೆ ಡೆಲ್ಲಿ ತಂಡದ ಘಟಾನುಘಟಿ ಆಟಗಾರರು ಮಕಾಡೆ ಮಲಗಿದ್ದಾರೆ. ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ನಿಜಕ್ಕೂ ಕಮಾಲ್ ಮಾಡಿದೆ.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಟಾಸ್ ಗೆದ್ದ ಸನ್ ರೈಸರ್ಸ್ ಹೈದರಾಬಾದ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ನಾಯಕ ಪ್ಯಾಟ್ ಕಮ್ಮಿನ್ಸ್ ಪವರ್ ಪ್ಲೇಯಲ್ಲಿ 4 ವಿಕೆಟ್ ಪಡೆಯೋ ಮೂಲಕ ಡೆಲ್ಲಿಗೆ ಬಿಗ್ ಶಾಕ್ ಕೊಟ್ಟರು.
ಪಂದ್ಯದ ಮೊದಲ ಎಸೆತಕ್ಕೆ ಕರುಣ್ ನಾಯರ್ ಶೂನ್ಯಕ್ಕೆ ಔಟಾದರು. ಡೆಲ್ಲಿಗೆ ಆರಂಭದಲ್ಲೇ ಆಘಾತ ಕೊಟ್ಟ ಪ್ಯಾಟ್ ಕಮ್ಮಿನ್ಸ್ ಫಾಫ್ ಡುಪ್ಲೆಸಿಸ್, ಅಭಿಷೇಕ್ ಪೊರೆಲ್ ವಿಕೆಟ್ ಕಿತ್ತು ಡೆಲ್ಲಿ ಢರ್‌ಗಯಾ ಆಗುವಂತೆ ಮಾಡಿದರು.
ಡೆಲ್ಲಿ ಕ್ಯಾಪಿಟಲ್ಸ್‌ಗೆ ಆಪದ್ಭಾವನಾದ ಕನ್ನಡಿಗ ಕೆ.ಎಲ್ ರಾಹುಲ್ ಕೂಡ ಇವತ್ತು ಕೇವಲ 10 ರನ್‌ಗಳಿಗೆ ವಿಕೆಟ್ ಒಪ್ಪಿಸಿದರು. ಪವರ್ ಪ್ಲೇಯಲ್ಲಿ ಪ್ರಮುಖ 4 ವಿಕೆಟ್ ಕಳೆದುಕೊಂಡ ಡೆಲ್ಲಿ ಕ್ಯಾಪಿಟಲ್ಸ್ 100 ರ ಗಡಿ ದಾಟಲು ಪರದಾಟ ನಡೆಸಿತು. ಕೊನೆಯದಾಗಿ ಅಶುತೋಷ್ ಶರ್ಮಾ ಹಾಗೂ ಟ್ರಿಸ್ಟಾನ್ ಸ್ಟಬ್ಸ್ ತಲಾ 41 ರನ್ ಸಿಡಿಸಿ ಅಪಾಯದಲ್ಲಿದ್ದ ತಂಡಕ್ಕೆ ನೆರವಾದರು.
ಇದನ್ನೂ ಓದಿ: ಆರ್ಸಿಬಿ ಫ್ಯಾನ್ಸ್ಗೆ ಗುಡ್ನ್ಯೂಸ್ ಹೇಳಿದ ಹರ್ಭಜನ್ ಸಿಂಗ್.. ಫೈನಲ್ ಪ್ರವೇಶ ಮಾಡೋ ತಂಡ ಯಾವುದು..?
ಅಂತಿಮವಾಗಿ 20 ಓವರ್‌ಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 7 ವಿಕೆಟ್ ಕಳೆದುಕೊಂಡು 133 ರನ್ ಗಳಿಸಿದೆ. ಪ್ಲೇ ಆಫ್ ರೇಸ್‌ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಡೆಲ್ಲಿ ಕ್ಯಾಪಿಟಲ್ ಅಲ್ಪ ಮೊತ್ತದ ಟಾರ್ಗೆಟ್ ನೀಡಿದೆ. ಕೇವಲ 134 ರನ್ ಟಾರ್ಗೆಟ್ ಅನ್ನ ಬಹಳ ಬೇಗ ಚೇಸ್ ಮಾಡಿ ರನ್ ರೇಟ್ ಹೆಚ್ಚಿಸಿಕೊಳ್ಳುವ ತವಕದಲ್ಲಿ ಹೈದರಾಬಾದ್ ತಂಡ ಕಣಕ್ಕಿಳಿಯುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ