newsfirstkannada.com

×

DCM ಡಿ.ಕೆ ಶಿವಕುಮಾರ್ ರಾತ್ರಿ 2 ಗಂಟೆವರೆಗೆ ಸಿಲಿಕಾನ್ ಸಿಟಿ ರೌಂಡ್ಸ್​.. ಕಾರಣವೇನು?

Share :

Published September 24, 2024 at 7:30am

    ಮಿಡ್​​ನೈಟ್​ನಲ್ಲಿ ಟೀ ಸವಿದು ರಿಲ್ಯಾಕ್ಸ್ ಆದ ಡಿ.ಕೆ ಶಿವಕುಮಾರ್

    ಬಿಬಿಎಂಪಿಗೆ ಡಿ.ಕೆ.ಶಿವಕುಮಾರ್ ಕೊಟ್ಟಿದ್ದ ಡೆಡ್‌ಲೈನ್‌ ಮುಗಿದಿದೆ

    ದೊಮ್ಮಲೂರು ಬಳಿ ಮೈಕ್ರೋ ಸರ್ಫೇಸಿಂಗ್ ಕಾಮಗಾರಿ ವೀಕ್ಷಣೆ

ಬ್ರಾಂಡ್ ಬೆಂಗಳೂರು ಕನಸು ಕಂಡಿರೋ ಬೆಂಗಳೂರು ಅಭಿವೃದ್ಧಿ ಸಚಿವ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ನಗರದ ಗುಂಡಿ ಮುಚ್ಚುವ ಕಾರ್ಯ ಕೈಗೆತ್ತಿಕೊಂಡಿದ್ದರು. ಬಿಬಿಎಂಪಿ ಅಧಿಕಾರಿಗಳನ್ನ ಕರೆಸಿ ಗುಂಡಿ ಬೇಗ ಮುಚ್ಚಬೇಕು. ದಿಸ್​ ಈಸ್​ ಡೆಡ್​ ಲೈನ್ ಅಂತಾ ಹೇಳಿ ಫುಲ್​ ಸ್ಟಾಪ್​ ಇಟ್ಟಿದ್ದರು. ಇನ್ನೂ ಅಧಿಕಾರಿಗಳು ಹೇಗೆ ಕೆಲಸ ಮಾಡಿದ್ದಾರೆ ಅಂತಾ ಸಿಲಿಕಾನ್ ಸಿಟಿಯನ್ನ ನೈಟ್ ಅಲ್ಲಿ ಒಂದ್​ ರೌಂಡ್ ಹಾಕಿ ಕ್ವಾಲಿಟಿ ಚೆಕ್​ ಮಾಡಿದ್ದಾರೆ.

ಬೆಂಗಳೂರಿಗರಿಗೆ ದೊಡ್ಡ ತಲೆನೋವಾಗಿದ್ದ ರಸ್ತೆ ಗುಂಡಿಗಳ ಸಮಸ್ಯೆಗೆ ಇತಿಶ್ರೀ ಹಾಡಬೇಕೆಂದು ಬೆಂಗಳೂರು ಅಭಿವೃದ್ಧಿ ಸಚಿವ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಬಿಬಿಎಂಪಿಗೆ ಕೊಟ್ಟಿದ್ದ ಡೆಡ್‌ಲೈನ್‌ ಮುಗಿದಿದೆ. ರಾತ್ರಿ ಬೆಂಗಳೂರಿನ ಪ್ರತಿ ರಸ್ತೆಗೂ ಡಿ.ಕೆ ಶಿವಕುಮಾರ್ ತೆರಳಿ, ರಸ್ತೆ ಗುಂಡಿಗಳನ್ನು ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ಮುಡಾ ಕೇಸ್​​ ತೀರ್ಪು ಪ್ರಕಟಿಸಲಿರೋ ಹೈಕೋರ್ಟ್.. ಇಂದು ಸಿಎಂ ಸಿದ್ದರಾಮಯ್ಯ ರಾಜಕೀಯ ಭವಿಷ್ಯ ನಿರ್ಧಾರ

ಡಿಸಿಎಂ ಡಿ.ಕೆ ಶಿವಕುಮಾರ್ ಮಧ್ಯರಾತ್ರಿ ನಗರ 10 ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ. ಮೊದಲಿಗೆ ಜಯಮಹಲ್‌ ರೋಡ್​ನಿಂದ ಶುರುಮಾಡಿ ಎಂಜಿ ರಸ್ತೆ ಹದಗೆಟ್ಟಿರುವ ರಸ್ತೆ, ಟ್ರಿನಿಟಿ ಸರ್ಕಲ್, ದೊಮ್ಮಲೂರು ಪ್ಲೈ ಓವರ್, ಅಗರಂ ರಸ್ತೆ, ದಕ್ಷಿಣ ವಲಯ ಡಾಂಬರೀಕರಣ ಆಗಿರುವ ರಸ್ತೆಗಳ ವೀಕ್ಷಣೆ ಮಾಡಿ ಪರಿಶೀಲಿಸಿದ್ರು.. ಡಿ.ಕೆ ಶಿವಕುಮಾರ್ ನೈಟ್ ಸಿಟಿ ರೌಂಡ್ಸ್​ನಲ್ಲಿ ಪಾಲಿಕೆ ಕಮಿಷನರ್ ತುಷಾರ್ ಗಿರಿನಾಥ್, ಪಾಲಿಕೆ ಅಧಿಕಾರಿಗಳು ಸಾಥ್ ನೀಡಿದ್ರು.

‘14,307 ಗುಂಡಿ ಮುಚ್ಚಿದ್ದಾರೆ’
15 ದಿನದಲ್ಲಿ ಎಲ್ಲ ಗುಂಡಿಗಳನ್ನ ಮುಚ್ಚಬೇಕೆಂದು ಅವರಿಗೆಲ್ಲ ಸಭೆ ಮಾಡಿ ಹೇಳಿ ಹೋಗಿದ್ದೆ. ಕಮಿಷನರ್​​ನಿಂದ ಜಾಯಿಂಟ್ ಕಮಿಷನರ್​​​, ಜೋನಾಲ್ ಕಮಿಷನರ್ ಸೇರಿ ಎಲ್ಲ 400 ಜನ ಇದ್ದಾರೆ. 400 ಜನನೂ ಎಲ್ಲ ರೋಡ್​​ ಅಲ್ಲಿ ಇರಬೇಕು ಎಂದು ಹೇಳಿದ್ದೆ. ಪ್ರತಿದಿನ ಎಷ್ಟೇಷ್ಟು ಗುಂಡಿಗಳನ್ನ ಮುಚ್ಚುತ್ತೀರಿ. ಅದಕ್ಕೆ ವಿಡಿಯೋ ಮಾಡಿ ಕಳುಹಿಸಬೇಕು ಎಂದಿದ್ದೆ. ಎಲ್ಲರೂ ಕೆಲಸ ಮಾಡಿದ್ದಾರೆ. ಫೋನ್ ಅಲ್ಲೇ ದಾಖಲೆ ಇದೆ. 14,307 ಗುಂಡಿಗಳನ್ನು ಮುಚ್ಚಲಾಗಿದೆ. ಸಮಾಧಾನಕಾರವಾಗಿ ಕಾಣುತ್ತಿದೆ. ಆದರೂ ಇನ್ನೊಂದು ಬಾರಿ ಪರಿಶೀಲನೆ ಮಾಡಬೇಕು.

ಡಿ.ಕೆ.ಶಿವಕುಮಾರ್, ಡಿಸಿಎಂ

ಖುದ್ದು ಕಬ್ಬಿಣದ ಸಲಾಕೆ ಹಿಡಿದು ರಸ್ತೆ ಪರಿಶೀಲಿಸಿದ ಡಿಸಿಎಂ

ಜಯಮಹಲ್ ರಸ್ತೆಯ ಪ್ಯಾಚ್ ವರ್ಕ್ ವೀಕ್ಷಣೆ ವೇಳೆ ಡಿಸಿಎಂ ಖುದ್ದು ಕಬ್ಬಿಣದ ಸರಳಿಡಿದು ನೆಲಕ್ಕೆ ಹೊಡೆದು ರಸ್ತೆ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: 10ನೇ ಕ್ಲಾಸ್ ಪಾಸ್ ಆಗಿದ್ರೆ ಸರ್ಕಾರಿ ಕೆಲಸ.. ಆದಾಯ ತೆರಿಗೆ ಇಲಾಖೆ ಹುದ್ದೆಗಳಿಗೆ ಕಾಲ್​ಫಾರ್ಮ್

ಮಧ್ಯ ರಾತ್ರಿಯೂ ಡಿಸಿಎಂ ಜೊತೆ ಸೆಲ್ಫಿಗೆ ಮುಗಿಬಿದ್ದ ಜನ

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಗರದಲ್ಲಿ ರೌಂಡ್ಸ್​ ಹಾಕ್ತಿದ್ರೆ, ಡಿಸಿಎಂ ಜೊತೆ ಸೆಲ್ಫಿ ತಗೋಬೇಕು ಅಂತಾ ಕೆಲವರು ಮುಗಿಬಿದ್ದಿದ್ರು. ಟ್ರಿನಿಟಿ ಜಂಕ್ಷನ್‌ನಲ್ಲಿ ಮುನ್ನ ಮಾಡುವ ಮಿಲ್ಲಿಂಗ್ ಕಾಮಗಾರಿಗಳ ಪರಿಶೀಲನೆ ಮಾಡಿದ್ರು. ಪೂರ್ಣ ಹದಗೆಟ್ಟಿರುವ ಕಡೆ ಇದೇ ರೀತಿ ಮಿಲ್ಲಿಂಗ್ ಮಾಡಿ ಡಾಂಬರೀಕಣ ಮಾಡಲು ಡಿಸಿಎಂ ಸೂಚನೆ ಕೂಡ ಕೊಟ್ರು. ಜೊತೆಗೆ ಮಿಲ್ಲಿಂಗ್ ಮಾಡಿದ್ದರಿಂದ ಬರುವ ಮಿಶ್ರಣವನ್ನ ಪುನರ್ಬಳಕೆ ಮಾಡಲು ಸೂಚಿಸಿದ್ರು. ದೊಮ್ಮಲೂರು ಫ್ಲೈ ಓವರ್ ಬಳಿ ಮೈಕ್ರೋ ಸರ್ಫೇಸಿಂಗ್ ಕಾಮಗಾರಿ ವೀಕ್ಷಣೆ ಮಾಡಿದ್ರು.

ರೌಂಡ್ಸ್ ನಡುವೆ ಟೀ ಸವಿದು ರಿಲ್ಯಾಕ್ಸ್ ಮಾಡಿದ ಡಿಸಿಎಂ

ತಡರಾತ್ರಿ ರೌಂಡ್ಸ್ ನಡುವೆ ಟೀ ಸವಿದು ಡಿಸಿಎಂ ಡಿ.ಕೆ ಶಿವಕುಮಾರ್ ರಿಲ್ಯಾಕ್ಸ್ ಮಾಡಿದ್ರು. ಮದರ್ ತೆರೆಸಾ ರಸ್ತೆಯಲ್ಲಿ ಟೀ ಬ್ರೇಕ್ ತೆಗೆದುಕೊಂಡ ಡಿಸಿಎಂ, ತಡರಾತ್ರಿ 1 ಗಂಟೆ ಬಳಿಕ ಸಿಟಿ ರೌಂಡ್ಸ್ ಮುಂದುವರೆಸಿದ್ರು. ಬರಿ ಕೆಲಸ ಮಾಡಿ ಅಂತಾ ಸೂಚನೆ ಕೊಟ್ಟು ಸುಮ್ನಿ ಕೂರೋದಲ್ಲ, ಕೆಲಸ ಹೇಗೆ ನಡೆದಿದೆ ಅಂತಾ ಖುದ್ದು ತಾವೇ ಹೋಗಿ ನೋಡ್ಬೇಕು ಅಂತಾ ಈ ರೌಂಡ್ಸ್​ ಮೂಲಕ ಡಿಸಿಎಂ ತಿಳಿಸಿಕೊಟ್ಟರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

DCM ಡಿ.ಕೆ ಶಿವಕುಮಾರ್ ರಾತ್ರಿ 2 ಗಂಟೆವರೆಗೆ ಸಿಲಿಕಾನ್ ಸಿಟಿ ರೌಂಡ್ಸ್​.. ಕಾರಣವೇನು?

https://newsfirstlive.com/wp-content/uploads/2024/09/DK_SHIVAKUMAR_NEW-1.jpg

Load More