/newsfirstlive-kannada/media/post_attachments/wp-content/uploads/2025/04/DK-SHIVAKUMAR.jpg)
ಜಾತಿ ಗಣತಿ ವರದಿಯ ಚದುರಂಗದಾಟಕ್ಕೆ ಇಳಿದಿರೋ ಸಿದ್ದರಾಮಯ್ಯ ಈಗಾಗಲೇ ಅಸಲಿ ಆಟ ಶುರುಮಾಡಿಬಿಟ್ಟಿದ್ದಾರೆ. ಸಂಪುಟದಲ್ಲಿ ವರದಿ ಮಂಡಿಸಿ ತಮ್ಮದೇ ಪಕ್ಷದೊಳಗೆ ಬಲಿಷ್ಠ ಜಾತಿಗಳ ಜೊತೆ ಸಿಎಂ ಜಟಾಪಟಿಗೆ ಇಳಿದಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲೇ ಜಾತಿ ಗಣತಿ ಗಲಾಟೆಯ ಜಂಜಾಟ!
ಜಾತಿ ಜನಗಣತಿ ವಿರುದ್ಧ ಒಕ್ಕಲಿಗ ಸಮುದಾಯ ತೀವ್ರ ಅಸಮಾಧಾನ ಹೊರ ಹಾಕ್ತಿದೆ. ಜ್ವಾಲೆ ಜ್ವಾಲಾಮುಖಿಯಾಗಿ ಬದಲಾಗ್ತಿರೋದ್ರ ಸುಳಿವು ಅರಿತಿರೋ ಡಿಕೆಶಿ, ದಿಢೀರ್ ಒಕ್ಕಲಿಗ ಶಾಸಕರ ಸಭೆ ಕರೆದಿದ್ದಾರೆ.
ಇದನ್ನೂ ಓದಿ: BREAKING: ಜಾತಿ ಗಣತಿ ವರದಿಯ ಅಂಕಿ-ಅಂಶ ಬಹಿರಂಗ; ಯಾವ ಜಾತಿ ಜನಸಂಖ್ಯೆ ಎಷ್ಟು?
‘ಕೈ’ ಒಕ್ಕಲಿಗ ಶಾಸಕರ ಸಭೆ ಕರೆದ ಡಿಕೆಶಿ
ಜಾತಿಗಣತಿ ಜ್ವಾಲೆ ಕ್ಷಣಕ್ಷಣಕ್ಕೂ ಹೆಚ್ಚಾಗ್ತಿರೋ ನಡುವೆ ಡಿಸಿಎಂ ಡಿ.ಕೆ.ಶಿವಕುಮಾರ್ ಇಂದು ದಿಢೀರ್ ಶಾಸಕರ ಸಭೆ ಕರೆದಿದ್ದಾರೆ. ಕಾಂಗ್ರೆಸ್ನ ಒಕ್ಕಲಿಗ ಶಾಸಕರನ್ನ ಮಾತ್ರ ಈ ಮೀಟಿಂಗ್ಗೆ ಆಹ್ವಾನಿಸಿದ್ದಾರೆ. ಶಿವಾನಂದ ವೃತ್ತದ ಸರ್ಕಾರಿ ನಿವಾಸದಲ್ಲಿ ಈ ಸಭೆ ನಡೆಯಲಿದ್ದು, ಮೀಟಿಂಗ್ನಲ್ಲಿ ಎಂಎಲ್ಎಗಳ ಅಭಿಪ್ರಾಯವನ್ನ ಡಿ.ಕೆ ಶಿವಕುಮಾರ್ ಆಲಿಸಲಿದ್ದಾರೆ. ಈ ವರದಿಯಲ್ಲಿ ಒಕ್ಕಲಿಗರಿಗೆ ಅನ್ಯಾಯವಾಗಿದೆ ಅಂತ ಬಹಿರಂಗ ಅಸಮಾಧಾನ ಕೇಳಿ ಬರ್ತಿರೋ ಕಾರಣ ವರದಿ ಬಗ್ಗೆ ಸಾಧಕ, ಬಾಧಕಗಳ ಚರ್ಚೆ ನಡೆಸಲಿದ್ದಾರೆ. ಏಪ್ರಿಲ್ 17ರಂದು ವಿಶೇಷ ಸಂಪುಟ ಸಭೆ ನಡೆಯಲಿದ್ದು, ಇದಕ್ಕೂ ಮೊದಲೇ ಡಿಕೆಶಿ ಕರೆದ ಈ ಸಭೆ ಕುತೂಹಲಕ್ಕೆ ಕಾರಣ ಆಗಿದೆ.
ಯಾರಿಗೂ ಅನ್ಯಾಯವಾಗೋದಕ್ಕೆ ಬಿಡಲ್ಲ.. ಎಲ್ಲರ ಗೌರವ ಕಾಪಾಡ್ತೇವೆ ಅಂತಿರೋ ಡಿಸಿಎಂ ಡಿ.ಕೆ ಶಿವಕುಮಾರ್ರ ಇವತ್ತಿನ ನಡೆ ಮೇಲೆ ಕುತೂಹಲ ನೆಟ್ಟಿದೆ. ಜಾತಿಗಣತಿಗೆ ಲಿಂಗಾಯತ, ಒಕ್ಕಲಿಗ ಸೇರಿದಂತೆ ಪ್ರಬಲ ಸಮುದಾಯಗಳು ವಿರೋಧ ವ್ಯಕ್ತಪಡಿಸ್ತಿರೋದು ಗೊತ್ತೇ ಇದೆ. ಈ ನಡುವೆ ಒಕ್ಕಲಿಗ ಸಮುದಾಯದ ಪ್ರಬಲ ನಾಯಕರಲ್ಲೊಬ್ಬರಾದ ಡಿಕೆಶಿ, ಪಕ್ಷದ ಸಮುದಾಯದ ಶಾಸಕರನ್ನ ಒಂದೆಡೆ ಸೇರಿಸ್ತಿರೋದು ನಾನಾ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.
ಇದನ್ನೂ ಓದಿ: ದಿಢೀರ್ ತಿರುಪತಿ ತಿಮ್ಮಪ್ಪನಿಗೆ ಮುಡಿ ಕೊಟ್ಟ ಡಿಸಿಎಂ ಪವನ್ ಕಲ್ಯಾಣ್ ಪತ್ನಿ; ಕಾರಣವೇನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ