/newsfirstlive-kannada/media/post_attachments/wp-content/uploads/2024/11/Free-bus-for-Men-Dk-shivakumar.jpg)
ಬೆಂಗಳೂರು: ಶಕ್ತಿ ಯೋಜನೆಯಲ್ಲಿ ರಾಜ್ಯದ ಮಹಿಳೆಯರು, ಹೆಣ್ಣು ಮಕ್ಕಳು ಸಾರಿಗೆ ಬಸ್‌ನಲ್ಲಿ ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾರೆ. ಫ್ರೀ ಬಸ್ ಸೇವೆಯಿಂದ ಸಾಕಷ್ಟು ಬಡವರಿಗೆ ಅನುಕೂಲವಾಗಿದೆ. ಇದರ ಜೊತೆಗೆ ಇದೀಗ ಗಂಡು ಮಕ್ಕಳಿಗೂ ಉಚಿತ ಪ್ರಯಾಣ ನೀಡುವ ಬೇಡಿಕೆ ಕೇಳಿ ಬಂದಿದೆ. ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು ತೀವ್ರ ಸಂಚಲನ ಮೂಡಿಸಿದೆ.
ಇದನ್ನೂ ಓದಿ: ಕೂದಲೆಳೆ ಅಂತರ.. ಚನ್ನಪಟ್ಟಣ ಮತದಾನದ ಬಳಿಕ ಸಿ.ಪಿ ಯೋಗೇಶ್ವರ್ ಸ್ಫೋಟಕ ಸುಳಿವು; ಹೇಳಿದ್ದೇನು?
ಡಿ.ಕೆ ಶಿವಕುಮಾರ್ ಹೇಳಿದ್ದೇನು?
ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಯೊಬ್ಬ ಡಿಸಿಎಂ ಡಿ.ಕೆ ಶಿವಕುಮಾರ್ ಅವರಿಗೆ ಒಂದು ಪ್ರಶ್ನೆ ಕೇಳಿದ್ದಾನೆ. ಫ್ರೀ ಬಸ್ ಯೋಜನೆಯಲ್ಲಿ ನಮ್ಮ ತಾಯಿ ಸಂಚಾರ ಮಾಡುತ್ತಾರೆ. ನನ್ನ ತಾಯಿ ನನ್ನ ಬಿಟ್ಟು ನನ್ನ ಅಕ್ಕ-ತಂಗಿಯನ್ನು ಮಾತ್ರ ಕರೆದುಕೊಂಡು ಹೋಗುತ್ತಾರೆ. ಬಸ್ಸಲ್ಲಿ ಗಂಡು ಮಕ್ಕಳಿಗೂ ಫ್ರೀ ಪ್ರಯಾಣ ಸಿಗುತ್ತಾ? ಎಂದು ಪ್ರಶ್ನಿಸಿದ್ದಾರೆ.
/newsfirstlive-kannada/media/post_attachments/wp-content/uploads/2024/11/Dk-Shivakumar-free-Bus.jpg)
ಮಕ್ಕಳ ಜೊತೆ ಸಂವಾದದಲ್ಲಿ ಮಾತನಾಡಿದ ಡಿ.ಕೆ ಶಿವಕುಮಾರ್ ಅವರು ವಯಸ್ಸಿನ ಮಿತಿ ನಿರ್ಧರಿಸಿ ಫ್ರೀ ಪ್ರಯಾಣಕ್ಕೆ ಚಿಂತನೆ ನಡೆಸಲಾಗುವುದು. ಒಂದು ಏಜ್​ವರೆಗೆ ಫ್ರೀ ನೀಡಲು ಯೋಚಿಸ್ತೀವಿ ಎಂದಿದ್ದಾರೆ.
ಗಂಡಸರಿಗೆ ಫ್ರೀ ಬಸ್ ಇಲ್ಲ!
ಡಿಕೆ ಶಿವಕುಮಾರ್ ಅವರ ಈ ಮಾತಿನಿಂದ ಶಕ್ತಿ ಯೋಜನೆ ವಿಸ್ತರಣೆ ಆಗುತ್ತಾ ಅನ್ನೋ ಚರ್ಚೆ ಶುರುವಾಗಿದೆ. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಶಕ್ತಿ ಯೋಜನೆಯಡಿ ಸಾರಿಗೆ ಸಂಸ್ಥೆಗಳ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕೊಡಲಾಗಿದೆ. ಪುರುಷರಿಗೆ ಉಚಿತ ಪ್ರಯಾಣದ ಸೌಲಭ್ಯ ಕಲ್ಪಿಸುವ ಪ್ರಸ್ತಾವನೆ ಇಲ್ಲ. ಪುರುಷರಿಗೆ ಉಚಿತ ಪ್ರಯಾಣ ನೀಡುವ ಯೋಜನೆ ಸದ್ಯಕ್ಕಿಲ್ಲ. ನಮ್ಮ ಬಳಿ ಅಂತಹ ಯಾವುದೇ ಪ್ರಸ್ತಾವನೆಯೂ ಇಲ್ಲ. ಡಿಕೆ ಶಿವಕುಮಾರ್ ಭೇಟಿ ಮಾಡಿದಾಗ ಇದರ ಬಗ್ಗೆ ವಿಚಾರಿಸುತ್ತೇನೆ ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಜನಾಭಿಪ್ರಾಯ ಏನು?
ಗಂಡು ಮಕ್ಕಳಿಗೂ ಉಚಿತ ಸಾರಿಗೆ ಬಸ್ ಸೇವೆ ನೀಡುವ ಬಗ್ಗೆ ಜನರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಪ್ರಯಾಣಿಕರನ್ನು ನ್ಯೂಸ್ ಫಸ್ಟ್ ಮಾತನಾಡಿಸಿದ್ದು, ಹಲವು ಪ್ರಯಾಣಿಕರು ಉಚಿತ ಬಸ್ ಸೇವೆಗಿಂತ ಬೇರೆ ಸೌಲಭ್ಯಗಳನ್ನು ಸರ್ಕಾರ ನೀಡಬೇಕು. ಆಸ್ಪತ್ರೆ, ಶಾಲೆ, ಬೆಲೆ ಏರಿಕೆಗೆ ಕಡಿವಾಣ ಹಾಕಬೇಕು ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೆಲವು ಪ್ರಯಾಣಿಕರು ಮಹಿಳೆಯರಂತೆ ನಮಗೂ ಉಚಿತ ಪ್ರಯಾಣ ನೀಡಬೇಕು ಎಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us