/newsfirstlive-kannada/media/post_attachments/wp-content/uploads/2025/02/Dk-Shivakumar-Esha-Foundation-1.jpg)
ಮಹಾಶಿವರಾತ್ರಿ ಆಚರಣೆ ಹಿನ್ನೆಲೆಯಲ್ಲಿ ಸದ್ಗುರು ಆಶ್ರಮದಲ್ಲಿ ಈಶ ಫೌಂಡೇಶನ್ ಬೃಹತ್ ಕಾರ್ಯಕ್ರಮ ಆಯೋಜಿಸಿತ್ತು. ಕಾರ್ಯಕ್ರಮಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ಡಿಸಿಎಂ ಡಿ.ಕೆ ಶಿವಕುಮಾರ್ ಸೇರಿದಂತೆ ಗಣ್ಯಾತಿಗಣ್ಯರು ಭಾಗಿಯಾಗಿದ್ದರು.
ಈ ಸಂಭ್ರಮದಲ್ಲಿ ಸದ್ಗುರು ಜಗ್ಗಿ ವಾಸುದೇವ್ ಮಾತಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಮೌನವಾಗಿ ಕುಳಿತಿದ್ದು ಚರ್ಚೆಗೆ ಕಾರಣವಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಗುಣಗಾನ ಮಾಡಿದ ಸದ್ಗುರು ಜಗ್ಗಿ ವಾಸುದೇವ್ ಅವರ ಮಾತಿಗೆ ಶಿವರಾತ್ರಿ ಆಚರಣೆಯಲ್ಲಿ ಭಾಗವಹಿಸಿದ್ದ ಎಲ್ಲರು ಚಪ್ಪಾಳೆ ತಟ್ಟಿದರು. ಆದರೆ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಮಾತ್ರ ಸದ್ಗುರು ಜಗ್ಗಿ ವಾಸುದೇವ್ ಮಾತಿಗೆ ಮೌನವಾಗಿ ಕುಳಿತಿದ್ದರು.
ಡಿಸಿಎಂ ಡಿ.ಕೆ ಶಿವಕುಮಾರ್ ಎದುರು ಈ ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರಕ್ಕೆ ಸದ್ಗುರು ಜಗ್ಗಿ ವಾಸುದೇವ್ ಟೀಕಿಸಿದರು. ಈ ಮೊದಲು ಪ್ರತಿ ತಿಂಗಳು ದೇಶದಲ್ಲಿ ಬಾಂಬ್ ಸ್ಫೋಟವಾಗುತ್ತಿದ್ದವು. ಬೆಂಗಳೂರು, ಪುಣೆ, ಮುಂಬೈನಲ್ಲಿ ಬಾಂಬ್ ಸ್ಫೋಟವಾಗುತ್ತಿದ್ದವು. ಆದರೆ ಕಳೆದ 10 ವರ್ಷಗಳಲ್ಲಿ ಈ ರೀತಿ ಯಾವುದೇ ಬಾಂಬ್ ಸ್ಫೋಟವಾಗುತ್ತಿಲ್ಲ. ಇದಕ್ಕಾಗಿ ನಮ್ಮ ಏಜೆನ್ಸಿಗಳು, ಪೋರ್ಸ್‌ಗಳಿಗೆ ಹಾಗೂ ಎಲ್ಲದಕ್ಕೂ ಹೆಚ್ಚಾಗಿ ನಮ್ಮ ಪ್ರೀತಿಯ ಗೃಹ ಸಚಿವರಿಗೆ ಧನ್ಯವಾದ ಹೇಳಬೇಕು ಎಂದು ಜಗ್ಗಿ ವಾಸುದೇವ್ ಹೇಳಿದರು. ಸದ್ಗುರು ಜಗ್ಗಿ ವಾಸುದೇವ್ ಮಾತಿಗೆ ಡಿ.ಕೆ ಶಿವಕುಮಾರ್ ಹೊರತುಪಡಿಸಿ ಉಳಿದವರೆಲ್ಲಾ ಚಪ್ಪಾಳೆೆ ತಟ್ಟಿ ಬೆಂಬಲ ಸೂಚಿಸಿದರು.
ಇದನ್ನೂ ಓದಿ: ಮಾಜಿ ಸಿಎಂ BS ಯಡಿಯೂರಪ್ಪ 82ನೇ ಹುಟ್ಟುಹಬ್ಬದ ಸೆಲೆಬ್ರೇಷನ್ ಹೇಗಿತ್ತು? ಫೋಟೋಗಳು ಇಲ್ಲಿವೆ!
ಸದ್ಗುರು ಹೇಳಿದ್ದೇನು?
ಈ ಮೊದಲು ಪ್ರತಿ ತಿಂಗಳು ದೇಶದಲ್ಲಿ ಬಾಂಬ್ ಸ್ಫೋಟವಾಗುತ್ತಿದ್ದವು. ಆದ್ರೆ, ನಿಧಾನವಾಗಿ ದೇಶದಲ್ಲಿ ಏನಾಗುತ್ತಿದೆ ಅಂತ ಗೊತ್ತಾಗುತ್ತಿದೆ. ಈ ಮೊದಲು ಪ್ರತಿ ತಿಂಗಳು ಬಾಂಬ್ ಬ್ಲಾಸ್ಟ್ ಆಗ್ತಿತ್ತು. ಮುಂದೆ ಯಾವ ಸ್ಥಳ ಹೈದ್ರಾಬಾದ್, ಬೆಂಗಳೂರು, ಮುಂಬೈ, ಪುಣೆಯಲ್ಲಿ ಸ್ಫೋಟವಾಗುತ್ತಿದ್ದವು. ಕಳೆದ 10 ವರ್ಷಗಳಲ್ಲಿ ಈ ರೀತಿ ಯಾವುದೇ ಬಾಂಬ್ ಸ್ಫೋಟ ಆಗುತ್ತಿಲ್ಲ. ಇದಕ್ಕಾಗಿ ನಮ್ಮ ಎಲ್ಲಾ ಏಜೆನ್ಸಿಗಳು, ಫೋರ್ಸ್ಗಳಿಗೆ ಹಾಗೂ ಎಲ್ಲದಕ್ಕೂ ಹೆಚ್ಚಾಗಿ ನಮ್ಮ ಪ್ರೀತಿಯ ಗೃಹ ಸಚಿವರಿಗೆ ಧನ್ಯವಾದ ಹೇಳಬೇಕು.
WATCH -pic.twitter.com/QyX1FGrUdH
— Times Algebra (@TimesAlgebraIND)
WATCH -pic.twitter.com/QyX1FGrUdH
— Times Algebra (@TimesAlgebraIND) February 26, 2025
">February 26, 2025
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ