/newsfirstlive-kannada/media/post_attachments/wp-content/uploads/2024/11/DK_SHIVAKUMAR-3.jpg)
ಕಾಂಗ್ರೆಸ್ನಲ್ಲಿ ಅದೊಂದೇ ಸುದ್ದಿ.. ಒಬ್ಬೊಬ್ಬರಿಗೆ ಒಂದೊಂದು ಆಸೆ, ಆಕಾಂಕ್ಷೆ. ಸಿದ್ದರಾಮಯ್ಯಗೆ ಕುರ್ಚಿ ಉಳಿಸಿಕೊಳ್ಳುವ ಆಸೆ. ಇತ್ತ ಸಿಎಂ ಆಗಬೇಕು ಅನ್ನೋದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಬಯಕೆ ಇದೆ ಎಂಬ ವಿಚಾರ ರಾಜಕೀಯದಲ್ಲಿ ಭಾರೀ ಚರ್ಚೆ ಆಗ್ತಿದೆ.
ಡಿಕೆಶಿ ಹೊಸ ಗಾಳ..?
ಜೊತೆಗೆ ಸಿದ್ದರಾಮಯ್ಯ ನಂತರದ ನಾಯಕತ್ವಕ್ಕೆ ಅರ್ಧ ಡಜನ್ ನಾಯಕರು ಕ್ಯೂ ನಿಂತಿದ್ದಾರೆ. ಕೆಪಿಸಿಸಿ ಸ್ಥಾನಕ್ಕೆ ಟವಲ್ ಹಾಕುವ ಕಾರ್ಯ ಶರವೇಗದಲ್ಲಿ ನಡೀತಿದೆ. ಈ ನಡುವೆ ಡಿಕೆಶಿ ಹೊಸ ದಾಳ ಉರುಳಿಸಿದ್ರಾ ಎಂಬ ಅನುಮಾನ ಶುರುವಾಗಿದೆ.
ಇದನ್ನೂ ಓದಿ: ಲೀವ್ ಇನ್ ಪಾರ್ಟನರ್ ಜೀವ ತೆಗೆದ ಕಿರಾತಕ; ದೇಹ ಎಷ್ಟು ತುಂಡಾಗಿತ್ತು ಗೊತ್ತಾ?
ಯಾವ ಪವರ್ ಇಲ್ಲ, ಯಾವ ಶೇರಿಂಗೂ ಇಲ್ಲ.. ಸಿಎಂ ಆಗಿ ಸಿದ್ದರಾಮಯ್ಯ ಕೆಲಸ ಮಾಡ್ತಿದ್ದಾರೆ. ಅವರ ನೇತೃತ್ವದಲ್ಲಿ ನಾವೆಲ್ಲ ಕೆಲಸ ಮಾಡ್ತಿದ್ದೇವೆ ಎಂದು ಡಿಸಿಎಂ ಡಿಕೆಶಿ ಹೇಳಿರೋದು ಅಚ್ಚರಿಗೆ ಕೆಡವಿದೆ.
ಯಾವ ಡಿನ್ನರೂ ಇಲ್ಲ. ಯಾವ ಪಾಲಿಟಿಕ್ಸೂ ಇಲ್ಲ. ಯಾವ ಪವರ್ ಇಲ್ಲ, ಯಾವ ಶೇರೂ ಇಲ್ಲ. ಐದು ವರ್ಷ ಕಾಂಗ್ರೆಸ್ ಸರ್ಕಾರ ಇರುತ್ತದೆ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೆಲಸ ಮಾಡುತ್ತಿದ್ದಾರೆ. ಅವರ ನೇತೃತ್ವದಲ್ಲಿ ನಾವೆಲ್ಲ ಕೆಲಸ ಮಾಡುತ್ತಿದ್ದೇವೆ-ಡಿಕೆ ಶಿವಕುಮಾರ್, ಉಪಮುಖ್ಯಮಂತ್ರಿ
ಡಿಕೆಶಿ ಸಿಎಂ ಆಗ್ತಾರೆ ಅಂತ ವಿನಯ್ ಗುರೂಜಿ ಭವಿಷ್ಯ
ಡಿಕೆಶಿ ಸಿಎಂ ಆಗ್ತಾರೆ ಅಂತ ವಿನಯ್ ಗುರೂಜಿ ಭವಿಷ್ಯ ನುಡಿದಿದ್ರು. ಈ ಬಗ್ಗೆ ಮಾತ್ನಾಡಿದ ಡಿಕೆಶಿ, ನಾನು ಎಲ್ಲಾ ಸ್ವಾಮೀಜಿ, ಗುರೂಜಿಗಳಿಗೆ ವಿನಂತಿ ಮಾಡ್ತೀನಿ.. ನಮ‌್ಮ ಸರ್ಕಾರದ ವಿಚಾರದಲ್ಲಿ ತಮ್ಮ ಹೇಳಿಕೆ ಬೇಡ ಅಂತ ಮನವಿ ಮಾಡಿದ್ದಾರೆ.
ಸೋಮವಾರ ಕಾಂಗ್ರೆಸ್ನ ಶಾಸಕಾಂಗ ಪಕ್ಷದ ಸಭೆ!
ಕಾಂಗ್ರೆಸ್ನಲ್ಲಿನ ಬಣ ರಾಜಕಾರಣ ತಾರಕಕ್ಕೇರಿರುವ ಹೊತ್ತಲ್ಲೇ ಸೋಮವಾರ ಕಾಂಗ್ರೆಸ್ ಸರಣಿ ಸಭೆ ನಡೆಸಲಿದೆ. ಪದಾಧಿಕಾರಿಗಳ ಇತರೆ ಸಭೆ ಇದೆ.. ಸಂಜೆ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಈ ಎಲ್ಲದರ ಮಧ್ಯೆ ಇವತ್ತು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆಶಿ ಡೆಲ್ಲಿ ಯಾತ್ರೆ ಹೊರಟಿರೋದು ಕುತೂಹಲ ಮತ್ತಷ್ಟು ಇಮ್ಮಡಿಸಿದೆ.
ಇದನ್ನೂ ಓದಿ: BBK11: ಬಿಗ್ಬಾಸ್ ಫಿನಾಲೆಗೆ ಮೊದಲ ಎಂಟ್ರಿ.. ಹನುಮಂತ ದಿಢೀರ್ ಫೈರ್ ಆಗಿದ್ದು ಹೇಗೆ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ