ವೈಲೆಂಟ್ ಆದ್ರಾ ಡಿಸಿಎಂ..? ದಿಢೀರ್​ ಸಿದ್ದರಾಮಯ್ಯರ ಭೇಟಿಯಾದ ಡಿಕೆ ಶಿವಕುಮಾರ್..!

author-image
Ganesh
Updated On
ಸರ್ಕಾರಕ್ಕೆ ಕಾಲ್ತುಳಿತದ ಡ್ಯಾಮೇಜ್, ಸಿಎಂ-ಡಿಸಿಎಂಗೆ ದಿಢೀರ್ ಬುಲಾವ್.. ದೆಹಲಿಯಲ್ಲಿ ಇಂದು ‘ಹೈ’ ಟಾಕ್!
Advertisment
  • ಸಿಎಂ ಕಾವೇರಿ ನಿವಾಸಕ್ಕೆ ಭೇಟಿ ನೀಡಿದ್ದ ಶಿವಕುಮಾರ್‌
  • ಅರ್ಧ ಗಂಟೆಗೂ ಹೆಚ್ಚು ಕಾಲ ಸಿಎಂ ಜೊತೆ ಸಮಾಲೋಚನೆ
  • ಕುತೂಹಲ ಮೂಡಿಸಿದ ಡಿಸಿಎಂ ಡಿ.ಕೆ ಶಿವಕುಮಾರ್ ಭೇಟಿ

ರಾಜ್ಯ ಕಾಂಗ್ರೆಸ್​ನಲ್ಲಿ ಸಿಎಂ ಕುರ್ಚಿ ಕದನ ಮುಗಿಯದ ಕತೆಯಾಗಿದೆ. 50:50 ಅಧಿಕಾರ ಹಂಚಿಕೆ​ ಅಸಮಾಧಾನ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಬಣದ ಮಧ್ಯೆ ಮುಸುಕಿನ ಗುದ್ದಾಟಕ್ಕೆ ಕಾರಣವಾಗಿದೆ. ಜೊತೆಗೆ ಕೆಪಿಸಿಸಿ ಅಧ್ಯಕ್ಷ ಗಾದಿಯ ಗುದ್ದಾಟ ಕೂಡ ಪ್ರತಿಧ್ವನಿಸುತ್ತಿದೆ.

ಕೆಪಿಸಿಸಿ ಪಟ್ಟದ ಪೈಪೋಟಿ, ದಲಿತ‌ ಸಚಿವರ ನಿರಂತರ ಹೇಳಿಕೆಗಳ ನಡುವೆ ಸಿಎಂ ಸಿದ್ದರಾಮಯ್ಯರನ್ನ ಡಿ.ಕೆ ಶಿವಕುಮಾರ್​ ಭೇಟಿಯಾಗಿದ್ದಾರೆ. ಸಿಎಂ ಕಾವೇರಿ ನಿವಾಸಕ್ಕೆ ಭೇಟಿ ನೀಡಿದ್ದ ಡಿಸಿಎಂ ಡಿ.ಕೆ ಶಿವಕುಮಾರ್‌ ಸಿದ್ದರಾಮಯ್ಯರನ್ನ ಭೇಟಿಯಾಗಿದ್ದಾರೆ. ಅರ್ಧ ಗಂಟೆಗೂ ಹೆಚ್ಚು ಕಾಲ ಸಿಎಂ ಜೊತೆ ಸಮಾಲೋಚನೆ ನಡೆಸಿದ ಡಿ.ಕೆ ಶಿವಕುಮಾರ್​ ನಡೆ ರಾಜ್ಯ ರಾಜಕೀಯದಲ್ಲಿ ಕುತೂಹಲ ಹುಟ್ಟಿಸಿದೆ. ನಿನ್ನೆ ಮಧ್ಯಾಹ್ನ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಮಹದೇವಪ್ಪ ಜೊತೆ ಸಿಎಂ ಮಾತುಕತೆ ನಡೆಸಿದ್ರು. ಇದರ ಬೆನ್ನಲ್ಲೆ ಡಿಕೆಶಿ ಸಿದ್ದರಾಮಯ್ಯರನ್ನ ಭೇಟಿ ಮಾಡಿದ್ದಾರೆ.

ಇದನ್ನೂ ಓದಿ: Microfinance: ಕೊನೆಗೂ ಬಂತು ಹೊಸ ಕಾನೂನು.. ಸರ್ಕಾರಕ್ಕೆ ರಾಜ್ಯಪಾಲರು ಕೊಟ್ಟ 6 ಸಲಹೆಗಳು ಏನೇನು?

publive-image

ಕುತೂಹಲ ಮೂಡಿಸಿದ ಡಿಸಿಎಂ ಮತ್ತು ಸಿಎಂ ಭೇಟಿ!

ಮೂರು ದಿನಗಳಿಂದ ಇನ್ವೆಸ್ಟ್ ಕರ್ನಾಟಕ ಸಮಾವೇಶದಲ್ಲಿ ಬ್ಯುಸಿಯಾಗಿದ್ದ ಡಿಕೆಶಿ ದಿಢೀರ್ ಸಿಎಂ ಸಿದ್ದರಾಮಯ್ಯರನ್ನ ಭೇಟಿ ಮಾಡಿ ಚರ್ಚಿಸಿದ್ರು.. ದಲಿತ ಸಚಿವರ ನಿರಂತರ ಹೇಳಿಕೆಗಳಿಗೆ ಮೌನ ವಹಿಸಿದ್ದ ಡಿಸಿಎಂ ಡಿಕೆಶಿ, ಸಿಎಂ ಸಿದ್ದರಾಮಯ್ಯರನ್ನ ಭೇಟಿ ಮಾಡಿ ಅಸಮಾಧಾನ ಹೊರಹಾಕಿದ್ರಾ ಅನ್ನೋ ಚರ್ಚೆಗಳು ಶುರುವಾಗಿವೆ.

ಒಟ್ಟಿನಲ್ಲಿ ಸೈಲೆಂಟ್​ ಶಿವಕುಮಾರ್​ ದಲಿತ ಸಚಿವರ ಕೌಂಟರ್​​ಗೆ ವೈಲೆಂಟ್​ ಆದಂತೆ ಕಾಣ್ತಿದೆ. ಸಿಎಂ-ಡಿಸಿಎಂ ಭೇಟಿ ಬಳಿಕ ದಲಿತ ಸಚಿವರ ಬಾಯಿಗೆ ಬೀಗ ಬೀಳುತ್ತಾ ಕಾದು ನೋಡ್ಬೇಕಿದೆ. ಇಷ್ಟಕ್ಕೂ ಸುಮ್ಮನಾಗದ ಡಿಕೆಶಿ ಹೈಕಮಾಂಡ್​ ಕದ ತಟ್ಟಿ ದಲಿತ ಸಚಿವರಿಗೆ ಡಿಚ್ಚಿ ಕೊಟ್ಟರೂ ಅಚ್ಚರಿಯಿಲ್ಲ ಅನ್ನೋ ಮಾತುಗಳು ಕೇಳಿ ಬರ್ತಿವೆ.

ಇದನ್ನೂ ಓದಿ: ಸಿಎಂ ಗಾದಿ ಮೇಲೆ ಕಣ್ಣಿಟ್ಟ DK ಶಿವಕುಮಾರ್​ಗೆ ಟಾಂಗ್- ಪರಮೇಶ್ವರ್ ಸ್ಫೋಟಕ ಹೇಳಿಕೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment