ಗುರುಗಳು ಆಶೀರ್ವಾದ ಮಾಡಿದಾಗ ಏನು ಹೇಳೋಕೆ ಆಗುತ್ತದೆ -CM ಬದಲಾವಣೆ ಮಾತಿಗೆ ಡಿಕೆಶಿ ಅಚ್ಚರಿ ಹೇಳಿಕೆ

author-image
Ganesh
Updated On
ಗುರುಗಳು ಆಶೀರ್ವಾದ ಮಾಡಿದಾಗ ಏನು ಹೇಳೋಕೆ ಆಗುತ್ತದೆ -CM ಬದಲಾವಣೆ ಮಾತಿಗೆ ಡಿಕೆಶಿ ಅಚ್ಚರಿ ಹೇಳಿಕೆ
Advertisment
  • ಮಹಾಮಸ್ತಕಾಭಿಷೇಕ ಕಾರ್ಯಕ್ರಮದಲ್ಲಿ ಸಿಎಂ ಬದಲಾವಣೆ ಮಾತು
  • ಡಿಕೆಶಿ ಮುಖ್ಯಮಂತ್ರಿ ಆಗ್ಬೇಕು ಎಂದ ಗುಣಧರನಂದಿ ಮಹಾರಾಜರು
  • ನೀವು ಆಶೀರ್ವಾದ ಮಾಡಿದಾಗಲೆಲ್ಲಾ ನಮಗೆ ಏಟು ಹೊಡಿತಾರೆ-ಡಿಕೆಶಿ

ರಾಜ್ಯದಲ್ಲಿ ಪವರ್ ಶೇರಿಂಗ್ ಪ್ರಹಸನ ನಡೆಯುತ್ತಲೇ ಇದೆ. ಸಿಎಂ ಬಣ.. ಡಿಕೆಶಿ ಬಣದ ಮಧ್ಯೆ ಅಧಿಕಾರ ಹಂಚಿಕೆಯ ರಾದ್ಧಾಂತ ಮುಗಿಯದಾಗಿದೆ. ಇದ್ರ ಮಧ್ಯೆ ಡಿಕೆಶಿ ಸಿಎಂ ಆಗಬೇಕು ಎಂಬ ಕೂಗು ಮತ್ತೆ ಕೇಳಿಬಂದಿದೆ. ಪಾರ್ಶ್ವನಾಥರ ಮಹೋತ್ಸವದಲ್ಲಿ ಡಿಕೆಶಿಯ ಹೆಬ್ಬಯಕೆಗೆ ಜೈನ ಆಚಾರ್ಯರು ನೀರೆರೆದಿದ್ದಾರೆ.

ಡಿಕೆಶಿ ಸಿಎಂ ಆಗ್ಬೇಕು ಎಂದ ಜೈನ ಆಚಾರ್ಯ

ಹುಬ್ಬಳ್ಳಿಯ ವರೂರು ನವಗ್ರಹ ಕ್ಷೇತ್ರದಲ್ಲಿ ಪಾರ್ಶ್ವನಾಥರ ಮಹಾಮಸ್ತಕಾಭಿಷೇಕ ಕಾರ್ಯಕ್ರಮ ನಡೀತಿದೆ. ಈ ಕಾರ್ಯಕ್ರಮದಲ್ಲಿ ನಿನ್ನೆ ಡಿಸಿಎಂ ಡಿಕೆ.ಶಿವಕುಮಾರ್ ಭಾಗಿಯಾಗಿದ್ರು. ಇದೆ ವೇಳೆ ವರೂರ ಕ್ಷೇತ್ರದ ಆಚಾರ್ಯ ಗುಣಧರನಂದಿ ಮಹಾರಾಜರು ಆಚಾರ್ಯ ಗುರುದೇವ, ಕುಂತುಸಾಗರ ಸೇರಿ ವೇದಿಕೆ ಮೇಲಿದ್ದ ಎಲ್ಲ ಆಚಾರ್ಯರು ಕೈ ಎತ್ತಿ ನೀವೇ ಮುಂದಿನ ಸಿಎಂ ಆಗಬೇಕು ಎಂದು ಆಶೀರ್ವಾದ ಮಾಡಿದ್ದಾರೆ.

ಇದನ್ನೂ ಓದಿ: ಬಿಜೆಪಿ ಬಣ ಬಡಿದಾಟಕ್ಕೆ ಬ್ರೇಕ್ ಬೀಳುತ್ತಾ.. ಸಭೆಯಲ್ಲಿ ಚರ್ಚೆ ಆದ ಮಹತ್ವದ ಅಂಶಗಳು ಏನೇನು?

publive-image

ಡಿ.ಕೆ.ಶಿವಕುಮಾರ್ ಏನ್ ಹೇಳಿದ್ರು..?

ಒಂದು ಹಂತಕ್ಕೆ ನನಗೆ ಅವಕಾಶ ಮಾಡಿಕೊಡಬೇಕು ಎಂದು ನಮ್ಮ ಗುರುಗಳು ಆಶೀರ್ವಾದ ಮಾಡಿದ್ದಾರೆ. ಅದು ಇವರಿಗೆ ಬಿಟ್ಟಿರುವ ವಿಚಾರ. ಹಿಂದೆ ನಮ್ಮ ವಿನಯ್ ಗುರೂಜಿ ಕೂಡ ಹೇಳಿದ್ದರು. ಆಗ ನಾನು ಅವರಿಗೆ ಹೇಳಿದೆ, ನೀವು ಹೀಗೆ ಹೇಳಿದಾಗಲೆಲ್ಲ ಅನೇಕರು ನಮಗೆ ಏಟು ಹೊಡಿಯುತ್ತಾರೆ ಎಂದು. ಆ ವಿಚಾರವನ್ನು ಚರ್ಚೆ ಮಾಡೋದು ಬೇಡ. ಜೈನ ಗುರುಗಳು ಆಶೀರ್ವಾದ ಮಾಡಿದಾಗ ನಾವು ಏನು ಹೇಳೋಕೆ ಆಗುತ್ತದೆ. ನಮಗೆ ಪಕ್ಷ ಮುಖ್ಯ. ಪಕ್ಷ ಏನು ತೀರ್ಮಾನ ಮಾಡುತ್ತೋ ಅದಕ್ಕೆ ಬದ್ಧ ಎಂದು ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.

ಜೈನ ಗುರು ಗುಣಧರನಂದಿ ಮಹಾರಾಜರು ಹೇಳಿದ್ದೇನು?

ದಿನ ಬೆಳಗಾಗೋದ್ರಲ್ಲಿ ಒಂದು ಮಾತನ್ನು ನಾನು ಡಿಕೆ ಶಿವಕುಮಾರ್​ಗೆ ಹೇಳ್ತೀನಿ. ಅದು ಏನು ಅಂದ್ರೆ ನನಗೆ ಎರಡು ಕನಸು ಇವೆ. ಒಂದು ಜೈನರಿಗೆ ನಿಗಮ ಮಂಡಳಿ ಆಗಬೇಕು. ಇನ್ನೊಂದು ನೀವು ಮುಖ್ಯಮಂತ್ರಿ ಆಗಬೇಕು. ಇವತ್ತು ನವಗ್ರಹ ಹವನ ಆಗಿದೆ. ನವಗ್ರಹ ಅನುಷ್ಠಾನ ಆಗಿದೆ. 18 ಆಚಾರ್ಯಗಳು ಕೂಡಿದ್ದಾರೆ. ಅವರೆಲ್ಲರೂ ಕೈಮಾಡಿ ಕೂಗಿ ಹೇಳ್ತೀದ್ದಾರೆ. ಮುಖ್ಯಮಂತ್ರಿ ಭಾಗಿ ಭವಃ ಈ ಸಮಯದಲ್ಲಿ ನಾನು ಒಂದು ನುಡಿ ಇಡುತ್ತೇನೆ. ಮುಖ್ಯಮಂತ್ರಿ ಆಗಿಯೇ ತೀರುತ್ತಾರೆ ಡಿಕೆ ಶಿವಕುಮಾರ್ ಅಂತಾ ಜೈನ ಗುರುಗಳು ಆಶೀರ್ವಾ ಮಾಡಿದ್ದಾರೆ.

ಇದನ್ನೂ ಓದಿ: ಡಿಕೆಶಿ CM ಆಗುವ ಆಸೆಗೆ ನೀರೆರೆದ ಜೈನ ಆಚಾರ್ಯರು; 18 ಗುರುಗಳಿಂದ ಕೈ ಎತ್ತಿ ಡಿಸಿಎಂಗೆ ಆಶೀರ್ವಾದ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment