newsfirstkannada.com

ಸುದೀಪ್​​ ಬರ್ತ್​ಡೇ ಪಾರ್ಟಿಯಲ್ಲಿ ರಾಜಕೀಯ; ಬಿಜೆಪಿ ಈ ನಾಯಕರಿಗೆ ಗಾಳ ಹಾಕಿದ್ರಾ ಡಿಕೆಶಿ?

Share :

Published September 4, 2023 at 6:26am

Update September 4, 2023 at 6:30am

    ‘ಕೈ’ ಕೆಲವರಿಗೆ ಬ್ಲಾಕ್‌ಮೇಲ್ ಮಾಡ್ತಿದೆ ಎಂದ ಅಶ್ವತ್ಥ ನಾರಾಯಣ್​!

    ಬ್ಲಾಕ್‌ಮೇಲ್ ಮಾಡೋ ಕೆಲಸ ಬಿಜೆಪಿ ಮಾಡಿದ್ಯಾ-ಎಂಬಿಪಿ ಪ್ರಶ್ನೆ

    ಕಿಚ್ಚನ ಬರ್ತ್ ಡೇ ಪಾರ್ಟಿಯಲ್ಲೂ ‘ಆಪರೇಷನ್ ಹಸ್ತ’ದ್ದೇ ಚರ್ಚೆ?

ರಾಜ್ಯದಲ್ಲಿ ಆಪರೇಷನ್ ಹಸ್ತದ ಹಲ್‌ಚಲ್ ಎದ್ದಿದೆ. ‘ಕೈ’-ಕಮಲ ನಾಯಕರ ಸಂಪರ್ಕ ಕ್ರಾಂತಿ ಮತ್ತಷ್ಟು ಜೋರಾಗಿದೆ. ಬಿ.ಎಲ್‌. ಸಂತೋಷ್ ರಿವರ್ಸ್‌ ಆಪರೇಷನ್‌ ಸ್ಟೇಟ್‌ಮೆಂಟ್ ಬಳಿಕ ಮತ್ತಿಬ್ಬರು ‘ಕೈ’ ಜೋಡಿಸುವ ಮಾತುಗಳು ಮಾರ್ಧನಿಸುತ್ತಿವೆ. ಕಿಚ್ಚನ ಹುಟ್ಟು ಹಬ್ಬದ ಪಾರ್ಟಿಯೇ ಆಪರೇಷನ್ ಹಸ್ತದ ವೇದಿಕೆಯಾಯ್ತಾ ಎಂಬ ಚರ್ಚೆ ಜೋರಾಗಿದೆ. ಬಾಂಬೆ ಟೀಂ ಘರ್‌ವಾಪ್ಸಿ ಗದ್ದಲದ ಮಧ್ಯೆ ಒಬ್ಬೊಬ್ಬರೇ ಕೇಸರಿ ಕಲಿಗಳು ಕಾಂಗ್ರೆಸ್ ಕ್ಯಾಪ್ಟನ್‌ ಗಾಳಕ್ಕೆ ಬೀಳುತ್ತಿರುವ ಸದ್ದು ರಾಜ್ಯ ರಾಜಕೀಯದಲ್ಲಿ ರಿಂಗಣಿಸಿದೆ. ಡಿಸಿಎಂ ಡಿಕೆಶಿ ಎಲ್ಲೇ ಹೋದ್ರೂ ಅಲ್ಲಿ ಆಪರೇಷನ್ ಹಸ್ತದ ಗುಲ್ಲು ಕೇಳಿಬರುತ್ತಲೇ ಇದೆ.

ಕಿಚ್ಚನ ಬರ್ತ್ ಡೇ ಪಾರ್ಟಿಯಲ್ಲೂ ‘ಆಪರೇಷನ್ ಹಸ್ತ’?
ಬಿ.ಸಿ ಪಾಟೀಲ್, ರಾಜುಗೌಡಗೂ ಡಿಕೆಶಿ ಹಾಕಿದ್ರಾ ಗಾಳ?

ನಿನ್ನೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಬರ್ತ್‌ಡೇ. ಹುಟ್ಟು ಹಬ್ಬ ಅಂದ್ಮೇಲೆ ಪಾರ್ಟಿ ಇದ್ದೇ ಇರುತ್ತೆ. ಈ ಪಾರ್ಟಿಯಲ್ಲಿ ಸುದೀಪ್ ರಾಜಕೀಯ ವಲಯದ ಆಪ್ತರು. ರಾಜಕೀಯ ಗಣ್ಯರು ಕಾಣಿಸಿಕೊಳ್ಳೋದು ಕಾಮನ್. ಆದರೆ ಆಪರೇಷನ್‌ ಹಸ್ತದ ಗುಲ್ಲೆದ್ದಿರೋ ಹೊತ್ತಲ್ಲಿ. ಸುದೀಪ್‌ ಬರ್ತ್‌ ಡೇ ಪಾರ್ಟಿಯಲ್ಲಿ ಬಿಜೆಪಿ ನಾಯಕರು ಡಿಕೆ ಜೊತೆ ಕಾಣಿಸಿಕೊಂಡಿದ್ದಾರೆ. ಕಾಂಗ್ರೆಸ್ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್ ವೇಗ ಹೆಚ್ಚಿಸಿರೋ ಹೊತ್ತಲ್ಲಿ ಮತ್ತಿಬ್ಬರು ಕೇಸರಿ ಕಲಿಗಳು ಆಪರೇಷನ್ ಹಸ್ತದ ಗಾಳಕ್ಕೆ ಬಿದ್ದಿರೋ ಶಂಕೆ ವ್ಯಕ್ತವಾಗಿದೆ. ಸುದೀಪ್ ಬರ್ತ್‌ಡೇ ವೇಳೆ ಡಿಸಿಎಂ ಡಿ.ಕೆ. ಶಿವಕುಮಾರ್ ಜೊತೆ ಮಾಜಿ ಸಚಿವ ಬಿ.ಸಿ ಪಾಟೀಲ್‌, ಮಾಜಿ ಶಾಸಕ ರಾಜೂಗೌಡ ಕಾಣಿಸಿಕೊಂಡಿರೋದು ಆಪರೇಷನ್ ಹಸ್ತದ ಮತ್ತೊಂದು ಆಯಾಮಕ್ಕೆ ನಾಂದಿ ಹಾಡಿದೆ.

ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ ಬರ್ತ್ ಡೇ ಪಾರ್ಟಿಯಲ್ಲಿ ಆಪರೇಷನ್ ಹಸ್ತ ನಡೀತಾ ಎಂಬ ಗುಲ್ಲೆದ್ದಿದೆ. ಕಿಚ್ಚನ ಬರ್ತ್‌ಡೇ ಪಾರ್ಟಿಯಲ್ಲಿ ಬಿಜೆಪಿ ಮಾಜಿ ಶಾಸಕರ ಜೊತೆಗೆ ಡಿಸಿಎಂ ಡಿಕೆಶಿವಕುಮಾರ್ ಮಾತುಕತೆ ನಡೆಸ್ತಿರೋ ದೃಶ್ಯಗಳು ಕಂಡು ಬಂದಿವೆ. ಮಾಜಿ ಸಚಿವ ಬಿ.ಸಿ ಪಾಟೀಲ್, ಮಾಜಿ ಸಚಿವ ರಾಜುಗೌಡ ಜೊತೆ ಡಿಕೆಶಿವಕುಮಾರ್ ತೀರಾ ಆತ್ಮೀಯವಾಗಿ ಮಾತುಕತೆ ನಡೆಸಿದ್ದಾರೆ ಅಂತಾ ತಿಳಿದು ಬಂದಿದೆ. ಸುಮಾರು 1 ಗಂಟೆಗೂ ಹೆಚ್ಚು ಕಾಲ ಇಬ್ಬರ ಜೊತೆ ಡಿಸಿಎಂ ಚರ್ಚೆ ನಡೆಸಿದ್ದಾರೆ ಎನ್ನಲಾಗ್ತಿದೆ. ಈ ಮೂಲಕ ಬರ್ತ್‌ ಡೇ ಪಾರ್ಟಿಯಲ್ಲಿ ‘ಆಪರೇಷನ್ ಹಸ್ತ​’​ಕ್ಕೆ ಕೈ ಡಿಕೆಶಿ ಕೈ ಹಾಕಿದ್ರಾ ಎಂಬ ಚರ್ಚೆ ಸದ್ದು ಮಾಡ್ತಿದೆ. ಅಲ್ಲದೇ ಬಿಜೆಪಿ ನಾಯಕರ ಭೇಟಿ ಮತ್ತು ಮಾತುಕತೆ ಮತ್ತಷ್ಟು ಕುತೂಹಲ ಕೆರಳಿಸಿದೆ.

ಸುದೀಪ್​ ಬರ್ತ್​ಡೇಯಲ್ಲಿ ರಾಜಕೀಯ ಮಾತಾಡಿಲ್ಲ
ಆಪರೇಷನ್ ಹಸ್ತದ ಮಾತಿಗೆ ರಾಜೂ ಗೌಡ ಸ್ಪಷ್ಟನೆ

ಇನ್ನೂ, ಸುದೀಪ್ ಬರ್ತ್‌ ಡೇ ಪಾರ್ಟಿಯಲ್ಲಿ ಡಿ.ಕೆ. ಶಿವಕುಮಾರ್ ಜೊತೆ ಕಾಣಿಸಿಕೊಂಡ ಬಗ್ಗೆ ರಾಜೂ ಗೌಡ ಸ್ಪಷ್ಟನೆ ನೀಡಿದ್ದಾರೆ. ಸುದೀಪ್​ ಬರ್ತ್​ಡೇ ಪಾರ್ಟಿಯಲ್ಲಿ ರಾಜಕೀಯ ಮಾತಾಡಿಲ್ಲ. ನಾನು ಯಾವತ್ತು ಬಿಜೆಪಿಯನ್ನ ಬಿಡೋದಿಲ್ಲ ಅಂತ ಆಪರೇಷನ್ ಹಸ್ತದ ಮಾತಿಗೆ ಟಾಂಗ್ ಕೊಟ್ಟಿದ್ದಾರೆ. ಕಾಂಗ್ರೆಸ್ ಆಪರೇಷನ್‌ ಬಗ್ಗೆ ಬಿಜೆಪಿ ನಾಯಕರು ಗುಡುಗುತ್ತಲೇ ಇದ್ದಾರೆ. ಅದರಲ್ಲೂ ಡಿಕೆ ಬ್ರದರ್ಸ್ ವಿರುದ್ಧ ವಾಕ್ಸಮರ ನಡೆಸ್ತಲೇ ಇದ್ದಾರೆ. ಇದೀಗ ಕೌರವ ಮತ್ತು ರಾಜೂ ಗೌಡ ಡಿಕೆ ಜೊತೆ ಕಾಣಿಸಿಕೊಂಡಿರೋದಕ್ಕೆ ಮಾಜಿ ಸಚಿವ ಅಶ್ವತ್ಥ್ ನಾರಾಯಣ್ ಬ್ಲಾಕ್‌ಮೇಲ್ ಬಾಂಬ್ ಸಿಡಿಸಿದ್ದಾರೆ. ಕಾಂಗ್ರೆಸ್‌ ಕೆಲವರಿಗೆ ಬ್ಲಾಕ್‌ಮೇಲ್ ಮಾಡ್ತಿದೆ ಅಂತಾ ಆರೋಪಿಸಿದ್ದಾರೆ. ಇದಕ್ಕೆ ತಿರುಗೇಟು ಕೊಟ್ಟಿರೋ ಸಚಿವ ಎಂ.ಬಿ. ಪಾಟೀಲ್‌, ಬಿಜೆಪಿ ನಾಯಕರು ಬ್ಲಾಕ್‌ಮೇಲ್ ಮಾಡೋ ಕೆಲಸ ಮಾಡಿದ್ದಾರಾ ಅಂತಾ ಪ್ರಶ್ನಿಸಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್‌ ಆಪರೇಷನ್‌ಗೆ ರಿವರ್ಸ್‌ ಆಪರೇಷನ್‌ ಮಾಡಲು ಬಿ.ಎಲ್‌. ಸಂತೋಷ್ ಕೈ ಹಾಕಿರೋ ಹಲ್‌ಚಲ್ ಎದ್ದಿತ್ತು. 40 ಕಾಂಗ್ರೆಸ್ ಶಾಸಕರ ಸಂಪರ್ಕ ಕ್ರಾಂತಿಯ ಬಗ್ಗೆ ಸುಳಿವು ಕೊಟ್ಟಿದ್ರು. ಇದೀಗ ಡಿಕೆ. ಬ್ರದರ್ಸ್‌ ತೆರೆಮರೆಯಲ್ಲೇ ಸಂತೋಷ್ ತಂತ್ರಕ್ಕೆ ಪ್ರತಿತಂತ್ರ ರೂಪಿಸ್ತಿದ್ದಾರೆ ಎಂದು ತಿಳಿದುಬಂದಿದೆ. ಅದೇನೆ ಇರಲಿ ಇತ್ತೀಚೆಗೆ ಬಿಜೆಪಿ ನಾಯಕರು ಸಿಎಂ, ಡಿಸಿಎಂ ಜೊತೆ ಹೆಚ್ಚಾಗಿ ಕಾಣಿಸಿಕೊಳ್ತಿರೋದೇಕೆ? ಇದು ರಾಜಕೀಯ ಭೇಟಿಯೋ? ಅಥವಾ ರಾಜಕೀಯ ಭವಿಷ್ಯದ ಭೇಟಿಯೋ ಇದೇ ಸದ್ಯ ಎಲ್ಲರನ್ನೂ ಕಾಡ್ತಿರೋ ಪ್ರಶ್ನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸುದೀಪ್​​ ಬರ್ತ್​ಡೇ ಪಾರ್ಟಿಯಲ್ಲಿ ರಾಜಕೀಯ; ಬಿಜೆಪಿ ಈ ನಾಯಕರಿಗೆ ಗಾಳ ಹಾಕಿದ್ರಾ ಡಿಕೆಶಿ?

https://newsfirstlive.com/wp-content/uploads/2023/09/Dk-Shivakumar-2.jpg

Load More