newsfirstkannada.com

ರಾಮೇಶ್ವರಂ ಕೆಫೆ ಬ್ಲಾಸ್ಟ್​​ ಹಿಂದಿರೋದು ಯಾರು? ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಿಕೆಶಿ ಹೇಳಿದ್ದೇನು?

Share :

Published March 1, 2024 at 8:27pm

Update March 2, 2024 at 7:59am

    ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ನಿಗೂಢ ಬಾಂಬ್​ ಬ್ಲಾಸ್ಟ್​​​!

    ಬಾಂಬ್​ ಸ್ಫೋಟಗೊಂಡ ಸ್ಥಳದಲ್ಲಿ ನಿಗೂಢ ವಸ್ತುಗಳು ಪತ್ತೆ

    ಬೆಂಗಳೂರಲ್ಲಿ ದೊಡ್ಡ ಮಟ್ಟದ ಬ್ಲಾಸ್ಟ್‌ಗೆ ಪ್ಲಾನ್‌ ನಡೆದಿತ್ತಾ?

ಬೆಂಗಳೂರು: ಶಾಂತವಾಗಿದ್ದ ಬೆಂಗಳೂರು ಬೆಚ್ಚಿ ಬಿದ್ದಿದೆ. ವೈಟ್‌ ಫೀಲ್ಡ್‌ ಬಳಿಯ ಕುಂದನಹಳ್ಳಿಯಲ್ಲಿರೋ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ಸಂಭವಿಸಿದೆ. ಈ ನಿಗೂಢ ವಸ್ತುವಿನ ಸ್ಫೋಟದಲ್ಲಿ 9 ಮಂದಿ ಗಾಯಗೊಂಡಿದ್ದಾರೆ. ಆ ಪೈಕಿ ಐವರಿಗೆ ಗಂಭೀರ ಗಾಯಗಳಾಗಿವೆ. ಸ್ಫೋಟದ ಸ್ಥಳದಲ್ಲಿ ಪತ್ತೆಯಾದ ವಸ್ತುಗಳು ಹಲವು ಅನುಮಾನಗಳನ್ನ ಹುಟ್ಟು ಹಾಕಿದೆ.

ಛಿದ್ರ ಛಿದ್ರವಾಗಿರುವ ವಸ್ತುಗಳು.. ಮುರಿದುಬಿದ್ದಿರುವ ಕಂಬಗಳು.. ಗಾಬರಿಗೊಂಡಿರುವ ಜನ.. ಇದು ಬೆಂಗಳೂರಿನ ಕುಂದನಹಳ್ಳಿಯಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ನಡೆದ ಸ್ಪೋಟದ ದೃಶ್ಯಗಳು. ಮಧ್ಯಾಹ್ನ ಊಟದ ಸಮಯದಲ್ಲಿ ಕೆಫೆಯಲ್ಲಿ ಸಂಭವಿಸಿದ ನಿಗೂಢ ಸ್ಪೋಟ ಬೆಂಗಳೂರನ್ನ ಬೆಚ್ಚಿ ಬೀಳಿಸಿದೆ. ಅನುಮಾನಗಳ ಜೊತೆಗೆ ಆತಂಕವನ್ನೂ ಹುಟ್ಟು ಹಾಕಿದೆ. ಸದ್ಯ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಡಿಸಿಎಂ ಡಿ.ಕೆ ಶಿವಕುಮಾರ್​​ ಮಾತಾಡಿದ್ದಾರೆ.

ಬ್ಯಾಗ್​ ಇಟ್ಟು ಹೋಗಿದ್ದ ವ್ಯಕ್ತಿಗಾಗಿ ತೀವ್ರ ಶೋಧ ನಡೆಸಲಾಗುತ್ತಿದೆ. ಘಟನೆಯನ್ನ ಗಂಭೀರವಾಗಿ ಪರಿಗಣಿಸಿ ಪೊಲೀಸ್ ಇಲಾಖೆ ತನಿಖೆ ನಡೆಸುತ್ತಿದೆ. ಸ್ಫೋಟದ ಬಳಿಕ ಖುದ್ದು ಡಿಸಿಪಿ ನೇತೃತ್ವದಲ್ಲೇ ಚೆಕ್ಕಿಂಗ್​ ನಡೆದಿದೆ. 35 ವರ್ಷದ ಯುವಕ ಬ್ಯಾಗ್ ಇಟ್ಟು ಹೋಗಿದ್ದಾನೆ. ಸುಮಾರು ಎಂಟು ತಂಡಗಳಿಂದ ಆರೋಪಿ ಪತ್ತೆಗಾಗಿ ಕಾರ್ಯಾಚರಣೆ ನಡೆಯುತ್ತಿದೆ. ಆರೋಪಿ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು ಡಿಕೆಶಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಮೇಶ್ವರಂ ಕೆಫೆ ಬ್ಲಾಸ್ಟ್​​ ಹಿಂದಿರೋದು ಯಾರು? ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಿಕೆಶಿ ಹೇಳಿದ್ದೇನು?

https://newsfirstlive.com/wp-content/uploads/2023/11/DK-Shivakumar.jpg

Load More