/newsfirstlive-kannada/media/post_attachments/wp-content/uploads/2024/04/Dk-Shivakumar-On-HDK-1.jpg)
ರಾಮನಗರ: ಲೋಕಸಭಾ ಚುನಾವಣೆಯ ಅಬ್ಬರ ಮುಗಿಯುತ್ತಿದ್ದಂತೆ ರಾಜ್ಯದಲ್ಲಿ ಮತ್ತೊಂದು ರೋಚಕ ರಾಜಕೀಯ ಶುರುವಾಗಿದೆ. ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರು ರಾಜೀನಾಮೆ ನೀಡಿದ ಬಳಿಕ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಉಪಚುನಾವಣೆಯ ಅಖಾಡಕ್ಕೆ ಸಜ್ಜಾಗಿದೆ. ಖುದ್ದು ಡಿಸಿಎಂ ಡಿ.ಕೆ ಶಿವಕುಮಾರ್ ಅವರೇ ಇಂದು ಚನ್ನಪಟ್ಟಣಕ್ಕೆ ಭೇಟಿ ನೀಡಿದ್ದು, ಈ ಕ್ಷೇತ್ರದ ಜನರ ಋಣ ತೀರಿಸಲು ನಾನು ಇಲ್ಲಿಗೆ ಬಂದಿದ್ದೇನೆ ಎಂದಿದ್ದಾರೆ.
ರಾಮನಗರದಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್ ಅವರು, ನಾನು ಚನ್ನಪಟ್ಟಣದಲ್ಲಿ ಬದಲಾವಣೆ ತರಬೇಕು ಅಂತ ಬಂದಿದ್ದೇನೆ. ಬೆಂಗಳೂರಿನ ರೀತಿಯಲ್ಲಿ ರಾಮನಗರ ಅಭಿವೃದ್ಧಿ ಆಗಬೇಕು. ಇಲ್ಲಿಂದಲೇ ನನ್ನ ರಾಜಕೀಯ ಹೊಸ ಅಧ್ಯಾಯ ಆರಂಭಿಸುವೆ ಎಂಬ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: CM ಕನಸು ನನಸಿಗೆ ಡಿಕೆಶಿ ನಡೆ ತೀವ್ರ ಕುತೂಹಲ.. ಚನ್ನಪಟ್ಟಣ ವಿಚಾರದಲ್ಲಿ ಕಾಂಗ್ರೆಸ್ ಗೇಮ್ ಚೇಂಜ್..!
ಋಣ ತೀರಿಸೋ ಮಾತಾಡಿದ್ಯಾಕೆ?
ಚನ್ನಪಟ್ಟಣ ಉಪಚುನಾವಣೆಯಲ್ಲಿ ಮಾಜಿ ಸಂಸದ ಡಿಕೆ ಸುರೇಶ್ ಅವರು ಸ್ಪರ್ಧಿಸಿದ್ರೆ ಮತ್ತೆ ಸೋಲಾಗೋ ಭೀತಿ ಎದುರಾಗಿದೆ. ಚುನಾವಣೆಯಲ್ಲಿ ಸಹೋದರ ಮತ್ತೆ ಸೋತ್ರೆ ಡಿಸಿಎಂ ಡಿ.ಕೆ ಶಿವಕುಮಾರ್ ಅವರಿಗೂ ಮತ್ತೆ ಮುಖಭಂಗ ಎದುರಾಗುತ್ತೆ. ಹೀಗಾಗಿ ಚನ್ನಪಟ್ಟಣದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಬೈಎಲೆಕ್ಷನ್ ಹೊಸ್ತಿಲಲ್ಲಿ ಹೊಸ ದಾಳ ಉರುಳಿಸಿದ್ದಾರೆ.
ಕಾರಣ 01: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಡಾ.C.N ಮಂಜುನಾಥ್ ವಿರುದ್ಧ ಸೋಲು
ಕಾರಣ 02: ಈಗಾಗಲೇ ಡಿ.ಕೆ. ಸುರೇಶ್ ಸೋಲಿನಿಂದಾಗಿ ಮುಖಭಂಗ ಅನುಭವಿಸಿರುವ ಕಾಂಗ್ರೆಸ್
ಕಾರಣ 03: ಬಿಜೆಪಿ, ಜೆಡಿಎಸ್ ದೋಸ್ತಿ ಈಗಲೂ ಮುಂದುವರಿಯುತ್ತಿರುವುದರಿಂದ ಸಂಕಷ್ಟ ಸಾಧ್ಯತೆ
ಕಾರಣ 04: ಮತ್ತೊಮ್ಮೆ ಉಪಚುನಾವಣೆಯಲ್ಲಿ ಸೋಲನುಭವಿಸಿದರೆ ಭಾರೀ ಮುಖಭಂಗವಾಗುತ್ತೆ
ಕಾರಣ 05: ಸಾತನೂರು-ಚನ್ನಪಟ್ಟಣದ ಕ್ಷೇತ್ರದ ಊರುಗಳು ಅರ್ಧ ಚನ್ನಪಟ್ಟಣಕ್ಕೆ, ಅರ್ಧ ಕನಕಪುರಕ್ಕೆ
ಕಾರಣ 06: ಡಿ.ಕೆ. ಶಿವಕುಮಾರ್ ಸ್ಪರ್ಧೆ ಮಾಡಿದರೆ ಇದರಿಂದ ಗೆಲುವಿಗೆ ಅನುಕೂಲ ಎಂಬ ಲೆಕ್ಕಾಚಾರ
ಕಾರಣ 07: ತಾವೇ ಸ್ಪರ್ಧಿಸಿ ಗೆಲ್ಲೋ ಮೂಲಕ ಹೆಚ್.ಡಿ. ಕುಮಾರಸ್ವಾಮಿ, ಸಿಪಿವೈಗೆ ಶಾಕ್ ಕೊಡಬಹುದು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ