ಮನೆ ಕಟ್ಟಬೇಕಾದ್ರೆ ಬೇಸ್​ಮೆಂಟ್ ಮಾಡಬಾರದು- ಡಿಸಿಎಂ ಡಿ.ಕೆ ಶಿವಕುಮಾರ್

author-image
Bheemappa
Updated On
ಮನೆ ಕಟ್ಟಬೇಕಾದ್ರೆ ಬೇಸ್​ಮೆಂಟ್ ಮಾಡಬಾರದು- ಡಿಸಿಎಂ ಡಿ.ಕೆ ಶಿವಕುಮಾರ್
Advertisment
  • ಬೇಸ್​ಮೆಂಟ್​ ಇಲ್ಲಂದ್ರೆ ಕಾರು ಪಾರ್ಕಿಂಗ್ ಮಾಡೋದು ಎಲ್ಲಿ?
  • ಹೊಸ ಕಾನೂನು ಜಾರಿ ಮಾಡುವುದಾಗಿ ಹೇಳಿರುವ ಡಿಸಿಎಂ
  • ಟೌನ್​ ಪ್ಲಾನಿಂಗ್​ನಲ್ಲಿ ಹೊಸ ಕಾನೂನು- ಡಿ.ಕೆ ಶಿವಕುಮಾರ್

ಬೆಂಗಳೂರು: ಉದ್ಯಾನನಗರಿಯ ಮಳೆಹಾನಿ ಪ್ರದೇಶಗಳಿಗೆ ಬೆಂಗಳೂರು ಉಸ್ತುವಾರಿ ಸಚಿವ ಡಿ.ಕೆ ಶಿವಕುಮಾರ್ ಅವರು ಭೇಟಿ ನೀಡಿದರು. ಇದೇ ವೇಳೆ ಬಿಟಿಎಂ ಲೇಔಟ್​ ಮಧುವನ ಅಪಾರ್ಟ್​ಮೆಂಟ್​ನಲ್ಲಿ ವಿದ್ಯುತ್ ಶಾಕ್​ನಿಂದ ಮೃತಪಟ್ಟವರ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಮಾಧ್ಯಮದವರ ಜೊತೆ ಮಾತನಾಡಿದ ಡಿ.ಕೆ ಶಿವಕುಮಾರ್ ಅವರು, ಬೆಂಗಳೂರಿನ ಕೆಲವೆಡೆ ಕೆರೆಗಳ ಪಕ್ಕ, ತಗ್ಗು ಪ್ರದೇಶಗಳಲ್ಲಿ ಮನೆಗಳನ್ನು ಕಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಇಂತಹ ಪ್ರದೇಶಗಳಲ್ಲಿ ಬೇಸ್​ಮೆಂಟ್ ಮಾಡಲು ಅವಕಾಶ ಕೊಡಲ್ಲ. ಇದಕ್ಕೆ ಒಂದು ಕಾನೂನೇ ತರುತ್ತೇನೆ. ಬಿಲ್ಡಿಂಗ್​ಗಳಿಗೆ ಬೇಸ್​ಮೆಂಟ್​ ಮಾಡದೇ ಕಾರು ಪಾರ್ಕಿಂಗ್​ ಎಲ್ಲ ಗ್ರೌಂಡ್​ ಪ್ಲೋರ್​ನಲ್ಲಿ ಮಾಡಿಕೊಳ್ಳಬೇಕು. ಮನೆಗಳೆಲ್ಲಾ ಮೇಲೆ ಇರಲಿ. ಟೌನ್​ ಪ್ಲಾನಿಂಗ್​ನಲ್ಲಿ ಹೊಸ ಕಾನೂನು ಅನ್ನು ತರುತ್ತೇನೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.

ಇದನ್ನೂ ಓದಿ:ಸ್ಪಿನ್ನರ್ ದಿಗ್ವೇಶ್ ರಾಥಿಗೆ ಬಿಗ್​ ಶಾಕ್; ಅಭಿಷೇಕ್ ಜತೆ ವಾಗ್ವಾದ.. IPL ಮ್ಯಾಚ್​ನಿಂದ ಅಮಾನತು

publive-image

ಮೃತ ಮನೋಹರ ಕಾಮತ್ ಕುಟುಂಬಕ್ಕೆ​ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗಿದೆ. ಮೃತ ಬಾಲಕನ ಕುಟುಂಬಕ್ಕೆ ಪರಿಹಾರ ನೀಡಲಾಗುವುದು. ಕೆಲವೆಡೆ ಎಮ್ಮೆ, ದನಗಳು ಕೂಡ ಸಾವನ್ನಪ್ಪಿವೆ. ಅವುಗಳ ಮಾಲೀಕರಿಗೂ ಹಣ ನೀಡತ್ತೇವೆ ಎಂದು ಹೇಳಿದ್ದಾರೆ.

ನಗರದಲ್ಲಿ ನೀರು ತುಂಬುವ ಸ್ಥಳಗಳನ್ನು ಈಗಾಗಲೇ ಗಮನಿಸಲಾಗಿದೆ. ಮಳೆ ಬಂದಾಗ ಪದೇ ಪದೇ ಸಮಸ್ಯೆ ಆಗುತ್ತಿವೆ. 40 ರಿಂದ 44 ಕಡೆ ಇಂತಹ ಪರಿಸ್ಥಿತಿ ಇದೆ. ರೆಸಿಡೆನ್ಸಿಗಳಿಗೂ ಸಮಸ್ಯೆ ಆಗಿದೆ. ಅವರನ್ನು ಶಿಫ್ಟ್ ಮಾಡಲಾಗುತ್ತಿದೆ. ಒಟ್ಟು 162 ಜಾಗ ಗುರುತಿಸಿದ್ದೇವೆ ಮೂರ್ನಾಲ್ಕು ಕಡೆ ಮಾತ್ರವೇ ಇಂತಹ ಪರಿಸ್ಥಿತಿ ಆಗಿದೆ. ಮಳೆಯಿಂದ ಏನೆಲ್ಲಾ ತೊಂದರೆ ಅಗಿದೆ ನಿಯಮದ ಪ್ರಕಾರ ಪರಿಹಾರ ನೀಡುತ್ತೇವೆ ಎಂದು ಹೇಳಿದ್ದಾರೆ.

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment