DK ಶಿವಕುಮಾರ್ ಶಾಲು ಸಂಕಷ್ಟ.. ‘ಹೊಸ ಅಸ್ತ್ರ’ ಪ್ರಯೋಗಿಸಿದ ಬಿಜೆಪಿ, ಏನದು..

author-image
Ganesh
Updated On
DK ಶಿವಕುಮಾರ್ ಶಾಲು ಸಂಕಷ್ಟ.. ‘ಹೊಸ ಅಸ್ತ್ರ’ ಪ್ರಯೋಗಿಸಿದ  ಬಿಜೆಪಿ, ಏನದು..
Advertisment
  • ಉಪಮುಖ್ಯಮಂತ್ರಿ DKS ವಿರುದ್ಧ ಬಿಜೆಪಿ ಹೊಸ ಅಸ್ತ್ರ
  • ಡಿ.ಕೆ.ಶಿವಕುಮಾರ್ ಹಾಕಿದ್ದ ಶಾಲಿನ ಬೆಲೆ ಎಷ್ಟು ಗೊತ್ತಾ?
  • ತೈಲ ಬೆಲೆ ಏರಿಕೆ ವಿಚಾರದಲ್ಲಿ ಸಿಎಂ ವಿರುದ್ಧ ಬಿಜೆಪಿ ಕಿಡಿ

ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಮಾಡಿ ರಾಜ್ಯ ಸರ್ಕಾರ ಈಗಾಗಲೇ ಜನರ ಕೆಂಗಣ್ಣಿಗೆ ಮಾತ್ರವಲ್ಲದೆ ವಿಪಕ್ಷಗಳ ಆಕ್ರೋಶಕ್ಕೂ ಕಾರಣವಾಗಿದೆ. ತೈಲ ಬೆಲೆ ಏರಿಕೆ ವಿರೊಧಿಸಿ ಬಿಜೆಪಿ ಪ್ರತಿಭಟನೆ ಮಾಡಿ ವಿರೋಧ ವ್ಯಕ್ತಪಡಿಸಿತ್ತು. ಈ ಬೆನ್ನಲ್ಲೇ ಡಿಸಿಎಂ ಡಿಕೆಶಿ ವಿರುದ್ಧ ಮತ್ತೊಂದು ರೀತಿಯ ಸಾಮಾಜಿಕ ಜಾಲತಾಣದಲ್ಲಿ ವಾರ್ ಶುರು ಮಾಡಿದ್ದಾರೆ.

ರಾಜ್ಯ ಸರ್ಕಾರ ಇತ್ತೀಚೆಗಷ್ಟೇ ತೈಲ ಬೆಲೆ ಏರಿಕೆ ಮಾಡಿ ಜನರಿಗೆ ಅದರಲ್ಲೂ ವಾಹನ ಸವಾರರಿಗೆ ಶಾಕ್ ನೀಡಿತ್ತು. ಪೆಟ್ರೋಲ್​ 3 ರೂಪಾಯಿ ಹಾಗೂ ಡೀಸೆಲ್​ಗೆ ಮೂರುವರೆ ರೂಪಾಯಿ ಏರಿಕೆ ಮಾಡಿತ್ತು. ಇದು ಜನಸಾಮಾನ್ಯರ ಭಾರೀ ಆಕ್ರೋಶಕ್ಕೂ ಕಾರಣವಾಗಿತ್ತು. ಅಷ್ಟೆ ಏಕೆ ರಾಜ್ಯ ಕೇಸರಿ ಪಾಳಯ ಬೀದಿಗಿಳಿದು ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿತ್ತು.

ಇದನ್ನೂ ಓದಿ:ಹಿರಿಮಗ, ಕಿರಿಮಗ ಇಬ್ಬರೂ ಜೈಲಲ್ಲಿ.. ಸಂಕಷ್ಟಕ್ಕೆ ಸಿಲುಕಿದ ರೇವಣ್ಣ.. ಇಂದು ನಡೆಯಲಿದೆ ಮಹತ್ವದ ಬೆಳವಣಿಗೆ

ಈ ಬೆನ್ನಲ್ಲೇ ಈ ಕುರಿತು ಪ್ರತಿಕ್ರಿಯಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡಿದ್ದರು. ತೈಲ ಬೆಲೆ ಏರಿಕೆ ವಿಚಾರದಲ್ಲಿ ಸಿಎಂ ವಿರುದ್ಧ ಬಿಜೆಪಿ ಕಿಡಿ ಕಾರಿದ್ರೆ ಈಗ ಡಿಸಿಎಂ ಡಿಕೆ ಶಿವಕುಮಾರಗೆ ಮತ್ತೊಂದು ವಿಚಾರದಲ್ಲಿ ವಾಗ್ದಾಳಿ ನಡೆಸಿದೆ.

‘ಕುರುಡು ಕಾಂಚಾಣ ಕುಣಿಯುವುದಕ್ಕೆ ಡಿಕೆಶಿ ಅಂಧಾ ದರ್ಬಾರ್ ಸಾಕ್ಷಿ’
ಕುರುಡು ಕಾಂಚಾಣ ಕುಣಿಯುತ್ತದೆ ಅನ್ನೋದಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ನಡೆಸುತ್ತಿರುವ ಅಂಧಾ ದರ್ಬಾರ್ ಸಾಕ್ಷಿಯಾಗಿದೆ ಅಂತ ಬಿಜೆಪಿ ಟ್ವೀಟ್​ ಮೂಲಕ ವಾಗ್ದಾಳಿ ನಡೆಸಿದೆ. ‘ನಮ್ಮ ಕಾಸ್ಲಿ ಕುಮಾರ್ ಧರಿಸಿರುವ ಶಾಲಿನ ಬೆಲೆ ಬರೋಬ್ಬರಿ 59,500 ರೂಪಾಯಿ. ಮೊದಲೇ ಬೆಲೆ ಏರಿಕೆಯಿಂದ ಜನ ಒಂದು ಹೊತ್ತಿನ ಊಟಕ್ಕೂ ತತ್ವಾರ ಅನುಭವಿಸುತ್ತಿದ್ದಾರೆ. ಆದರೆ ಜನಪ್ರತಿನಿಧಿಗಳು ಮಾತ್ರ ಜನರ ತೆರಿಗೆ ದುಡ್ಡಿನಲ್ಲಿ ಶೋಕಿ ಮಾಡುತ್ತಿರುವುದು ನಿಜಕ್ಕೂ ದುರಂತ ಎಂದು ಕೇಸರಿ ಪಾಳಯ ಕಿಡಿಕಾರಿದೆ.

ಇದನ್ನೂ ಓದಿ:ಐದು ಪ್ರಮುಖ ಉದ್ದೇಶ.. ಮೋದಿ 3.O ಸರ್ಕಾರಕ್ಕೆ ಮೊದಲ ಅಧಿವೇಶನದ ಸವಾಲು..

ಅವರು ಇವರು ಅಂತಲ್ಲ.. ಜನಪ್ರತಿನಿಧಿಗಳು ಯಾರೇ ಆಗಲಿ ಅವರು ಜನಸಾಮಾನ್ಯರ ಸಮಸ್ಯೆಗಳಿಗೆ ಕೇರೇ ಮಾಡಲ್ಲ. ರೈತರು ಬರಗಾಲದಿಂದ ಕಷ್ಟ ಪಡಲಿ, ಪ್ರವಾಹದಿಂದ ರಾಜ್ಯ ಅಸ್ತವ್ಯಸ್ತವಾಗಲಿ ಈ ಬಗ್ಗೆ ಜನಪ್ರತಿನಿಧಿಗಳು ತಲೆಕೆಡಿಸಿಕೊಳ್ಳಲ್ಲ. ಅದ್ರಲ್ಲಿ ಪೆಟ್ರೋಲ್-ಡೀಸೆಲ್ ಮಾತ್ರವಲ್ಲ ತರಕಾರಿ ಬೆಲೆ ಹೆಚ್ಚಾದ್ರೂ ಅವರಿಗೆ ಯಾವುದೇ ತಲೆ ನೋವಿಲ್ಲ. ಈ ಬಹುತೇಕ ಜನಪ್ರತಿನಿಧಿಗಳಿಗೆ ಜನರ ತೆರಿಗೆ ದುಡ್ಡಿನಲ್ಲಿ ಶೋಕಿ ಮಾಡುತ್ತಿರುವುದು ನಿಜಕ್ಕೂ ದುರಂತ ಎಂದು ಜನ ಮಾತಾಡಿಕೊಳ್ತಿದ್ದಾರೆ.

ಇದನ್ನೂ ಓದಿ:‘ಮಕ್ಕಳಿಗೆ ಬೈಕ್ ಕೊಡ್ತಿದ್ದೀರಾ..’ ಪೋಷಕರೇ ಇನ್ನಾದರೂ ಪಾಠ ಕಲೀರಿ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment