/newsfirstlive-kannada/media/post_attachments/wp-content/uploads/2024/08/Dk-Shivakumar-With-Wife.jpg)
ಶ್ರೀನಗರ: ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಕುಟುಂಬ ಸಮೇತ ಜಮ್ಮು ಕಾಶ್ಮೀರದಲ್ಲಿರೋ ಶ್ರೀ ವೈಷ್ಣೋದೇವಿ ಮಂದಿರಕ್ಕೆ ಭೇಟಿ ನೀಡಿದ್ದಾರೆ. ಪತ್ನಿ ಉಷಾ ಅವರೊಂದಿಗೆ ವೈಷ್ಣೋದೇವಿ ದೇಗುಲಕ್ಕೆ ಭೇಟಿ ನೀಡಿದ ಡಿ.ಕೆ.ಶಿವಕುಮಾರ್, ಶಕ್ತಿದೇವಿಯ ಆಶೀರ್ವಾದ ಪಡೆದಿದ್ದಾರೆ. ಸರ್ಕಾರ ಹಾಗೂ ತಮಗೆ ವೈಯಕ್ತಿಕವಾಗಿ ಏನಾದರೂ ಆಪತ್ತು ಬಂದಾಗಲೆಲ್ಲಾ ಡಿ.ಕೆ. ಶಿವಕುಮಾರ್ ಈ ಶಕ್ತಿದೇವತೆಯ ಮೊರೆ ಹೋಗುತ್ತಾರೆ.
ಇದನ್ನೂ ಓದಿ:ಕಾಂಗ್ರೆಸ್ನ 50 ಶಾಸಕರ ಖರೀದಿಗೆ ಒಬ್ಬೊಬ್ಬರಿಗೆ 100 ಕೋಟಿ ಆಫರ್ -ಆಪರೇಷನ್ ಕಮಲದ ರಹಸ್ಯ ಬಿಚ್ಚಿಟ್ಟ ನಾಯಕ..!
ಸದ್ಯ ರಾಜ್ಯ ರಾಜಕಾರಣದಲ್ಲಿಯೂ ಕೂಡ ಸಣ್ಣದೊಂದು ಬಿರುಗಾಳಿಯೆದ್ದಿದೆ. ಇದೇ ವೇಳೆ ವೈಷ್ಣೋದೇವಿ ದೇವಾಲಯಕ್ಕೆ ಭೇಟಿ ನೀಡಿರುವ ಡಿಸಿಎಂ, ಆಪತ್ಕಾಲದಿಂದ ಸರ್ಕಾರ ಸರಳವಾಗಿ ಹೊರಬರುವಂತೆ ವಿಶೇಷ ಪೂಜೆ ಸಲ್ಲಿಸಿದ್ರಾ ಅನ್ನೋ ಪ್ರಶ್ನೆಗಳು ಹುಟ್ಟಿವೆ.
ಡಿ.ಕೆ. ಶಿವಕುಮಾರ್ ಇದೇ ಮೊದಲ ಬಾರಿಯೇನು ವೈಷ್ಣೋದೇವಿಯ ಮಂದಿರಕ್ಕೆ ಹೋಗಿಲ್ಲ. ಈ ಹಿಂದೆ ಹಲವು ಭಾರಿ ಈ ಶಕ್ತಿಪೀಠಕ್ಕೆ ಭೇಟಿ ಕೊಟ್ಟು ಆಶೀರ್ವಾದ ಪಡೆದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ