ರಾಜಕೀಯ ಸಂಕ್ರಾಂತಿ; ಇಂದು ದೆಹಲಿಗೆ ಡಿ.ಕೆ ಶಿವಕುಮಾರ್ ಭೇಟಿ.. ಕಾರಣ ಇದೆನಾ?

author-image
Bheemappa
Updated On
ರಾಜಕೀಯ ಸಂಕ್ರಾಂತಿ; ಇಂದು ದೆಹಲಿಗೆ ಡಿ.ಕೆ ಶಿವಕುಮಾರ್ ಭೇಟಿ.. ಕಾರಣ ಇದೆನಾ?
Advertisment
  • ಡಿ.ಕೆ ಶಿವಕುಮಾರ್ ವಿದೇಶಕ್ಕೆ ಹೋಗಿದ್ದಾಗ ಸಭೆ ಮಾಡಿದ್ದು ಯಾಕೆ.?
  • ಪಕ್ಷದ ಕೆಲ ನಾಯಕರು ಅನವಶ್ಯಕ ಗೊಂದಲ ಉಂಟು ಮಾಡ್ತಿದ್ದಾರಾ?
  • ಸಚಿವರ ನಿವಾಸದಲ್ಲಿ CM ಸಿದ್ದರಾಮಯ್ಯ ರಹಸ್ಯ ಡಿನ್ನರ್ ಮೀಟಿಂಗ್

ಕಾಂಗ್ರೆಸ್​ನಲ್ಲಿ ಸಂಕ್ರಾಂತಿ ಹಬ್ಬಕ್ಕೆ ಅಥವಾ ಆನಂತರದಲ್ಲಿ ಸಮ್​ ಕ್ರಾಂತಿ ಆಗುತ್ತೆ ಅನ್ನೋ ಗುಸು ಗುಸು ಪಿಸು ಪಿಸು ರಾಜಕೀಯ ವಲಯದಲ್ಲಿ ಚರ್ಚೆಯಲ್ಲಿವೆ. ಈ ನಡುವೆ ಮೊನ್ನೆಯಷ್ಟೇ ಸಿಎಂ ಸಿದ್ದರಾಮಯ್ಯ ಆಪ್ತರು ಡಿ.ಕೆ ಶಿವಕುಮಾರ್ ಅನುಪಸ್ಥಿತಿಯಲ್ಲಿ ಮಾಡಿದ ಔತಣಕೂಟದ ರಾಜಕೀಯ ಭಾರೀ ಸಂಚಲನ ಮೂಡಿಸಿತ್ತು. ಇದೀಗ ಇದು ಮತ್ತೊಂದು ಲೆವೆಲ್​ಗೆ ಹೋಗುವ ಸಾಧ್ಯತೆ ದಟ್ಟವಾಗಿದೆ.

publive-image

ರಾಜಕೀಯ ನಾಯಕರು ಅಂದ್ರೆ ಸಭೆ-ಸಮಾರಂಭ, ಔತಣಕೂಟಗಳಿಗೆ ಹೋಗೋದೆಲ್ಲಾ ಕಾಮನ್. ಆದ್ರೆ ಮೊನ್ನೆ ಸಚಿವ ಸತೀಶ್​ ಜಾರಕಿಹೊಳಿ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ ಆಪ್ತರು ಡಿನ್ನರ್ ಮೀಟಿಂಗ್ ಮಾಡಿದ್ದರು. ಇದು ರಾಜ್ಯ ರಾಜಕಾರಣದಲ್ಲಿ ಭಾರೀ ಅಲ್ಲೋಲ ಕಲ್ಲೋಲಕ್ಕೆ ಕಾರಣವಾಗಿತ್ತು. ಅದರಲ್ಲೂ ಡಿಸಿಎಂ ಡಿಕೆ ಶಿವಕುಮಾರ್‌ ಫಾರಿನ್ ಟ್ರಿಪ್‌ನಲ್ಲಿರುವ ಹೊತ್ತಲ್ಲೇ ಸಿದ್ದರಾಮಯ್ಯ ಪಡೆ ಆ್ಯಕ್ಟಿವ್ ಆಗಿತ್ತು. ಸಂಪುಟದ ವಿಚಾರವೋ? ಕೆಪಿಸಿಸಿ ಪಟ್ಟಕ್ಕೋ? ಸಿಎಂ ಬಣ ಡಿನ್ನರ್ ನೆಪದಲ್ಲಿ ಒಂದೆಡೆ ಸೇರಿದ್ದು ಭಾರೀ ಕುತೂಹಲಕ್ಕೆ ಕಾರಣವಾಗಿತ್ತು. ಆದ್ರೆ ಈ ಡಿನ್ನರ್ ಪಾಲಿಟಿಕ್ಸ್​ಗೆ ಡಿ.ಕೆ ಶಿವಕುಮಾರ್ ಕೌಂಟರ್ ಕೊಡುವ ಧಾವಂತದಲ್ಲಿದ್ದಾರೆ ಎನ್ನಲಾಗುತ್ತಿದೆ.

ಡಿನ್ನರ್ ಮೀಟಿಂಗ್ ಬೆನ್ನಲ್ಲೆ ಡಿ.ಕೆ ಶಿವಕುಮಾರ್ ದೆಹಲಿಗೆ?

ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ-ಡಿ.ಕೆ ಶಿವಕುಮಾರ್ ಮಧ್ಯೆ ಅಧಿಕಾರದ ಪೈಪೋಟಿ ಇದ್ದೇ ಇದೆ. ಈ ಪವರ್ ಫೈಟ್‌ ಕೆಲ ಸಚಿವರ ಜೊತೆಗೂ ನಡೀತಿದೆ. ಕೆಪಿಸಿಸಿ ಅಧ್ಯಕ್ಷಗಿರಿಗಾಗಿ ಲಾಬಿಯು ಜೋರಾಗಿದೆ. ಡಿ.​ 31 ರಂದು ಮುಂಜಾನೆ ಕುಟುಂಬ ಸದಸ್ಯರ ಜೊತೆ ಡಿಸಿಎಂ ಡಿ.ಕೆ ಶಿವಕುಮಾರ್ ಟರ್ಕಿ ಪ್ರವಾಸ ಕೈಗೊಂಡಿದ್ದ ಸಮಯದಲ್ಲೇ ಸತೀಶ್ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವರ ರಹಸ್ಯ ಸಭೆ ನಡೆದಿತ್ತು. ಸದ್ಯ ಸಚಿವರ ಡಿನ್ನರ್ ಮೀಟಿಂಗ್ ಬೆನ್ನಲ್ಲೆ ಇಂದು ಡಿಸಿಎಂ ಡಿ.ಕೆ ಶಿವಕುಮಾರ್ ಟರ್ಕಿ ಪ್ರವಾಸದಿಂದ ದೆಹಲಿಗೆ ವಾಪಸ್ಸಾಗಲಿದ್ದಾರೆ. ಚುನಾವಣಾ ಪ್ರಚಾರದ ನೆಪದಲ್ಲಿ ದೆಹಲಿಗೆ ತೆರಳಿ ‌ಪಕ್ಷದ ವರಿಷ್ಠರನ್ನ ಭೇಟಿಯಾಗಲಿದ್ದಾರೆ. ಸದ್ಯದ ರಾಜ್ಯ ರಾಜಕೀಯ ವಿದ್ಯಮಾನಗಳನ್ನ ವರಿಷ್ಠರ ಗಮನಕ್ಕೆ ತಂದು ಔತಣಕೂಟದ ಬಗ್ಗೆ ಹೈಕಮಾಂಡ್​ಗೆ ದೂರು ನೀಡುವ ಸಾಧ್ಯತೆ ಇದೆ.

ಡಿ.ಕೆ ಶಿವಕುಮಾರ್ ಹೈಕಮಾಂಡ್​ಗೆ ದೂರು ನೀಡುತ್ತಾರಾ?

  • ಸಂಕ್ರಾಂತಿ ನಂತರ ಪಕ್ಷ, ಸರ್ಕಾರದಲ್ಲಿ ಬದಲಾವಣೆಗೆ ಮುಂದಾದ್ರೆ ಸ್ವಾಗತ
  • ಸಚಿವರ ಸಭೆಯ ಬಗ್ಗೆ ಹೈಕಮಾಂಡ್​ಗೆ ಮಾಹಿತಿ ನೀಡಲು ಮುಂದು
  • ಪಕ್ಷದ ಕೆಲ ನಾಯಕರು ಅನವಶ್ಯಕ ಗೊಂದಲ ಉಂಟು ಮಾಡ್ತಿದ್ದಾರೆ
  • ಜವಾಬ್ದಾರಿ ಸ್ಥಾನದಲ್ಲಿದ್ದವರ ನಡೆಯಿಂದ ಪಕ್ಷ, ಸರ್ಕಾರದ ಮೇಲೆ ಪರಿಣಾಮ
  • ಹೈಕಮಾಂಡ್ ನಾಯಕರು ಶೀಘ್ರ ಗಮನ ಹರಿಸುವಂತೆಯೂ ಮನವಿ
  • ಕೆಪಿಸಿಸಿ ಅಧ್ಯಕ್ಷ ಸ್ಥಾನದ ವಿಚಾರವಾಗಿ ಹೈಕಮಾಂಡ್ ಆದೇಶಕ್ಕೆ ಬದ್ಧ

ಇದನ್ನೂ ಓದಿ:ಎಲೆಕ್ಷನ್​​ನಲ್ಲಿ ಗೆದ್ರೆ ಪ್ರಿಯಾಂಕ ಗಾಂಧಿ ಕೆನ್ನೆಯಂತ ರಸ್ತೆ ನಿರ್ಮಾಣ.. BJP ಅಭ್ಯರ್ಥಿ ಹೇಳಿಕೆಗೆ ಆಕ್ರೋಶ

publive-image

ಸಚಿವ ಸತೀಶ್ ನಿವಾಸದಲ್ಲಿ ನಡೆದ ಸಿಎಂ ಸಿದ್ದರಾಮಯ್ಯ ಆಪ್ತರ ಡಿನ್ನರ್ ಪಾಲಿಟಿಕ್ಸ್​ ಕಾಂಗ್ರೆಸ್ ಪಾಳಯದಲ್ಲಿ ಸಂಚಲನವನ್ನೇ ಸೃಷ್ಟಿಸಿದೆ. ತನ್ನ ಅನುಪಸ್ಥಿತಿಯಲ್ಲಿ ಸಭೆ ಮಾಡಿದ್ದಕ್ಕೆ ಡಿ.ಕೆ ಶಿವಕುಮಾರ್ ಸಹಜವಾಗೇ ಗರಂ ಆಗಿರುವ ಸಾಧ್ಯತೆ ಇದೆ. ಹೀಗಾಗಿ ಇಂದು ಹೈಕಮಾಂಡ್​ಗೆ ಈ ಬಗ್ಗೆ ದೂರು ನೀಡುವ ಎಲ್ಲಾ ಸಂಭವ ದಟ್ಟವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment