/newsfirstlive-kannada/media/post_attachments/wp-content/uploads/2025/01/DK_SHIVAKUMAR_DCM.jpg)
ಕಾಂಗ್ರೆಸ್​ನಲ್ಲಿ ಡಿನ್ನರ್​ ಪಾಲಿಟಿಕ್ಸ್​, ಕೆಪಿಸಿಸಿ ಅಧ್ಯಕ್ಷ ಸ್ಥಾನದ ಚರ್ಚೆ ಬಿಕ್ಕಟ್ಟಿನ ವಾತಾವರಣ ಸೃಷ್ಟಿಸಿದೆ. ಈ ಡಿನ್ನರ್​​​ ಕೂಟಗಳಿಗೆ ಹೈಕಮಾಂಡ್​​​ ಮೂಲಕ ಬ್ರೇಕ್​​ ಹಾಕಿಸುವಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಸಕ್ಸಸ್​​ ಏನೋ ಆಗಿದ್ದಾರೆ. ಈ ಬೆನ್ನಲ್ಲೆ ಟೆಂಪಲ್​​​ ಈ ರನ್​​ ಅಚ್ಚರಿಗೆ ಕಾರಣ ಆಗಿದೆ.
ಕಾಂಗ್ರೆಸ್​ನಲ್ಲಿ ವಾತಾವರಣ ಮಜವಾಗಿದೆ. ಪವರ್​​ ಗೇಮ್​ಗೆ ನಡೆಯುತ್ತಿರುವ ಹೈವೋಲ್ಟೇಜ್​​ ಪಾಲಿಟಿಕ್ಸ್​​ಗೆ ಸದ್ಯಕ್ಕೆ ಹೈಕಮಾಂಡ್​ ಬ್ರೇಕ್​​ ಹಾಕಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ, ಅಧಿಕಾರ ಹಸ್ತಾಂತರ, ಡಿನ್ನರ್ ಪಾರ್ಟಿ ಪಾಲಿಟಿಕ್ಸ್ ನಡುವೆ ಡಿಸಿಎಂ ಡಿ.ಕೆ ಶಿವಕುಮಾರ್​ ದೇವರ ಮೊರೆ ಹೋಗುತ್ತಿದ್ದಾರೆ. ತಮಿಳುನಾಡಿನ ಎರಡು ಪ್ರಸಿದ್ಧ ದೇವಸ್ಥಾನಕ್ಕೆ ಡಿ.ಕೆ ಶಿವಕುಮಾರ್ ಭೇಟಿ ನೀಡುತ್ತಿದ್ದಾರೆ.
/newsfirstlive-kannada/media/post_attachments/wp-content/uploads/2025/01/DK_SHIVAKUMAR_NEW-2.jpg)
ಡಿ.ಕೆ ಶಿವಕುಮಾರ್​ರಿಂದ ತಮಿಳುನಾಡಿದ ಪ್ರತ್ಯಂಗೀರಾ ಮೊರೆ!
ರಾಜ್ಯ ಕಾಂಗ್ರೆಸ್​​ನಲ್ಲಿ ಬಣ ಬಡಿದಾಟಕ್ಕೆ ತಾತ್ಕಾಲಿಕ ವಿರಾಮ ಏನೋ ಬಿದ್ದಿದೆ. ಆದ್ರೆ, ಅಸಮಾಧಾನ ಅನ್ನೋದು ಈಗಲೂ ಬೂದಿ ಮುಚ್ಚಿದ ಕೆಂಡದಂತಿದೆ. ಅದು ಯಾವಾಗ ಸ್ಫೋಟಗೊಳ್ಳುತ್ತೆ ಅನ್ನೋದು ಆ ಶಿವ ಪರಮೇಶ್ವರನೇ ಬಲ್ಲ. ಹೀಗೆ ರಾಜ್ಯ ಕಾಂಗ್ರೆಸ್​ನಲ್ಲಿ ರಾಜಕೀಯ ಗೊಂದಲದ ಗೂಡಾಗಿರುವ ಹೊತ್ತಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್​ ಟೆಂಪಲ್​ ರನ್​ ಕೈಗೊಂಡಿದ್ದಾರೆ.
ಡಿ.ಕೆ ಶಿವಕುಮಾರ್ ಟೆಂಪಲ್​ರನ್​!
- ಇವತ್ತು ಬೆಳಗ್ಗೆ ತಮಿಳನಾಡಿನ ಕುಂಭಕೋಣಂಗೆ ಪ್ರಯಾಣ
- ಪ್ರತ್ಯಂಗೀರಾ ದೇವರು & ಕಾಂಚೀಪುರಂನ ದೇಗುಲಕ್ಕೆ ಭೇಟಿ
- ವರದರಾಜು ಪೆರುಮಾಳ್ ದೇವಸ್ಥಾನಕ್ಕೆ ಭೇಟಿಯ ಮಾಹಿತಿ
- ಬೆಳಿಗ್ಗೆ 10:30ಕ್ಕೆ ಪ್ರತ್ಯಂಗಿರ ದೇವಿಗೆ ವಿಶೇಷ ಪೂಜೆ ಸಲ್ಲಿಕೆ
- ಬೆಳಗ್ಗೆ 11:30ಕ್ಕೆ ವರದರಾಜು ಪೆರುಮಾಳ್ ದೇವರ ದರ್ಶನ
- 2 ದೇಗುಲಗಳ ದರ್ಶನ ಬಳಿಕ ಸಂಜೆ ಬೆಂಗಳೂರಿಗೆ ವಾಪಸ್​​
ಇವತ್ತು ಬೆಳಗ್ಗೆ ತಮಿಳನಾಡಿನ ಕುಂಭಕೋಣಂಗೆ ಭೇಟಿ ನೀಡಲಿರುವ ಡಿಸಿಎಂ ಡಿ.ಕೆ ಶಿವಕುಮಾರ್, ಅಲ್ಲಿ ಪ್ರತ್ಯಂಗೀರಾ ದೇವರು ಮತ್ತು ಕಾಂಚೀಪುರಂನ ವರದರಾಜು ಪೆರುಮಾಳ್ ದೇವಸ್ಥಾನಕ್ಕೆ ಭೇಟಿ ನೀಡುವ ಮಾಹಿತಿ ಇದೆ. ಬೆಳಗ್ಗೆ 10:30ಕ್ಕೆ ಕುಂಬಕೋಣಂನಲ್ಲಿ ಪ್ರತ್ಯಂಗಿರ ದೇವಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಬಳಿಕ 11:30ಕ್ಕೆ ಕಾಂಚಿಪುರಂನ ವರದರಾಜು ಪೆರುಮಾಳ್ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆಯಲಿದ್ದಾರೆ ಅಂತ ಗೊತ್ತಾಗಿದೆ. ಎರಡು ದೇಗುಲಗಳ ದರ್ಶನ ಬಳಿಕ ಸಂಜೆ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಯುಜಿಸಿ ಇಂದ ಗುಡ್​ನ್ಯೂಸ್;​ ಸಹಾಯಕ ಪ್ರಾಧ್ಯಾಪಕ ನೇಮಕಾತಿಗೆ ಇನ್ಮುಂದೆ NET ಅಗತ್ಯ ಇಲ್ಲ
/newsfirstlive-kannada/media/post_attachments/wp-content/uploads/2025/01/DK_SHIVAKUMAR-4.jpg)
ಪ್ರತ್ಯಂಗಿರಾ ದೇವಸ್ಥಾನಕ್ಕೆ ಡಿ.ಕೆ ಶಿವಕುಮಾರ್ ಭೇಟಿ
ಈ ಹಿಂದೆ ಕುಂಭಕೋಣಂನಿಂದ ಬೆಂಗಳೂರಿಗೆ ಆಗಮಿಸಿ ಅರ್ಚಕರ ಸಮ್ಮುಖದಲ್ಲಿ ಹೋಮ- ಹವನ ನಡೆಸಿದ್ದರು. ಹೀಗಾಗಿ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿ ಅಂತ ಅರ್ಚಕರು ಸಲಹೆ ನೀಡಿದ್ದರು. ಈ ಹಿನ್ನೆಲೆ ಪ್ರತ್ಯಂಗಿರಾ ದೇವಸ್ಥಾನಕ್ಕೆ ಡಿ.ಕೆ ಶಿವಕುಮಾರ್ ಭೇಟಿ ನೀಡುತ್ತಿದ್ದಾರೆ ಎಂಬ ಮಾಹಿತಿ ಇದೆ.
ರಾಜ್ಯ ಕಾಂಗ್ರೆಸ್​ನಲ್ಲಿ ನಡೆಯುತ್ತಿರುವ ಬೆಳವಣಿಗೆ ಬಗ್ಗೆ ಡಿ.ಕೆ ಶಿವಕುಮಾರ್ ಎಚ್ಚರಿಕೆ ಹೆಜ್ಜೆ ಇಡುತ್ತಿದ್ದಾರೆ. ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿರುವ ಡಿ.ಕೆ ಶಿವಕುಮಾರ್, ಆ ಬಗ್ಗೆಯು ತಮಗೆ ಗೊತ್ತೇ ಇಲ್ಲ ಅನ್ನೋ ರೀತಿ ರಿಯಾಕ್ಟ್​​ ಮಾಡುತ್ತಿದ್ದಾರೆ. ಇದರ ನಡುವೆ ಡಿ.ಕೆ ಶಿವಕುಮಾರ್ ಆರಂಭಿಸಿದ ಟೆಂಪಲ್​​ ರನ್​​​ ಕುತೂಹಲಕ್ಕೆ ಕಾರಣವಾಗಿದೆ.
​ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us