/newsfirstlive-kannada/media/post_attachments/wp-content/uploads/2024/07/dks.jpg)
ಬೆಂಗಳೂರು: ಡಿಸಿಎಂ ಡಿ.ಕೆ ಶಿವಕುಮಾರ್ ಅವರಿಗೆ ಇರೋದೇ ಒಂದೇ ಆಸೆ. ಒಂದ್ಸಲ ಸಿಎಂ ಆಗಬೇಕು ಅನ್ನೋದು. ಅದಕ್ಕಾಗಿ ಮಾಡ್ತಿರುವ ಹೋರಾಟ ಒಂದು, ಎರಡಲ್ಲ. ಸಿದ್ದರಾಮಯ್ಯ ಸರ್ಕಾರದ ಭಾಗವಾದ ಡಿಕೆಶಿಗೆ ನಿತ್ಯವೂ ಸಾವಿರ ಸವಾಲುಗಳಿವೆ. ಆದ್ರೆ ಕಳೆದ ಸೋಮವಾರ ವೈಟ್ ಟ್ಯಾಪಿಂಗ್ ಪೂಜೆ ಮುಗಿಸಿ ಬಂದ ಬಳಿಕ ಅವರಿಗೆ ಮೂಡೇ ಸರಿ ಇಲ್ಲವಂತೆ.
ಇದನ್ನೂ ಓದಿ: 21 ಹಗರಣಗಳ ಬಾಂಬ್.. ವಾಲ್ಮೀಕಿ, ಮುಡಾ ಬಿಜೆಪಿ ಹೋರಾಟಕ್ಕೆ ಸಿಎಂ ಸಿದ್ದು ಕೌಂಟರ್ ಅಟ್ಯಾಕ್!
ಡಿಸಿಎಂ ಡಿಕೆಶಿ ತಲೆ ಕೆಡಿಸಿಕೊಂಡಿದ್ದರ ಹಿಂದಿದ್ಯದಂತೆ ಆ ಕಾರಣ!
ನೆನಪಾಗ್ತಿದೆ ಕೇರಳ ದೇವಸ್ಥಾನದ ಆ ಜಾಗ.. ಕಿಸೆಯಲ್ಲಿನ ಚೀಟಿ!
ಡಿ.ಕೆ ಶಿವಕುಮಾರ್ ಅವರಿಗೆ ಮೂರು ದಿನವಾದ್ರೂ ಶೂ ಕಳೆದಿದ್ದೇ ಚಿಂತೆಯಾಗಿದೆ. ಅಷ್ಟಕ್ಕೂ ಇದೊಂದು ದೊಡ್ಡ ವಿಚಾರ ಅಲ್ಲ ಅನ್ಕೋಬೇಡಿ. ಇದರ ಹಿಂದೆ ಒಂದು ರಹಸ್ಯವೇ ಇದೆ. ಆ ರಹಸ್ಯವೇ ಡಿಕೆಶಿಗೆ ಭಯದ ಜೊತೆ ಚಿಂತೆಗೂ ದೂಡಿದೆ.
ಕಳೆದ ಜುಲೈ 15ರಂದು ಡಿಕೆ ಶಿವಕುಮಾರ್ ಅವರು ವೈಟ್ ಟಾಪಿಂಗ್ ಪೂಜೆ ಅಂತ ನಗರದ ಭಾಷ್ಯಂ ಸರ್ಕಲ್ಗೆ ಬಂದಿದ್ದರು. ಜೊತೆಗೆ ಶಾಸಕರು, ಇತರೆ ನಾಯಕರು ಇದ್ದರು. ವಿಘ್ನ ವಿನಾಯಕನ ಆರತಿ ತಗೊಂಡು, ಗುದ್ದಲಿ ಪೂಜೆ ನೆರವೇರಿಸಿದ್ದರು. ಪೂಜೆಗೂ ಮುನ್ನ ಅಲ್ಲೆಲ್ಲೋ ಮೂಲೆಯಲ್ಲಿ ಬಿಟ್ಟಿದ್ದ ಶೂ ಧರಿಸಲು ಹೋದರು. ಆದರೆ ಅಲ್ಲಿ ಶೂ ನಾಪತ್ತೆ ಆಗಿತ್ತು. ಅಲ್ಲರೀ ಅಷ್ಟು ಜನ ಶಾಸಕರು ಇದ್ದಾರೆ, ಮಂತ್ರಿಗಳೂ ಇದ್ರೂ, ಈ ಶೂ ಕದಿಯಲು ನಂದೇ ಬೇಕಿತ್ತಾ ಅಂತ ಮನಸಲ್ಲೇ ಅಂದ್ಕೊಂಡು ಬೇರೆ ಶೂ ಧರಿಸಿ ಹೊರಟು ನಿಂತರು.
ಅವತ್ತು ಸೋಮವಾರ, ಇವತ್ತು ಶುಕ್ರವಾರ.. ನಾಲ್ಕು ದಿನ ಆಯ್ತು.. ಆದ್ರೆ, ಡಿಕೆಶಿಗೆ ನಿತ್ಯವೂ ಕಳೆದು ಹೋದ ಶೂ ಬಗ್ಗೆನೇ ಟೆನ್ಶನ್. ಅವತ್ತಿನಿಂದ ಡಿಸಿಎಂ ಒಂಥರಾ ವಿಚಲಿತರಾಗಿದ್ದಾರಂತೆ. ಡಿಕೆಶಿ ಸಾಹೇಬ್ರು ಶೂ ಕದ್ದವರನ್ನ ಪತ್ತೆ ಹಚ್ಚುವಂತೆ ಪೊಲೀಸರಿಗೆ ಕಟ್ಟಪ್ಪಣೆ ಹೊರಡಿಸಿದ್ದಾರಂತೆ. ಅದಕ್ಕೆ ಕಾರಣ ಮಾಟ-ಮಂತ್ರದ ಭೀತಿ.
ಇದನ್ನೂ ಓದಿ: ಸಂಘ, ಮೋದಿ ಪರಿ‘ವಾರ್’.. ಬಿಜೆಪಿ, RSS ಮಧ್ಯೆ ಅಸಲಿಗೆ ಆಗಿದ್ದೇನು? ಪಿಕ್ಚರ್ ಅಭಿ ಬಾಕಿ ಹೈ!
ಡಿಕೆಶಿಗೆ ಮಾಟ-ಮಂತ್ರದ ಭೀತಿ!
ಕಳ್ಳತನ ಆಗಿದೆ ಅನ್ನೋದಕ್ಕಿಂತ ಯಾರು ಮಾಡಿದ್ದಾರೆಂದು ಚಿಂತೆ
ಮಾಟ ಮಾಡುವ ಉದ್ದೇಶದಿಂದ ಶೂ ಕಳ್ಳತನ ಆಗಿರುವ ಆತಂಕ
ಕಳ್ಳನನ್ನ ಪತ್ತೆ ಹಚ್ಚಿ, ಉದ್ದೇಶ ಕೇಳುವಂತೆ ಪೊಲೀಸರಿಗೆ ಸೂಚನೆ
ಮಾಟ-ಮಂತ್ರ ಅಂದರೆ ಫುಲ್ ಅಲರ್ಟ್ ಆಗುವ ಡಿಸಿಎಂ ಡಿಕೆಶಿ
ನಿಜವಾಗಿ ಕಳ್ಳತನ ಆಗಿದ್ಯಾ? ಇದರ ಹಿಂದೆ ಬೇರೇನಾದ್ರೂ ಇದ್ಯಾ?
ನನ್ನ ಶೂ ಕಳ್ಳತನ ಯಾರು ಮಾಡಿದ್ರು? ಮಾಡಿದ್ದಾದ್ರೂ ಯಾಕೆ?
ಶೂ ಕಳ್ಳನ ಹುಡುಕಾಟಕ್ಕೆ ಇನ್ನೊಂದು ಅನುಮಾನವೂ ಇದೆ. ಮಿಸ್ಸಿಂಗ್ ಆದಾಗ ಆ ಜಾಗದಲ್ಲಿ ಯಾವ್ ಶೂ ಇರ್ಲಿಲ್ಲ. ಇದಾದ ಕೆಲ ನಿಮಿಷಗಳ ನಂತರ ಬೇರೆ ಶೂ ಪತ್ತೆ ಆಗಿದೆ. ಯಾರು ತಂದಿಟ್ರು ಅನ್ನೋದು ಗೊತ್ತಾಗುತ್ತಿಲ್ಲ. ಅಲ್ಲಿ ಸಿಸಿಟಿವಿಯೂ ಇಲ್ಲ.. ಮಾಟ-ಮಂತ್ರ, ವಾಮಾಚಾರಕ್ಕೆ ಸ್ಪೋರ್ಟ್ಸ್ ಶೂ/ಪ್ಲಾಸ್ಟಿಕ್ ಶೂ ಬಳಕೆ ಮಾಡಲ್ಲ. ಚರ್ಮದ ಶೂ ಬಳಕೆ ಮಾಡ್ತಾರೆ. ಡಿಕೆಶಿಯದ್ದು ಚರ್ಮದ ಶೂ.. ಜೊತೆಗೆ ಮಾಟದಲ್ಲಿ ಕಾಲಿನ ಧೂಳಿಗೆ ಹೆಚ್ಚು ಪ್ರಾಶಸ್ತ್ಯವಿದೆ. ಶೂದಲ್ಲಿ ಧೂಳು ಇರೋದು ಸಹಜ. ಈ ಎಲ್ಲಾ ಕಾರಣಕ್ಕೆ ಡಿ.ಕೆ ಶಿವಕುಮಾರ್ ಅವರಿಗೆ ಶತ್ರು ಭೈರವಿ ಯಾಗ ನೆನಪಿಗೆ ಬಂದಂತೆ ಕಾಣುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ