newsfirstkannada.com

WATCH: ‘ಹೆಚ್‌.ಡಿ ಕುಮಾರಸ್ವಾಮಿ ಕರೆ ಮಾಡಿ ಧಮ್ಕಿ ಹಾಕಿದ್ದಾರೆ’- ಡಿ.ಕೆ ಶಿವಕುಮಾರ್ ಸ್ಫೋಟಕ ಹೇಳಿಕೆ

Share :

Published February 19, 2024 at 4:14pm

    ಕುಮಾರಸ್ವಾಮಿ ಏನೇನೋ ಹೇಳಿದ್ದಾರಲ್ಲ ಎಲ್ಲಾ ನನಗೆ ಗೊತ್ತಿದೆ

    ಫೆಬ್ರವರಿ 27ಕ್ಕೆ ನೋಡೋಣ ಏನ್‌ ಆಗುತ್ತೆ ಎಂದು ಡಿಕೆಶಿ ಸವಾಲ್

    ‘ಚುನಾವಣೆಗೆ BJP ಸ್ಟ್ರಾಟಜಿ ಏನು ಅನ್ನೋದು ಎಲ್ಲಾ ಗೊತ್ತಾಗ್ತಿದೆ’

ಬೆಂಗಳೂರು: ರಾಜ್ಯಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ ವಿರುದ್ಧ ಡಿಸಿಎಂ ಡಿ.ಕೆ ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ. ಕುಮಾರಸ್ವಾಮಿ ಅವರು ಯಾರ್ ಯಾರಿಗೆ ಕಾಲ್ ಮಾಡ್ತಿದ್ದಾರೆ. ಯಾರ್ ಯಾರಿಗೆ ಧಮ್ಕಿ ಹಾಕ್ತಿದ್ದಾರೆ ಎಲ್ಲಾ ಬಂದು ನನಗೆ ಹೇಳ್ತಿದ್ದಾರೆ. ಬಿಜೆಪಿ ಸ್ಟ್ರಾಟಜಿ ಏನು ಅನ್ನೋದು ಎಲ್ಲಾ ಗೊತ್ತಾಗ್ತಿದೆ ಎಂದು ಡಿಕೆ ಗುಡುಗಿದ್ದಾರೆ.

ಫೆಬ್ರವರಿ 27ರಂದು ನಡೆಯುತ್ತಿರುವ ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನಗಳು ನಡೆಯೋ ಸಾಧ್ಯತೆಗಳಿವೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿ.ಕೆ ಶಿವಕುಮಾರ್, ಕುಮಾರಸ್ವಾಮಿ ಏನೇನೋ ಹೇಳಿದ್ದಾರಲ್ಲ ಎಲ್ಲಾ ನನಗೆ ಗೊತ್ತಿದೆ. ಕುಮಾರಸ್ವಾಮಿ ಅವರು ಕಾಲ್ ಮಾಡಿ ಮಾತನಾಡಿದ್ದಾರೆ. ಧಮ್ಕಿ ಕೂಡ ಹಾಕಿದ್ದಾರೆ. ನಮಗೆ ಯಾರ ಅಗತ್ಯವೂ ಇಲ್ಲ. ವಿಧಾನಸಭಾ ಚುನಾವಣೆಯಲ್ಲಿ ನಾವು 136 ಸೀಟು ಗೆದ್ದಿದ್ದೇವೆ. ಇಬ್ಬರು ಪಕ್ಷೇತರರು ನಮ್ಮ ಜೊತೆಗೆ ಇದ್ದಾರೆ. ಇದು ಅಲ್ಲದೇ ಇನ್ನೂ ಯಾರ್ ಯಾರೋ ಇದ್ದಾರೆ. ಎಲ್ಲವನ್ನೂ ತೋರಿಸಿ ಆಮೇಲೆ ಮಾತಾಡ್ತೀನಿ. ಫೆಬ್ರವರಿ 27ಕ್ಕೆ ನೋಡೋಣ ಏನ್‌ ಆಗುತ್ತೆ ಎಂದಿದ್ದಾರೆ.

ಇದನ್ನೂ ಓದಿ: ಒಂದೇ ವಿಮಾನದಲ್ಲಿ ST ಸೋಮಶೇಖರ್, ಡಿ.ಕೆ ಶಿವಕುಮಾರ್ ಒಟ್ಟಿಗೆ ಪ್ರಯಾಣ; ಎಲ್ಲಿಗೆ ಹೋಗಿದ್ರು?

ಇದೇ ವೇಳೆ ಬಿಜೆಪಿ ಯಶವಂತಪುರ ಶಾಸಕ ಎಸ್‌.ಟಿ ಸೋಮಶೇಖರ್ ಅವರ ಜೊತೆ ಒಟ್ಟಿಗೆ ವಿಮಾನದಲ್ಲಿ ಪ್ರಯಾಣ ಮಾಡಿದ್ದಕ್ಕೂ ಡಿಕೆಶಿ ಸ್ಪಷ್ಟನೆ ನೀಡಿದ್ದಾರೆ. ನಂದು ಶಾಸಕ ಗೋಪಾಲಯ್ಯ, ಎಸ್‌.ಟಿ ಸೋಮಶೇಖರ್ ಅವರದ್ದು ವೈಯಕ್ತಿಕ ಸಂಬಂಧ ಇದೆ. ಸೋಮಶೇಖರ್ ಅವರು ಅವರು ಮೂರು ವರ್ಷ ಆ ಕಡೆ ಹೋಗಿದ್ದಾರೆ ಅಷ್ಟೇ. 35 ವರ್ಷ ಜೊತೆಯಲ್ಲೇ ಸಂಸಾರ ಮಾಡಿದ್ದೇವೆ ಎಂದು ಡಿಕೆ ಶಿವಕುಮಾರ್ ಅವರು ಸ್ಫೋಟಕ ಸುಳಿವು ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

WATCH: ‘ಹೆಚ್‌.ಡಿ ಕುಮಾರಸ್ವಾಮಿ ಕರೆ ಮಾಡಿ ಧಮ್ಕಿ ಹಾಕಿದ್ದಾರೆ’- ಡಿ.ಕೆ ಶಿವಕುಮಾರ್ ಸ್ಫೋಟಕ ಹೇಳಿಕೆ

https://newsfirstlive.com/wp-content/uploads/2023/10/HDK-DKS-1.jpg

Load More