Advertisment

ತೆಲಂಗಾಣ ಸಿಎಂ ಗ್ರೇಟ್‌.. ಮೌನ ಮುರಿದ ಪವನ್ ಕಲ್ಯಾಣ್; ಅಲ್ಲು ಅರ್ಜುನ್‌ ತಪ್ಪು ಏನು?

author-image
admin
Updated On
ತೆಲಂಗಾಣ ಸಿಎಂ ಗ್ರೇಟ್‌.. ಮೌನ ಮುರಿದ ಪವನ್ ಕಲ್ಯಾಣ್; ಅಲ್ಲು ಅರ್ಜುನ್‌ ತಪ್ಪು ಏನು?
Advertisment
  • ತೆಲಂಗಾಣ ಸಿಎಂ ರೇವಂತ್ ರೆಡ್ಡಿ ನಿಜಕ್ಕೂ ಒಬ್ಬ ಗ್ರೇಟ್ ಲೀಡರ್!
  • ಅಲ್ಲು ಅರ್ಜುನ್ ಕೂಡಲೇ ರೇವತಿ ಮನೆಗೆ ಹೋಗಿದ್ದರೆ ಚೆನ್ನಾಗಿತ್ತು
  • ನಾನು ತೆಲಂಗಾಣ ಪೊಲೀಸರನ್ನು ಬೈಯ್ಯುವುದಿಲ್ಲ ಅವರು ಸರಿ

ಪುಷ್ಪ 2 ಸಿನಿಮಾದ ಪ್ರೀಮಿಯರ್ ಶೋ ವೇಳೆ ಸಂಧ್ಯಾ ಥಿಯೇಟರ್‌ ಬಳಿ ಸಂಭವಿಸಿದ ಕಾಲ್ತುಳಿತ ದೇಶಾದ್ಯಂತ ಸಂಚಲನ ಸೃಷ್ಟಿಸಿದೆ. ಮೃತ ರೇವತಿ ಕುಟುಂಬದ ಪರವಾಗಿ ತೆಲಂಗಾಣ ಸರ್ಕಾರ ಹೋರಾಟ ನಡೆಸುತ್ತಾ ಇದೆ. ನಟ ಅಲ್ಲು ಅರ್ಜುನ್ ಹಾಗೂ ಬೌನ್ಸರ್‌ಗಳ ವಿಚಾರಣೆ ಮುಂದುವರಿದಿದೆ.

Advertisment

ಇದನ್ನೂ ಓದಿ: ಅಲ್ಲು ಅರ್ಜುನ್ ಹೇಳಿಕೆಗೆ ತೆಲಂಗಾಣ ಸಿಎಂ ಕೌಂಟರ್‌.. ಪುಷ್ಪ 2 ಕಾಲ್ತುಳಿತದ ಇಂಚಿಂಚು ಮಾಹಿತಿ ಬಹಿರಂಗ 

ಸಂಧ್ಯಾ ಥಿಯೇಟರ್‌ನ ಕಾಲ್ತುಳಿತ ಕೇಸ್‌ಗೆ ಮೊದಲ ಬಾರಿಗೆ ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಅವರು ಪ್ರತಿಕ್ರಿಯಿಸಿದ್ದಾರೆ. ಅಲ್ಲು ಅರ್ಜುನ್ ವಿರುದ್ಧದ ಕೇಸ್‌ ಬಗ್ಗೆ ಮೌನ ಮುರಿದ ಪವನ್ ಕಲ್ಯಾಣ್ ಅವರು ಕಾನೂನು ಎಲ್ಲರಿಗೂ ಒಂದೇ. ನಾನು ತೆಲಂಗಾಣ ಪೊಲೀಸರನ್ನು ಬೈಯ್ಯುವುದಿಲ್ಲ. ಸಾರ್ವಜನಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಪೊಲೀಸರು ಕಾರ್ಯಾಚರಣೆ ನಡೆಸಬೇಕು ಎಂದು ಹೇಳಿದ್ದಾರೆ.

publive-image

ಸಂಧ್ಯಾ ಥಿಯೇಟರ್‌ಲ್ಲಿ ಘಟನೆಯ ಮೊದಲು ಹಾಗೂ ನಂತರ ಏನಾಯಿತು ಎಂದು ನನಗೆ ಗೊತ್ತಿಲ್ಲ. ಜನರು ಫಿಲ್ಮ್ ಹೀರೋಗಳಿಗೆ ಪ್ರೀತಿ, ಬೆಂಬಲ ತೋರುತ್ತಾರೆ. ಸಿನಿಮಾ ನಟರು ಬರುತ್ತಾರೆ ಎಂದು ಗೊತ್ತಾದಾಗ, ಅಭಿಮಾನಿಗಳು ಉತ್ಸಾಹದಿಂದ ಇರುತ್ತಾರೆ. ಈ ಘಟನೆಯಲ್ಲಿ ರೇವತಿ ಸಾವಿನಿಂದ ನಾನು ಡಿಸ್ಟರ್ಬ್ ಆಗಿದ್ದೇನೆ.

Advertisment

publive-image

ಕಾಲ್ತುಳಿತದ ಕೇಸ್ ಅನ್ನು ಸುಲಭವಾಗಿ ಬಗೆಹರಿಸಬಹುದಿತ್ತು. ಆದರೆ ಇದು ದೊಡ್ಡ ಅನಾಹತಕ್ಕೆ ಕಾರಣವಾಯಿತು ಎಂದ ಪವನ್ ಕಲ್ಯಾಣ್ ಅವರು ನಟ ಅಲ್ಲು ಅರ್ಜುನ್ ಅವರನ್ನು ತಪ್ಪಿತಸ್ಥರನ್ನಾಗಿ ಮಾಡಲಾಗಿದೆ. ಇದು ಸರಿಯಲ್ಲ. ಅಲ್ಲು ಅರ್ಜುನ್‌ಗೆ ಕಾಲ್ತುಳಿತದ ಬಗ್ಗೆ ಸಿಬ್ಬಂದಿ ಹೇಳಬೇಕಾಗಿತ್ತು. ಅಲ್ಲು ಅರ್ಜುನ್ ಥಿಯೇಟರ್ ಒಳಗೆ ಕುಳಿತಿದ್ದಾಗ ಅವರನ್ನು ಖಾಲಿ ಮಾಡುವಂತೆ ಸೂಚಿಸಬೇಕಿತ್ತು. ಅಲ್ಲು ಅರ್ಜುನ್ ಅವರ ಪರವಾಗಿ ಯಾರಾದರೂ ರೇವತಿ ಮನೆಗೆ ಹೋಗಿದ್ದರೆ ಚೆನ್ನಾಗಿತ್ತು ಎಂದು ಪವನ್ ಕಲ್ಯಾಣ್‌ ತಿಳಿಸಿದ್ದಾರೆ.

publive-image

ತೆಲಂಗಾಣ ಸಿಎಂ ಗ್ರೇಟ್ ಲೀಡರ್‌!
ಇದೇ ವೇಳೆ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರ ಬಗ್ಗೆ ಪವನ್ ಕಲ್ಯಾಣ್ ಪ್ರತಿಕ್ರಿಯಿಸಿದರು. ರೇವಂತ್ ರೆಡ್ಡಿ ಒಬ್ಬ ಗ್ರೇಟ್ ಲೀಡರ್. ಕೆಲವೊಮ್ಮೆ ನಿರ್ಧಾರಗಳನ್ನು ಸಂದರ್ಭಕ್ಕೆ ಅನುಸಾರವಾಗಿ ತೆಗೆದುಕೊಳ್ಳಬೇಕಾಗುತ್ತದೆ. ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಕೆಳಮಟ್ಟದಿಂದ ಸಿಎಂ ಸ್ಥಾನದವರೆಗೂ ಬೆಳೆದಿದ್ದಾರೆ. ತೆಲಂಗಾಣ ಸರ್ಕಾರ ಸಿನಿಮಾ ಟಿಕೆಟ್ ದರ ಏರಿಸಿದೆ. ತೆಲಂಗಾಣ ಸರ್ಕಾರವು ವೈಎಸ್‌ಆರ್ ಸರ್ಕಾರದಂತೆ ವರ್ತಿಸಲ್ಲ ಎಂದು ಡಿಸಿಎಂ ಪವನ್ ಕಲ್ಯಾಣ್ ಹೇಳಿದರು.

ಇದನ್ನೂ ಓದಿ: ನನ್ನ ಮನಸಿಗೆ ನೋವು ಮಾಡಬೇಡಿ; ಅಭಿಮಾನಿಗಳಿಗೆ ಕೈ ಮುಗಿದು ಬೇಡಿಕೊಂಡ ನಟ ಯಶ್​ 

Advertisment

ನಮ್ಮಣ್ಣ ಚಿರಂಜೀವಿ ಮಾಸ್ಕ್ ಹಾಕಿಕೊಂಡು ಥಿಯೇಟರ್‌ಗೆ ಹೋಗುತ್ತಿದ್ದರು. ನಾನು ಕೂಡ ಅದೇ ರೀತಿ ಮಾಸ್ಕ್ ಹಾಕಿಕೊಂಡೇ ಥಿಯೇಟರ್‌ಗೆ ಹೋಗುತ್ತಿದ್ದೆ. ಆದರೆ ಆ ಬಳಿಕ ಥಿಯೇಟರ್‌ಗೆ ಹೋಗುವುದನ್ನು ನಿಲ್ಲಿಸಿದ್ದೇನೆ ಎಂದು ಪವನ್ ಕಲ್ಯಾಣ್ ಸ್ಪಷ್ಟಪಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment