/newsfirstlive-kannada/media/post_attachments/wp-content/uploads/2024/08/Pawan-Kalyan-1.jpg)
ಬೆಂಗಳೂರು: ನಾನು ರಾಜಕಾರಣಿ ಆಗೋ ಮುನ್ನ ವೃತ್ತಿಯಲ್ಲಿ ನಟ. ನನಗೆ ಕರ್ನಾಟಕದ ಜನ ಸಾಕಷ್ಟು ಪ್ರೀತಿ ತೋರಿಸಿದ್ದಾರೆ. ನನ್ನ ಕೆಲಸ ಈಗ ಕನ್ನಡ ಕಲಿಯುವುದು. ಕನ್ನಡ ಕಲಿಯುವ ಮೂಲಕ ಕನ್ನಡಿಗರಿಗೆ ನನ್ನ ಪ್ರೀತಿಯನ್ನು ಮರಳಿಸಬೇಕಿ ಎಂದು ನಟ ಮತ್ತು ಆಂಧ್ರದ ಡಿಸಿಎಂ ಆಗಿರೋ ಪವನ್ ಕಲ್ಯಾಣ್ ಹೇಳಿದರು.
ಡಿಸಿಎಂ ಪವನ್ ಕಲ್ಯಾಣ್ ಬೆಂಗಳೂರಿಗೆ ಬಂದಿದ್ದರು. ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿದ ನಂತರ ಪವನ್ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಪವನ್ ಕಲ್ಯಾಣ್ ಅವರು ಕುವೆಂಪು ಕವಿತೆಯ ಸಾಲುಗಳನ್ನು ಓದಿದರು. ಜತೆಗೆ ಕನ್ನಡ ಭಾಷೆ ಕಲಿಯುವ ಮೂಲಕ ಕನ್ನಡ ಸಂಸ್ಕೃತಿಗೆ ನನ್ನ ಗೌರವವನ್ನು ಅರ್ಪಿಸಬೇಕಿದೆ ಎಂದರು.
ನಾನೀಗ ಆಂಧ್ರದ ಅರಣ್ಯ ಸಚಿವನಾಗಿ ಅಧಿಕಾರ ವಹಿಸಿಕೊಂಡಿದ್ದೇನೆ. ನಾನು ಅರಣ್ಯವನ್ನು ಗಮನಿಸಲು ಆರಂಭಿಸಿದ್ದೇ ಡಾ. ರಾಜ್ಕುಮಾರ್ ಅವರ ‘ಗಂಧದ ಗುಡಿ’ ಸಿನಿಮಾ ನೋಡಿದ ಮೇಲೆ. 40 ವರ್ಷದ ಹಿಂದೆ ಸಿನಿಮಾದಲ್ಲಿ ಅರಣ್ಯವನ್ನು ರಕ್ಷಿಸುವವ ಹೀರೋ ಆಗಿದ್ದ ಎಂದು ಡಾ. ರಾಜ್ಕುಮಾರ್ ಅವರನ್ನು ಹೊಗಳಿದ್ರು. ಇದೇ ಸಂದರ್ಭದಲ್ಲಿ ಈಗ ಅರಣ್ಯವನ್ನು ದೋಚುವವನು ಹೀರೋ ಆಗಿದ್ದಾನೆ ಎಂದು ಅಲ್ಲು ಅರ್ಜುನ್ ನಟನೆಯ ಪುಷ್ಪಾ ಸಿನಿಮಾಗೆ ಕೌಂಟರ್ ಕೊಟ್ಟರು.
ಇದನ್ನೂ ಓದಿ:ರಾಷ್ಟ್ರಕವಿ ಕುವೆಂಪು ಕವನ ಹಾಡಿ, ಕನ್ನಡಿಗರನ್ನು ಕೊಂಡಾಡಿದ ಆಂಧ್ರ DCM ಪವನ್ ಕಲ್ಯಾಣ್; ಹೇಳಿದ್ದೇನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ