ಪಾದರಕ್ಷೆ ಕೊಳ್ಳಲು ದುಡ್ಡಿಲ್ಲ.. ಇಡೀ ಗ್ರಾಮಕ್ಕೆ ಪವನ್ ಕಲ್ಯಾಣ್‌ ಭರ್ಜರಿ ಗಿಫ್ಟ್‌; ಮನ ಮಿಡಿಯುವ ಸ್ಟೋರಿ!

author-image
admin
Updated On
ಪಾದರಕ್ಷೆ ಕೊಳ್ಳಲು ದುಡ್ಡಿಲ್ಲ.. ಇಡೀ ಗ್ರಾಮಕ್ಕೆ ಪವನ್ ಕಲ್ಯಾಣ್‌ ಭರ್ಜರಿ ಗಿಫ್ಟ್‌; ಮನ ಮಿಡಿಯುವ ಸ್ಟೋರಿ!
Advertisment
  • ರಸ್ತೆ ಸಂಪರ್ಕ ಇಲ್ಲದ ಕುಗ್ರಾಮಕ್ಕೆ ಪವನ್ ಕಲ್ಯಾಣ್ ಭೇಟಿ
  • ಗ್ರಾಮದ ಯಾರೊಬ್ಬರ ಕಾಲಿನಲ್ಲೂ ಪಾದರಕ್ಷೆಯೇ ಇರಲಿಲ್ಲ
  • ಶೋಚನೀಯ ಪರಿಸ್ಥಿತಿಯನ್ನು ಕಂಡು ಮರುಗಿದ ಆಂಧ್ರ ಡಿಸಿಎಂ

ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಅವರು ಮಾಡಿದ ಈ ಒಂದು ಕಾರ್ಯ ಬಹಳ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಪಾದರಕ್ಷೆ ಕೊಳ್ಳಲು ಶಕ್ತಿಯಿಲ್ಲದ ಕುಗ್ರಾಮದ ಜನರ ಖುಷಿಗೆ ಪಾರವೇ ಇಲ್ಲದಾಗಿದೆ. ಅಲ್ಲೂರಿ ಸೀತಾರಾಮ ರಾಜು ಜಿಲ್ಲೆಯ ಪೆದಪಾಡು ಗ್ರಾಮ ಈ ಹೃದಯ ಸ್ಪರ್ಶಿ ಕಾರ್ಯಕ್ಕೆ ಸಾಕ್ಷಿಯಾಗಿದೆ.

ಇತ್ತೀಚೆಗೆ ಡಿಸಿಎಂ ಪವನ್ ಕಲ್ಯಾಣ್ ಅವರು ಸರಿಯಾದ ರಸ್ತೆಯೂ ಇಲ್ಲದ, ಬುಡಕಟ್ಟು ಜನರೇ ಅತಿ ಹೆಚ್ಚು ವಾಸಿಸುತ್ತಿರುವ ಈ ಪೆದಪಾಡು ಗ್ರಾಮಕ್ಕೆ ಭೇಟಿ ನೀಡಿದ್ದರು. ಈ ವೇಳೆ ಗ್ರಾಮದ ಯಾರೊಬ್ಬರ ಕಾಲಿನಲ್ಲೂ ಪಾದರಕ್ಷೆಯೇ ಇರಲಿಲ್ಲ. ಈ ಶೋಚನೀಯ ಪರಿಸ್ಥಿತಿಯನ್ನು ಕಂಡ ಪವನ್ ಕಲ್ಯಾಣ್ ಅವರ ಮನ ಮಿಡಿದಿದೆ.

publive-image

ಪೆದಪಾಡು ಗ್ರಾಮದಲ್ಲಿ ಜನರ ಬದುಕೇ ದುಸ್ಥರವಾಗಿದೆ. ಇಲ್ಲಿನ ಜನರಿಗೆ ಚಪ್ಪಲಿ ಖರೀದಿ ಮಾಡುವುದು ದುಬಾರಿಯಾಗಿದೆ. ಹೀಗಾಗಿ ಹಲವರು ಚಪ್ಪಲಿ ಧರಿಸದೇ ಜೀವನ ಸಾಗಿಸುತ್ತಾರೆ. ಪವನ್ ಕಲ್ಯಾಣ್ ಅವರು ಈ ಗ್ರಾಮಸ್ಥರ ಪರಿಸ್ಥಿತಿ ನೋಡಿ ಮರುಗಿದ್ದಾರೆ.

ಇದನ್ನೂ ಓದಿ: ಪ್ರೀತಿಸಿದ ಹುಡುಗಿಗೋಸ್ಕರ ಉತ್ತರ ಪತ್ರಿಕೆಯಲ್ಲಿ SSLC ವಿದ್ಯಾರ್ಥಿ ವಿಚಿತ್ರ ಮನವಿ; ಏನೇನು ಗೊತ್ತಾ? 

publive-image

ಸ್ಥಳದಲ್ಲೇ ಅಧಿಕಾರಿಗಳನ್ನು ಕರೆಸಿದ ಪವನ್ ಕಲ್ಯಾಣ್ ಅವರು ಈ ಗ್ರಾಮದಲ್ಲಿ ಎಷ್ಟು ಜನರಿದ್ದಾರೆ. ಅಷ್ಟೂ ಮಂದಿಗೆ ಈ ಕೂಡಲೇ ಅವರ ಕಾಲಿನ ಗಾತ್ರಕ್ಕೆ ತಕ್ಕಂತ ಚಪ್ಪಲಿಯನ್ನು ನೀಡುವಂತೆ ಸೂಚಿಸಿದ್ದಾರೆ.

publive-image

ಪೆದಪಾಡು ಗ್ರಾಮದಲ್ಲಿ ಸುಮಾರು 350 ಜನ ವಾಸಿಸುತ್ತಿದ್ದಾರೆ. ಪವನ್ ಕಲ್ಯಾಣ್ ಅವರು ತಕ್ಷಣವೇ ಗ್ರಾಮದ ಎಲ್ಲರಿಗೂ ಚಪ್ಪಲಿಗಳನ್ನು ಖರೀದಿಸಿ ವಿತರಿಸುವಂತೆ ಆದೇಸಿದ್ದರು. ಡಿಸಿಎಂ ಆದೇಶದಂತೆ ಸಮೀಕ್ಷೆ ನಡೆಸಿದ ಜಿಲ್ಲಾಡಳಿತ ಮಕ್ಕಳಿಂದ ಹಿಡಿದು ಗ್ರಾಮ ಹಿರಿಯರ ಚಪ್ಪಲಿಯ ಗಾತ್ರವನ್ನು ದಾಖಲಿಸಿಕೊಂಡು ವರದಿ ನೀಡಿತ್ತು.

publive-image

ಇದಾದ ಬಳಿಕ ಗ್ರಾಮ ಪಂಚಾಯ್ತಿ ಅಧಿಕಾರಿಗಳು, ಜಿಲ್ಲಾಧಿಕಾರಿಗಳು ಭೇಟಿ ನೀಡಿ ಗ್ರಾಮಸ್ಥರ ಕಾಲಿನ ಗಾತ್ರ ಚಪ್ಪಲಿಗಳನ್ನು ವಿತರಿಸಿದ್ದಾರೆ. ಪವನ್ ಕಲ್ಯಾಣ್ ಆದೇಶದಿಂದ ಚಪ್ಪಲಿ ಪಡೆದ ಇಡೀ ಗ್ರಾಮಸ್ಥರು ಸಂತೋಷಗೊಂಡಿದ್ದಾರೆ. ಪೆದಪಾಡು ಗ್ರಾಮದಲ್ಲಿ ಹೊಸ, ಹೊಸ ಪಾದರಕ್ಷೆಯಿಂದ ಹಬ್ಬದ ವಾತಾವರಣ ನಿರ್ಮಾಣವಾಗಿದೆ.


">April 18, 2025

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment