ಹಿಂದಿ ಹೇರಿಕೆ ಸಮರ್ಥಿಸಿದ ಪವನ್ ಕಲ್ಯಾಣ್.. ತಮಿಳು ಸಿನಿಮಾ ತಾರೆಯರ ವಿರುದ್ಧ ಬೊಟ್ಟು ತೋರಿದ DCM

author-image
Bheemappa
Updated On
ಹಿಂದಿ ಹೇರಿಕೆ ಸಮರ್ಥಿಸಿದ ಪವನ್ ಕಲ್ಯಾಣ್.. ತಮಿಳು ಸಿನಿಮಾ ತಾರೆಯರ ವಿರುದ್ಧ ಬೊಟ್ಟು ತೋರಿದ DCM
Advertisment
  • ಮಾತನಾಡಿದರೆ ಸಂಸ್ಕೃತ, ಹಿಂದಿ ಭಾಷೆಯನ್ನು ತೆಗಳುವುದೇ ಕೆಲಸ
  • ತಮಿಳು ಸಿನಿಮಾಗಳ ಕುರಿತು ಪವನ್ ಕಲ್ಯಾಣ್ ಹೇಳಿರುವುದು ಏನು?
  • ಬಹುಭಾಷಾ ಸಂಸ್ಕೃತಿ ಪ್ರತಿಪಾದಿಸಿದ ದಕ್ಷಿಣದ ನಟ ಕಮ್ ರಾಜಕಾರಣಿ

ಹೈದರಾಬಾದ್: ಹಿಂದಿ ಹೇರಿಕೆಯ ಕುರಿತು ದಕ್ಷಿಣ ಭಾರತದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ತಮಿಳುನಾಡು, ಕರ್ನಾಟಕ ಸೇರಿದಂತೆ ದಕ್ಷಿಣದ ರಾಜ್ಯಗಳು ಹಿಂದಿ ಭಾಷೆಯನ್ನು ಒಪ್ಪಿಕೊಳ್ಳುತ್ತಿಲ್ಲ. ಆದರೆ ಇದರ ಬೆನ್ನಲ್ಲೇ ಆಂಧ್ರ ಪ್ರದೇಶದ ಡಿಸಿಎಂ ಪವನ್ ಕಲ್ಯಾಣ್ ಅವರು ಹಿಂದಿ ಸೇರಿ ಬಹುಭಾಷಾ ಸಂಸ್ಕೃತಿ ಪ್ರತಿಪಾದಿಸಿದ್ದಲ್ಲದೇ ತಮಿಳುನಾಡುಗೆ ಟಾಂಗ್ ಕೊಟ್ಟಿದ್ದಾರೆ.

ಕಾಕಿನಾಡಿನ ಪಿಠಾಪುರಂ ಕ್ಷೇತ್ರದಲ್ಲಿ ತಮ್ಮ ಪಕ್ಷದ 12ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಪವನ್ ಕಲ್ಯಾಣ್, ಎಲ್ಲಾ ರಾಜ್ಯಗಳಲ್ಲಿ ಬಹುಭಾಷೆಗಳನ್ನು ಅಳವಡಿಸಿಕೊಳ್ಳಬೇಕು. ಮಾತನಾಡಿದ್ರೆ ಸಂಸ್ಕೃತ, ಹಿಂದಿ ಭಾಷೆಯನ್ನು ಬೈಯ್ಯುತ್ತಾರೆ. ಇವೆಲ್ಲಾ ನಮ್ಮ ದೇಶದ ಭಾಷೆಗಳು ಅಲ್ಲವೇ?. ಇಸ್ಲಾಂ, ಕ್ರೈಸ್ತರಿಗೆ ಅಪವಿತ್ರ ಆದರೆ ಸೆಕ್ಯೂಲರಿಸಂ, ಆದ್ರೆ ಅದೇ ಹಿಂದೂಗಳ ಪಾರ್ವತಿ, ಶಿವ, ರಾಮ, ಅಯ್ಯಪ್ಪ ದೇವರಗಳ ಬಗ್ಗೆ ಅಪವಿತ್ರವಾಗಿ ಮಾತಾಡಿದ್ರೆ ನಮಗೆ ಏನಾಗಬಾರದು?. ಬಾಯಿ ಮುಚ್ಚುಕೊಂಡು ಕುಳಿತುಕೊಳ್ಳಬೇಕು ಎಂದು ಹೇಳಿದ್ದಾರೆ.

ಇದನ್ನೂ ಓದಿ:‘ಪೊಲಿಟಿಷಿಯನ್​​​, ಮಾಜಿ MLA ಅವನೇ ನನ್ನ ಗಂಡ’ ಎಂದ ಮಹಿಳಾ ಅಧಿಕಾರಿ; ದಡೇಸೂಗೂರ್ 2ನೇ ಮದುವೆ?

publive-image

ತಮಿಳು ನಾಡಿನಲ್ಲಿ ಹಿಂದಿ ಬರಬಾರದು ಎಂದು ಹೇಳುತ್ತಿದ್ದಾರೆ. ಅವಾಗ ನನಗೆ ಅನಿಸಿದ್ದು ಏನೆಂದರೆ, ತಮಿಳು ಸಿನಿಮಾಗಳನ್ನು ಹಿಂದಿಗೆ ಡಬ್ ಮಾಡಬೇಡಿ. ಹಣ ಆದರೆ ಹಿಂದಿಯಿಂದ ಬೇಕು. ಉತ್ತರ ಪ್ರದೇಶ, ಬಿಹಾರ್, ಛತ್ತೀಸ್​ಘಡ ಇಲ್ಲಿಂದ ಸಿನಿಮಾ ಮೂಲಕ ಹಣ ಬೇಕು ಎನ್ನುತ್ತೀರಿ. ಆದರೆ ಹಿಂದಿ ನಮಗೆ ಬೇಡ ಎಂದರೆ ಅದು ಹೇಗೆ ನ್ಯಾಯ ಆಗುತ್ತದೆ ಎಂದು ಪವನ್ ಕಲ್ಯಾಣ್ ಪ್ರಶ್ನೆ ಮಾಡಿದ್ದಾರೆ.

ನಮಗೆ ಕೆಲಸ ಮಾಡುವವರೆಲ್ಲಾ ಬಿಹಾರ್, ಉತ್ತರ ಪ್ರದೇಶದಿಂದ ಬರಬೇಕು. ಆದರೆ ಹಿಂದಿಯನ್ನು ಮಾತ್ರ ದ್ವೇಷ ಮಾಡುವುದು ಸರಿನಾ?. ಉತ್ತರ- ದಕ್ಷಿಣದ ಭಾಷೆಯ ಬಗ್ಗೆ ನನ್ನ ಸಮಾಧಾನ ಒಂದೇ. ಹಿಮಾಲಯದಲ್ಲಿ ಶಿವನ ಕೈಲಾಸ ಇದೆ. ದಕ್ಷಿಣದಲ್ಲಿ ಶಿವನ ಮಗ ಮುರುಗನ್ ನಿವಾಸ ಇದೆ. ಇದೇ ದೇಶವನ್ನು ಒಡೆಯುವ ಧೈರ್ಯ, ಸಾಹಸ ಯಾರಿಗೂ ಇಲ್ಲ. ಬೇರೆ ಬೇರೆ ಮಾಡಬೇಕು ಎನ್ನುವ ಆಲೋಚನೆ ತೆಗೆದು ಹಾಕಿ. ಭಾಷಾ ಬೇರೆ, ಭಾವ ಬೇರೆ. ನೀವು ಉತ್ತರದವರು ಬೆಳ್ಳಗೆ ಇರುತ್ತೀರಿ, ನಾವು ದಕ್ಷಿಣದವರು ಕಪ್ಪುಗೆ ಇರುತ್ತೀರಿ ಎನ್ನುವ ಭೇದ ಭಾವ ಇರಬಾರದು ಎಂದು ಹೇಳಿದ್ದಾರೆ.


">March 14, 2025

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment