Advertisment

ತಿರುಪತಿ ಲಡ್ಡುವಿನಲ್ಲಿ ದನದ ಕೊಬ್ಬು; ತಿಮ್ಮಪ್ಪನ ಕ್ಷಮೆ ಕೋರಿ 11 ದಿನ ಉಪವಾಸ ಕೈಗೊಂಡ ನಟ ಪವನ್​​!

author-image
Ganesh Nachikethu
Updated On
ಹಿಂದುತ್ವದ ಫೈಯರ್​ ಬ್ರ್ಯಾಂಡ್​ ಆಂಧ್ರದ ಡಿಸಿಎಂ; ಪವನ್​ಗೆ ಆ ಮಾತುಗಳೇ ಮುಳುವಾಗಿದ್ದೇಕೆ?
Advertisment
  • ಪ್ರಸಿದ್ಧ ತಿರುಪತಿ ದೇಗುಲದ ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಬಳಕೆ
  • ತಿಮ್ಮಪ್ಪನ ಪ್ರಸಾದ ಲಡ್ಡುವಿಗೆ ಬಳಸೋ ತುಪ್ಪದಲ್ಲಿ ಬೀಫ್ ಟ್ಯಾಲೋ
  • ತುಪ್ಪದಲ್ಲಿ ಮೀನಿನ ಎಣ್ಣೆ, ಬೀಫ್ ಟ್ಯಾಲೋ ಮತ್ತು ಹಂದಿ ಕೊಬ್ಬು ಧೃಡ

ಇತ್ತೀಚೆಗಷ್ಟೇ ಜಗತ್ತಿನ ಅತ್ಯಂತ ಪ್ರಸಿದ್ಧ ತಿರುಪತಿ ದೇಗುಲದ ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಕೆ ಮಾಡಲಾಗಿದೆ ಎಂದು ಆಂಧ್ರದ ಸಿಎಂ ಚಂದ್ರಬಾಬು ನಾಯ್ಡು ಆರೋಪಿಸಿದ್ದರು. ಬಳಿಕ ತಿಮ್ಮಪ್ಪನ ಪ್ರಸಾದ ಲಡ್ಡುವಿಗೆ ಬಳಸೋ ತುಪ್ಪದಲ್ಲಿ ಮೀನಿನ ಎಣ್ಣೆ, ಬೀಫ್ ಟ್ಯಾಲೋ ಮತ್ತು ಹಂದಿ ಕೊಬ್ಬು ಇತ್ತು ಎಂದು ಲ್ಯಾಬ್​ ರಿಪೋರ್ಟ್​ ಧೃಡಪಡಿಸಿತ್ತು. ಈ ಬೆನ್ನಲ್ಲೇ ಎಚ್ಚೆತ್ತ ಆಂಧ್ರದ ಡಿಸಿಎಂ ಪವನ್​ ಕಲ್ಯಾಣ್​​​ ಅವರು ತಿರುಪತಿ ತಿಮ್ಮಪ್ಪನ ಕ್ಷಮೆ ಕೋರಿದ್ದಾರೆ. ಅಷ್ಟೇ ಅಲ್ಲದೇ ಇಂದಿನಿಂದ 11 ದಿನಗಳ ಕಾಲ ಪ್ರಾಯಶ್ಚಿತ ದೀಕ್ಷೆ ಕೈಗೊಂಡಿದ್ದಾರೆ.

Advertisment

ನಟ ಪವನ್​ ಕಲ್ಯಾಣ್​​ ಏನಂದ್ರು?

ತಿರುಪತಿ ಲಡ್ಡು ಅಂದರೆ ಅಮೃತಕ್ಕೆ ಸಮಾನ. ಯಾರದ್ದೋ ದುರುದ್ದೇಶದಿಂದಾಗಿ ಈಗ ತಿರುಮಲ ಲಡ್ಡು ಪ್ರಸಾದ ಅಶುದ್ಧವಾಗಿದೆ. ಲಡ್ಡುವಿನಲ್ಲಿ ಪ್ರಾಣಿ ಕೊಬ್ಬು ಬೆರಸಿದ ವಿಷಯ ಗೊತ್ತಾದ ಕೂಡಲೇ ಬೆಚ್ಚಿಬಿದ್ದೆ. ಸನಾತನ ಧರ್ಮ ನಂಬಿದ ಎಲ್ಲರೂ ಇದಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು. ಅದರ ಭಾಗವಾಗಿ ನಾನು ಪ್ರಾಯಶ್ಚಿತ್ತ ದೀಕ್ಷೆಯನ್ನು ಮಾಡುವ ಸಂಕಲ್ಪ ಕೈಗೊಂಡಿದ್ದೇನೆ. ಇಂದಿನಿಂದ 11 ದಿನಗಳ ಕಾಲ ಗುಂಟೂರು ಜಿಲ್ಲೆಯ ನಂಬೂರಿನಲ್ಲಿ ಶ್ರೀ ದಶಾವತಾರ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ದೀಕ್ಷೆ ಕೈಗೊಂಡಿದ್ದೇನೆ ಎಂದರು.

publive-image

ಇನ್ನೂ ಲಡ್ಡು ತಯಾರಿಯಲ್ಲಿ ಪ್ರಾಣಿಗಳ ಕೊಬ್ಬು ಬೆರೆಸಿದವರನ್ನು ಕೂಡಲೇ ಬಂಧಿಸುತ್ತೇವೆ. ಹಿಂದೂ ಧರ್ಮದ ರಕ್ಷಣೆ ನಮ್ಮೆಲ್ಲರ ಹೊಣೆ. ನಮ್ಮ ಧರ್ಮವನ್ನು ನಾವೇ ಕಾಪಾಡಿಕೊಳ್ಳಬೇಕು. ಸನಾತನ ಧರ್ಮದ ಮೇಲೆ ದಾಳಿ ನಡೆಸಿದ ಕಿಡಿಗೇಡಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದರು ಪವನ್​ ಕಲ್ಯಾಣ್​​.

ಇದನ್ನೂ ಓದಿ:ತಿರುಪತಿ ಲಡ್ಡುವಿನಲ್ಲಿ ದನದ ಕೊಬ್ಬು; ಡಿಸಿಎಂ ಪವನ್​ ಕಲ್ಯಾಣ್​ ವಿರುದ್ಧ ನಟ ಪ್ರಕಾಶ್​ ರಾಜ್​ ಆಕ್ರೋಶ​

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment