ತಿರುಪತಿ ಲಡ್ಡು ಬಗ್ಗೆ ಕಮೆಂಟ್ಸ್​​: ತಮಿಳು ನಟ ಕಾರ್ತಿಗೆ ಖಡಕ್​ ವಾರ್ನಿಂಗ್​ ಕೊಟ್ಟ ಪವನ್​ ಕಲ್ಯಾಣ್​​!

author-image
Ganesh Nachikethu
Updated On
ತಿರುಪತಿ ಲಡ್ಡು ಬಗ್ಗೆ ಪ್ರಕಾಶ್ ರಾಜ್ ಏನಂದ್ರು, ಪವನ್ ಕಲ್ಯಾಣ್ ಗರಂ ಆಗಿದ್ದೇಕೆ.. ಪುರಿ ಜಗನ್ನಾಥ ಪ್ರಸಾದದಲ್ಲೂ..?
Advertisment
  • ಪ್ರಸಿದ್ಧ ತಿರುಪತಿ ದೇಗುಲದ ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಬಳಕೆ
  • ತಿಮ್ಮಪ್ಪನ ಪ್ರಸಾದ ಲಡ್ಡುವಿಗೆ ಬಳಸೋ ತುಪ್ಪದಲ್ಲಿ ಬೀಫ್ ಟ್ಯಾಲೋ
  • ತುಪ್ಪದಲ್ಲಿ ಮೀನಿನ ಎಣ್ಣೆ, ಬೀಫ್ ಟ್ಯಾಲೋ ಮತ್ತು ಹಂದಿ ಕೊಬ್ಬು ಧೃಡ

ಹೈದರಾಬಾದ್​​: ಜಗತ್ತಿನ ಅತ್ಯಂತ ಪ್ರಸಿದ್ಧ ದೇಗುಲ ತಿರುಪತಿ ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಕೆ ಮಾಡಲಾಗಿದೆ ಎಂದು ಆಂಧ್ರದ ಸಿಎಂ ಚಂದ್ರಬಾಬು ನಾಯ್ಡು ಆರೋಪಿಸಿದ್ದರು. ಬಳಿಕ ತಿಮ್ಮಪ್ಪನ ಪ್ರಸಾದ ಲಡ್ಡುವಿಗೆ ಬಳಸೋ ತುಪ್ಪದಲ್ಲಿ ಮೀನಿನ ಎಣ್ಣೆ, ಬೀಫ್ ಟ್ಯಾಲೋ ಮತ್ತು ಹಂದಿ ಕೊಬ್ಬು ಇತ್ತು ಎಂದು ಲ್ಯಾಬ್​ ರಿಪೋರ್ಟ್​ ಧೃಡಪಡಿಸಿತ್ತು. ಈ ಬೆನ್ನಲ್ಲೇ ಎಚ್ಚೆತ್ತ ಆಂಧ್ರದ ಡಿಸಿಎಂ ಪವನ್​ ಕಲ್ಯಾಣ್​​​ ಅವರು ತಿರುಪತಿ ತಿಮ್ಮಪ್ಪನ ಕ್ಷಮೆ ಕೋರಿದ್ದಾರೆ. ಅಷ್ಟೇ ಅಲ್ಲದೇ ಇಂದಿನಿಂದ 11 ದಿನಗಳ ಕಾಲ ಪ್ರಾಯಶ್ಚಿತ ದೀಕ್ಷೆ ಕೈಗೊಂಡಿದ್ದಾರೆ. ಇದರ ಮಧ್ಯೆ ತಮಿಳು ನಟ ಕಾರ್ತಿಯವರು ಈ ಬಗ್ಗೆ ಮಾತಾಡಿದ್ದು, ಭಾರೀ ಸದ್ದು ಮಾಡುತ್ತಿದೆ.

publive-image

ನಟ ಕಾರ್ತಿ ಏನಂದ್ರು?

ತಮಿಳು ನಟ ಕಾರ್ತಿ ನಟಿಸಿರುವ ತಮಿಳು ಸಿನಿಮಾ ‘ಮೆಯಿಳಾಗನ್’ ರಿಲೀಸ್​ಗೆ ರೆಡಿ ಆಗಿದೆ. ಸಿನಿಮಾ ತಮಿಳಿನ ಜೊತೆಗೆ ತೆಲುಗಿನಲ್ಲೂ ಬಿಡುಗಡೆ ಆಗುತ್ತಿದೆ. ಮೆಯಿಳಾಗನ್ ಸಿನಿಮಾ ಪ್ರಚಾರಕ್ಕಾಗಿ ಇತ್ತೀಚೆಗೆ ಕಾರ್ತಿ ಹೈದರಾಬಾದ್​​ಗೆ ಬಂದಿದ್ದರು. ಈ ವೇಳೆ ನಿರೂಪಕಿ ‘ಲಡ್ಡು ಬೇಕಾ’ ಅನ್ನೋ ಡೈಲಾಗ್ ಹೇಳಿ ತಮಾಷೆ ಮಾಡಿದ್ರು. ಅದಕ್ಕೆ ಕಾರ್ತಿ, ‘ಲಡ್ಡು ವಿಷಯ ಈಗ ಬೇಡ, ಅದು ಬಹಳ ಸೆನ್ಸಿಟಿವ್ (ಸೂಕ್ಷ್ಮ) ವಿಷಯ ಆಗಿದೆ ಎಂದಿದ್ದರು. ಇದಕ್ಕೆ ಡಿಸಿಎಂ ಪವನ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಪವನ್​ ಕಲ್ಯಾಣ್​​ ವಾರ್ನಿಂಗ್​​

ಈ ಬಗ್ಗೆ ಮಾತನಾಡಿದ್ದ ನಟ ಪವನ್ ಕಲ್ಯಾಣ್, ಇತ್ತೀಚೆಗೆ ಸಿನಿಮಾ ಕಾರ್ಯಕ್ರಮವೊಂದರಲ್ಲಿ ಯಾರೋ ‘ಲಡ್ಡು ಸೆನ್ಸಿಟಿವ್ ಇಶ್ಯೂ’ ಎಂದಿದ್ದಾರೆ. ಹಾಗೆ ಮಾತನಾಡಬೇಡಿ. ನಿಮ್ಮ ಮೇಲೆ ನನಗೆ ಗೌರವ ಇದೆ. ಆದರೆ, ಸನಾತನ ಧರ್ಮದ ವಿಷಯ ಬಂದಾಗ ನೀವು ಸಾವಿರ ಬಾರಿ ಯೋಚನೆ ಮಾಡಿ ಮಾತನಾಡಿ ಎಂದು ವಾರ್ನಿಂಗ್​ ಕೊಟ್ಟಿದ್ದಾರೆ.

ಇದನ್ನೂ ಓದಿ:ತಿರುಪತಿ ಲಡ್ಡುವಿನಲ್ಲಿ ದನದ ಕೊಬ್ಬು; ತಿಮ್ಮಪ್ಪನ ಕ್ಷಮೆ ಕೋರಿ 11 ದಿನ ಉಪವಾಸ ಕೈಗೊಂಡ ನಟ ಪವನ್​​!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment