/newsfirstlive-kannada/media/post_attachments/wp-content/uploads/2025/04/pawan_kalyan.jpg)
ಹೈದರಾಬಾದ್: ಆಂಧ್ರ ಪ್ರದೇಶ ಡಿಸಿಎಂ ಹಾಗೂ ಟಾಲಿವುಡ್ ನಟ ಪವನ್ ಕಲ್ಯಾಣ್ ಅವರ 8 ವರ್ಷದ ಮಗ ಮಾರ್ಕ್ ಶಂಕರ್ ಏಪ್ರಿಲ್ 8ರಂದು ಸಿಂಗಾಪುರದಲ್ಲಿ ಬೆಂಕಿ ಅವಘಡದಿಂದ ಪಾರಾಗಿದ್ದನು. ಇದರ ಬೆನ್ನಲ್ಲೇ ಮಾರ್ಕ್ ಶಂಕರ್ ಹೆಸರಿನಲ್ಲಿ ಟಿಟಿಡಿ ದೇವಾಲಯದ ಅನ್ನ ಪ್ರಸಾದ ಟ್ರಸ್ಟ್ಗೆ ಭಾರೀ ಮೊತ್ತವನ್ನು ಪವನ್ ಕಲ್ಯಾಣ್ ಹಾಗೂ ಪತ್ನಿ ಅನ್ನಾ ಲೆಜ್ನೆವಾ ಅವರು ನೀಡಿದ್ದಾರೆ.
ಆಂಧ್ರದ ಡಿಸಿಎಂ ಪವನ್ ಕಲ್ಯಾಣ್ ಅವರ ಪುತ್ರ ಮಾರ್ಕ್ ಶಂಕರ್ ಸಿಂಗಾಪುರದಲ್ಲಿ ನಡೆದಿದ್ದ ಬೆಂಕಿ ಅವಘಡದಲ್ಲಿ ಗಾಯಗೊಂಡಿದ್ದ. ಬಳಿಕ ಆತನನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗಿತ್ತು. ಮಾಹಿತಿ ತಿಳಿದು ಸಿಂಗಾಪುರಕ್ಕೆ ಹೋಗಿದ್ದ ಪವನ್ ಕಲ್ಯಾಣ್, ಪತ್ನಿ ಅನ್ನಾ ಲೆಜ್ನೆವಾ, ಶಂಕರ್ನನ್ನ ಸುರಕ್ಷಿತವಾಗಿ ಹೈದರಾಬಾದ್‌ಗೆ ಕರೆತಂದಿದ್ದರು. ಹೈದರಾಬಾದ್‌ಗೆ ಬರುತ್ತಿದ್ದಂತೆ, ಅನ್ನಾ ಲೆಜ್ನೆವಾ ತಿರುಪತಿ ತಿಮ್ಮಪ್ಪನ ದೇವಸ್ಥಾನಕ್ಕೆ ಹೋಗಿ ಮುಡಿ ಕೊಟ್ಟಿದ್ದರು.
ಇದನ್ನೂ ಓದಿ: RCB ನೆಕ್ಸ್ಟ್ ಮ್ಯಾಚ್ ಯಾವಾಗ, ಎಲ್ಲಿ..? ಬಲಿಷ್ಠ ಟೀಮ್ ಜೊತೆ ಹೋರಾಡಲಿರೋ ರಜತ್ ಸೇನೆ
ಮುಡಿ ಕೊಟ್ಟ ಬಳಿಕ ಪುತ್ರ ಮಾರ್ಕ್ ಶಂಕರ್ ಹೆಸರಲ್ಲಿ ಪವನ್ ಕಲ್ಯಾಣ್, ಪತ್ನಿ ಅನ್ನಾ ಲೆಜ್ನೆವಾ ತಿರುಪತಿ ತಿಮ್ಮಪ್ಪನ ಅನ್ನ ದಾಸೋಹ ಟ್ರಸ್ಟ್ಗೆ ದೊಡ್ಡ ಮೊತ್ತದಲ್ಲಿ ಹಣ ನೀಡಿದ್ದಾರೆ. ಮಾರ್ಕ್ ಶಂಕರ್, ಭಕ್ತರ ಮಧ್ಯಾಹ್ನದ ಊಟಕ್ಕೆ 17 ಲಕ್ಷ ರೂಪಾಯಿಗಳನ್ನು ಟಿಟಿಡಿ ಅನ್ನ ದಾಸೋಹ ಟ್ರಸ್ಟ್ಗೆ ನೀಡಿದ್ದಾರೆ ಎಂದು ಪ್ರಕಟಿಸಲಾಗಿದೆ.
ಮಗ ಮಾರ್ಕ್ ಶಂಕರ್ ಸುರಕ್ಷಿತವಾಗಿ ಭಾರತಕ್ಕೆ ವಾಪಸ್ ಬರಲೆಂದು ತಾಯಿ ಹರಕೆ ಹೊತ್ತಿದ್ದರು. ಹೀಗಾಗಿಯೇ ಮಗ ಹೈದರಾಬಾದ್‌ಗೆ ಬರುತ್ತಿದ್ದಂತೆ ಸಂಜೆ ತಿಮ್ಮಪ್ಪನ ಸಿನ್ನಿಧಿಗೆ ತೆರಳಿ ಮುಡಿಕೊಟ್ಟಿದ್ದರು. ಅನ್ನಾ ಲೆಜ್ನೆವಾ ರಷ್ಯಾ ದೇಶದ ಕ್ರಿಶ್ಚಿಯನ್ ಧರ್ಮದವರು ಆಗಿದ್ದರೂ ಹಿಂದೂ ಧರ್ಮದ ಮೇಲೆ ಅಪಾರ ನಂಬಿಕೆ ಹೊಂದಿದ್ದಾರೆ. ಹೀಗಾಗಿ ಹಿಂದೂ ಧರ್ಮದಲ್ಲಿ ನಂಬಿಕೆ ಹೊಂದಿರುವುದಾಗಿ ಟಿಟಿಡಿಗೆ ಬಾಂಡ್ ಮೂಲಕ ಅವರು ಘೋಷಣೆ ಮಾಡಿದ್ದಾರೆ. ಬೇರೆ ಧರ್ಮದವರು ಆಗಿದ್ರೆ ಬಾಂಡ್ ಮೂಲಕ ಘೋಷಣೆ ಮಾಡುವ ನಿಯಮ ಇದೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ