newsfirstkannada.com

ಆರ್​​​ಸಿಬಿಗೆ ಕೈಕೊಟ್ಟ ಕೊಹ್ಲಿ.. ಈ ಬಾರಿ IPL​ ಆಡೋದು ಡೌಟ್​​.. ಈ ಬಗ್ಗೆ ಎಬಿಡಿ ಏನಂದ್ರು?

Share :

Published February 13, 2024 at 4:23pm

Update February 13, 2024 at 4:39pm

    ಬಹುನಿರೀಕ್ಷಿತ 2024ರ ಇಂಡಿಯನ್​ ಪ್ರೀಮಿಯರ್​ ಲೀಗ್​​​

    ಈ ಬಾರಿ ವಿರಾಟ್​ ಕೊಹ್ಲಿ ಐಪಿಎಲ್​​ ಆಡೋದು ಡೌಟಾ?

    ವಿರಾಟ್​ ಲಭ್ಯತೆ ಬಗ್ಗೆ ಎಬಿ ಡಿವಿಲಿಯರ್ಸ್​​​ ಹೇಳಿದ್ದೇನು?

ವಿರಾಟ್​ ಕೊಹ್ಲಿ.. ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಕ್ರಿಕೆಟರ್. ವಿರಾಟ್​ ಕೊಹ್ಲಿಯಲ್ಲಿನ ಹಸಿವು, ಛಲ, ಹೋರಾಟದ ಮನೋಭಾವ ಇಂದು ಓರ್ವ ಸಕ್ಸಸ್​​ಫುಲ್ ಕ್ರಿಕೆಟಿಗನ್ನಾಗಿ ಮಾಡಿದೆ. 35ರ ವಯಸ್ಸಿನಲ್ಲೂ ಚಿರತೆಯಂತೆ ಮೈದಾನದಲ್ಲಿ ಕಾಣಿಸಿಕೊಳ್ಳುವ ವಿರಾಟ್​ ನಿಜಕ್ಕೂ ಮಾಡ್ರನ್ ಡೇ ಕ್ರಿಕೆಟ್​ನ ದೈತ್ಯ. ಸದ್ಯ ಟೀಮ್​ ಇಂಡಿಯಾ ದಾಖಲೆಗಳ ಸರದಾರ ವಿರಾಟ್​ ಕೊಹ್ಲಿಯನ್ನು ಮಿಸ್​ ಮಾಡಿಕೊಳ್ಳುತ್ತಿದೆ. ಕೊಹ್ಲಿ ಇಂಗ್ಲೆಂಡ್​ ವಿರುದ್ಧದ ಸೀರಿಸ್​ನಿಂದಲೇ ಔಟ್​ ಆಗಿದ್ದಾರೆ. ಇಷ್ಟೇ ಅಲ್ಲ ಐಪಿಎಲ್​​ಗೂ ವಿರಾಟ್​ ಲಭ್ಯತೆ ಡೌಟ್​ ಎನ್ನಲಾಗಿದೆ. ಈ ಸಂಬಂಧ ಕೊಹ್ಲಿ ಆಪ್ತ ಎಬಿ ಡಿವಿಲಿಯರ್ಸ್​ ಮಾತಾಡಿದ್ದಾರೆ.

ಕೊಹ್ಲಿ ಲಭ್ಯತೆ ಬಗ್ಗೆ ಎಬಿಡಿ ಹೇಳಿದ್ದೇನು..?

ವಿಶ್ವದ ಅತ್ಯುತ್ತಮ ಆಟಗಾರರಲ್ಲಿ ಕೊಹ್ಲಿ ಒಬ್ಬರು. ಕೊಹ್ಲಿ ಪ್ರತಿ ಪದಕ ಗೆಲ್ಲುವ ಹಸಿವು ಹೊಂದಿದ್ದಾರೆ. ಯಾವಾಗಲೂ ತಾನು ಗೆಲ್ಲಲೇಬೇಕು ಎಂಬ ಇಚ್ಛಾಶಕ್ತಿ ಇಟ್ಟುಕೊಂಡಿದ್ದಾರೆ. ಪಂದ್ಯದಲ್ಲಿ ಗೆಲ್ಲೋವರೆಗೂ ಕೊನೆ ಕ್ಷಣದವರೆಗೂ ಹೋರಾಡುವ ಮನೋಭಾವವಿದೆ. ಇದನ್ನೂ ನಾನು ರೊನಾಲ್ಡೊ, ಮೆಸ್ಸಿಯಲ್ಲೂ ನೋಡಿದ್ದೇನೆ. ಹಾಗೆಯೇ ವಿರಾಟ್ ಕೊಹ್ಲಿಯಲ್ಲೂ ನೋಡಿದ್ದೇನೆ. ಸೋಲನ್ನ ಕೊಹ್ಲಿ ದ್ವೇಷಿಸುತ್ತಾನೆ. ಶ್ರೇಷ್ಠ ಆಟಗಾರರಲ್ಲಿ ಇದನ್ನೇ ಕಂಡಿದ್ದೇನೆ. ಹೀಗಾಗಿ ವಿರಾಟ್​, ಇವರ ಸಮಾನ ಎಂದು ಹೇಳಬಲ್ಲೆ ಎಂದರು.

ಕೊಹ್ಲಿ ಒಬ್ಬ ಹೀರೋ. ಕೋಟ್ಯಾಂತರ ಜನರಿಗೆ ವಿರಾಟ್​ ಕೊಹ್ಲಿ ಸ್ಪೂರ್ತಿಯಾಗಿದ್ದಾರೆ. ವಿರಾಟ್ ಆಟವನ್ನು ನೋಡುವುದು ನನಗೆ ತುಂಬಾ ಇಷ್ಟ. ಕೊಹ್ಲಿಯನ್ನು ಗೆಳೆಯನನ್ನಾಗಿ ಪಡೆದಿರುವುದು ನನ್ನ ಅದೃಷ್ಟ. ವಿರಾಟ್​ ಕೊಹ್ಲಿ ಮೈದಾನದಲ್ಲಿ ಸದಾ ಹೋರಾಟಗಾರ. ವಿರಾಟ್ ಯಾವಾಗಲೂ ಸಹಾಯ ಹಸ್ತ ಚಾಚಿದ್ದಾರೆ. ಯಾರಿಗಾದರೂ ಕಷ್ಟ ಬಂದಾಗ ಮುಂದೆ ನಿಲ್ಲುತ್ತಾರೆ. ಯುಎಇಯಲ್ಲಿ ನಡೆದ 2020ರ ಐಪಿಎಲ್​​​​ನಲ್ಲಿ ಸಂದರ್ಭದಲ್ಲಿ ವಿರಾಟ್ ಕೊಹ್ಲಿ, ಹೈದರಾಬಾದ್​ನ 7 ಯುವ ಆಟಗಾರರೊಂದಿಗೆ ಸುದೀರ್ಘ ಮಾತುಕತೆ ನಡೆಸಿದ್ದರು. ಮೈದಾನದಲ್ಲಿ 20 ಓವರ್​​ಗಳು ಫೀಲ್ಡಿಂಗ್, ಬ್ಯಾಟಿಂಗ್​ ನಡೆಸಿದ ಬಳಿಕವೂ ತಾಳ್ಮೆಯಿಂದ ಮಾತನಾಡುವುದು ಅಚ್ಚರಿ ಮೂಡಿಸಿತ್ತು. ಸದ್ಯ ಕೊಹ್ಲಿ ತನ್ನ ಕುಟುಂಬಕ್ಕಾಗಿ ಕ್ರಿಕೆಟ್​​ನಿಂದ ಬ್ರೇಕ್​ ತೆಗೆದುಕೊಂಡಿದ್ದಾರೆ. ಇವರು ಮುಂದಿನ ಐಪಿಎಲ್​​ ವೇಳೆಗೆ ಕಮ್​ಬ್ಯಾಕ್​​ ಮಾಡಲಿದ್ದಾರೆ ಎಂದರು ಎಬಿಡಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆರ್​​​ಸಿಬಿಗೆ ಕೈಕೊಟ್ಟ ಕೊಹ್ಲಿ.. ಈ ಬಾರಿ IPL​ ಆಡೋದು ಡೌಟ್​​.. ಈ ಬಗ್ಗೆ ಎಬಿಡಿ ಏನಂದ್ರು?

https://newsfirstlive.com/wp-content/uploads/2024/02/Kohli-1.jpg

Load More