25 ಕಿ.ಮೀ ದೂರದಲ್ಲಿ ಪತ್ತೆಯಾದ ಶವಗಳು.. ಕೇರಳದಲ್ಲಿ ಘೋರ ದುರಂತ; ಪ್ರತ್ಯಕ್ಷದರ್ಶಿ ಹೇಳಿದ್ದೇನು?

author-image
admin
Updated On
ಕೇರಳದ ಭೀಕರ ದುರಂತಕ್ಕೆ ಗರ್ಭಿಣಿ ಆನೆ ಹತ್ಯಾದೋಷವೇ ಕಾರಣನಾ? ಏನಿದರ ಅಸಲಿಯತ್ತು?
Advertisment
  • ಕೇರಳದಲ್ಲಿ ಮುಂಜಾನೆ 2 ಗಂಟೆ ಹಾಗೂ 4 ಗಂಟೆಗೆ 2 ಬಾರಿ ಭೂ ಕುಸಿತ
  • 20-25 ಕಿ.ಮೀ ದೂರದವರೆಗೂ ಕೊಚ್ಚಿಕೊಂಡು ಹೋದ ನೂರಾರು ಜನ
  • ಇದುವರೆಗೂ 250 ಮಂದಿಯನ್ನು ರಕ್ಷಿಸಿದ SDRF, NDRF ಸಿಬ್ಬಂದಿ

ಕೇರಳದ ವಯನಾಡ್‌ನಲ್ಲಿ ಸಂಭವಿಸಿದ ಭೂಕುಸಿತ ಅಕ್ಷರಶಃ ಬೆಚ್ಚಿ ಬೀಳಿಸಿದೆ. ಪ್ರಕೃತಿ ವಿಕೋಪದ ಒಂದೊಂದು ಕರಾಳ ದೃಶ್ಯವೂ ಭೀಕರತೆಯನ್ನು ಪ್ರದರ್ಶಿಸುತ್ತಿದೆ. ರಕ್ಷಣಾ ಕಾರ್ಯಾಚರಣೆಯ ಮಧ್ಯೆ ಸಾವಿನ ಸಂಖ್ಯೆ ಏರಿಕೆಯಾಗುತ್ತಲೇ ಇದೆ.

ಇದನ್ನೂ ಓದಿ: ಕೇರಳದಲ್ಲಿ ಮಹಾ ದುರಂತ.. 250 ಕುಟುಂಬಗಳು ಕಣ್ಮರೆ ಶಂಕೆ.. ಸಾವಿನ ದವಡೆಯಲ್ಲಿ ಸಿಕ್ಕಿರುವ ಜನರ ಕತೆ ಭಯಾನಕ..

ವಯನಾಡ್‌ನಲ್ಲಿ ನಡೆಯುತ್ತಿರುವ ರಕ್ಷಣಾ ಕಾರ್ಯದಲ್ಲಿ ಇದುವರೆಗೂ 250 ಮಂದಿಯನ್ನು ರಕ್ಷಿಸಲಾಗಿದೆ. ಚೋಲಾರಮಾಲಾ, ಮಂದಕಾಯಿ ಡ್ರೋನ್ ಕ್ಯಾಮೆರಾ ಮೂಲಕ ಜನರ ಪತ್ತೆಗೆ ಕಾರ್ಯಾಚರಣೆ ನಡೆಸಲಾಗುತ್ತಿದೆ. ಮಣ್ಣಿನಡಿ ಹೂತು ಹೋಗಿರುವ ಜನರ ಪತ್ತೆಗೆ ಪೊಲೀಸ್ ಶ್ವಾನದಳ ಶ್ರಮವಹಿಸುತ್ತಿದೆ.

publive-image

2 ಬಾರಿ ಭಯಾನಕ ಶಬ್ಧ!
ವಯನಾಡ್‌ನ ಚೋಲಾರಮಾಲಾ, ಮಂದಕಾಯಿ ಬಳಿ ಸಂಭವಿಸಿರುವ ಭೂಕುಸಿತದ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಇಂದು ಮುಂಜಾನೆ 2 ಗಂಟೆ ಒಂದು ಬಾರಿ ಭೂಕುಸಿತ ಸಂಭವಿಸಿದೆ. ಇದಾದ 2 ಗಂಟೆ ಬಳಿಕ ಮುಂಜಾನೆ 4 ಗಂಟೆಗೆ 2ನೇ ಬಾರಿ ಭೂ ಕುಸಿತ ಸಂಭವಿಸಿದೆ.

ಇದನ್ನೂ ಓದಿ: ಸಾವಿನ ದವಡೆಯಲ್ಲಿ 300 ಜನ; ಮುಂಡಕೈನಲ್ಲಿ ಸಂಜೆ 5 ಗಂಟೆಗೇ ಕತ್ತಲು ಆವರಿಸುತ್ತೆ.. ಆತಂಕ ವ್ಯಕ್ತಪಡಿಸಿದ ಶಾಸಕ 

ಬೆಳಗಿನ ಜಾವ ಸಾಮಾನ್ಯವಾಗಿ ಮನೆಯಲ್ಲಿ ಎಲ್ಲರೂ ಸುಖನಿದ್ರೆಗೆ ಜಾರಿರುತ್ತಾರೆ. ಈ ವೇಳೆ ಭಯಾನಕ ಭೂಕುಸಿತ ಸಂಭವಿಸಿದೆ. ನಿನ್ನೆ ರಾತ್ರಿಯಿಂದಲೂ ಕೇರಳದಲ್ಲಿ ಭಾರೀ ಮಳೆ ಸುರಿಯುತ್ತಿತ್ತು. ಇದೀಗ ಭೂಕುಸಿತ ಮಹಾ ದುರಂತಕ್ಕೆ ಕಾರಣವಾಗಿದೆ.

publive-image

20 ಕಿ.ಮೀ ದೂರದಲ್ಲಿ ಪತ್ತೆಯಾದ ಶವಗಳು
ಭೂಕುಸಿತದ ಬಳಿಕ ನೂರಾರು ಜನರು ಸುಮಾರು 20-25 ಕಿ.ಮೀ ದೂರದವರೆಗೂ ಜನರು ಕೊಚ್ಚಿ ಕೊಂಡು ಹೋಗಿದ್ದಾರೆ. ಮೆಪ್ಪಾಡಿ ಪ್ರದೇಶದಿಂದ 20-25 ಕಿಮೀ ದೂರದಲ್ಲಿ ಕೆಲವರ ಶವಗಳು ಪತ್ತೆಯಾಗಿದೆ. ಇನ್ನೂ ನೂರಾರು ಜನರು ಅವಶೇಷಗಳಡಿ ಸಿಲುಕಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಕೇರಳ ಭೂಕುಸಿತಕ್ಕೆ 3 ಕಾರಣಗಳು; ಬೆಟ್ಟ, ಗುಡ್ಡ ಕುಸಿಯುವ ಹಿಂದಿನ ಸತ್ಯ ಬಿಚ್ಚಿಟ್ಟ ವಿಜ್ಞಾನಿ..! 

ಜೆಸಿಬಿ, ಕ್ರೇನ್, ಹಿಟಾಚಿ ಬಳಸಿ ಅವಶೇಷಗಳನ್ನು ತೆರವುಗೊಳಿಸಿ ಜನರ ರಕ್ಷಣೆಗೆ ಕಾರ್ಯಾಚರಣೆ ನಡೆಸಲಾಗುತ್ತಿದೆ. ರಕ್ಷಣಾ ತಂಡದಲ್ಲಿರುವ ಎಸ್‌ಡಿಆರ್‌ಎಫ್, ಎನ್‌ಡಿಆರ್‌ಎಫ್, ಅಗ್ನಿಶಾಮಕ ದಳದ 250 ಸಿಬ್ಬಂದಿ ಸತತ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment