newsfirstkannada.com

VIDEO: ಗ್ರಾಹಕರೇ ಫುಡ್​ ಆರ್ಡರ್​​ ಮಾಡೋ ಮುನ್ನ ಎಚ್ಚರದಿಂದಿರಿ! ವೆಜ್​ ಚೀಸ್​​ನಲ್ಲಿ ನೊಣ ಪತ್ತೆ!

Share :

Published April 13, 2024 at 4:41pm

Update April 13, 2024 at 4:58pm

    ಪ್ರತಿಯೊಬ್ಬರೂ ತಿನ್ನುವ ತಿಂಡಿಯನ್ನು ಒಮ್ಮೆಯಾದರೂ ಪರೀಕ್ಷಿಸಿ

    ರೆಸ್ಟೋರೆಂಟ್‌ವೊಂದರಲ್ಲಿ ಆರ್ಡರ್​ ಮಾಡಿದ್ದ ವ್ಯಕ್ತಿಗೆ ಫುಲ್​ ಶಾಕ್​

    ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಯ್ತು ಈ ವಿಡಿಯೋ

ಚಂಡೀಗಢ: ಇತ್ತೀಚಿನ ದಿನಗಳಲ್ಲಿ ಜನರು ತಿನ್ನುವ ಊಟದಲ್ಲಿ ಸತ್ತ ಜಿರಳೆ, ಹುಳುಗಳು ಪತ್ತೆಯಾಗಿದ್ದವು. ಇದೀಗ ವ್ಯಕ್ತಿಯೊಬ್ಬ ರೆಸ್ಟೋರೆಂಟ್‌ವೊಂದರಲ್ಲಿ ಆರ್ಡರ್​ ಮಾಡಿದ್ದ ವೆಜ್ ಚೀಸ್ ಟ್ಯಾಕೋದಲ್ಲಿ ಸತ್ತ ನೊಣ ಪತ್ತೆಯಾಗಿದೆ. ಇದನ್ನು ನೋಡಿದ ಪಂಜಾಬ್‌ನ ಫುಡ್ ವ್ಲಾಗರ್ ಕೂಡಲೇ ವೀಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾನೆ.

ಕಳೆದ ರಾತ್ರಿ 1:20ಕ್ಕೆ ನಾನು ವೆಜ್ ಚೀಸ್ ಟ್ಯಾಕೋವನ್ನು ಆರ್ಡರ್ ಮಾಡಿದ್ದೇನೆ. ಆರ್ಡರ್ ಬಂದ ಬಳಿಕ ಅದನ್ನು ನಾನು ತಿನ್ನುವ ಮೊದಲು ಪರೀಕ್ಷಿಸಿದೆ. ಏಕೆಂದರೆ ಅದು ತುಂಬಾ ಎಣ್ಣೆಯುಕ್ತವಾಗಿತ್ತು. ನನ್ನ ಆರ್ಡರ್ ಮಾಡಿದ್ದ ಟ್ಯಾಕೋದಲ್ಲಿ ಸತ್ತ ನೊಣ ನೋಡಿ ಒಂದು ಕ್ಷಣ ಶಾಕ್​ ಆಗಿಬಿಟ್ಟೆ. ಪ್ರತಿಯೊಬ್ಬರೂ ತಮ್ಮ ಆಹಾರವನ್ನು ಎಚ್ಚರಿಕೆಯಿಂದ ಪರೀಕ್ಷಿಸಿ ತಿನ್ನಲು ಸುರಕ್ಷಿತವಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ ಎಂದು ಶೇರ್​ ಮಾಡಿಕೊಂಡ ಪೋಸ್ಟ್ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ಮಹಿಳೆಯರೇ ಎಚ್ಚರ.. ಮಗನೊಂದಿಗೆ ಸರಗಳ್ಳತನ ಮಾಡುತ್ತಿದ್ದ ತಾಯಿ ಅರೆಸ್ಟ್

ಇನ್ನು ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಕಳವಳ ವ್ಯಕ್ತಪಡಿಸಿದ್ದಾರೆ. ಓರ್ವ ನೆಟ್ಟಿಗ ನನಗೂ ಕೂಡ ಇದೇ ರೀತಿಯ ಅನುಭವ ಆಗಿದೆ. ನಾನು ತಿಂದ ಆಹಾರದಲ್ಲಿ ಕೋಳಿ ರೆಕ್ಕೆಗಳು ಪತ್ತೆಯಾಗಿದ್ದವು ಎಂದು ಕಾಮೆಂಟ್​ ಮಾಡಿದ್ದಾರೆ. ಈ ವಿಡಿಯೋ ವೈರಲ್​ ಆಗುತ್ತಿದ್ದಂತೆ ಬರ್ಗರ್ ಕಿಂಗ್‌ನ ಸಿಬ್ಬಂದಿ ಪ್ರತಿಕ್ರಿಯೆ ನೀಡಿ, ನಾವು ಅಂತಹ ಅನುಭವವನ್ನು ನೀಡಲು ಎಂದಿಗೂ ಉದ್ದೇಶಿಸಿಲ್ಲ. ದಯವಿಟ್ಟು ನಿಮ್ಮ ಫೊನ್​ ನಂಬರ್​ ಹಾಗೂ ಸ್ಟೋರ್ ವಿಳಾಸ ಮತ್ತು ಆರ್ಡರ್ ಐಡಿಯನ್ನು ನಮಗೆ DM ಮಾಡಬಹುದೇ? ಇದರಿಂದ ನಾವು ನಿಮ್ಮನ್ನು ಸಂಪರ್ಕಿಸಬಹುದು? ನಾವು ಇದನ್ನು ಸಂಪೂರ್ಣವಾಗಿ ತನಿಖೆ ಮಾಡುತ್ತೇವೆ ಎಂದು ಹೇಳಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಗ್ರಾಹಕರೇ ಫುಡ್​ ಆರ್ಡರ್​​ ಮಾಡೋ ಮುನ್ನ ಎಚ್ಚರದಿಂದಿರಿ! ವೆಜ್​ ಚೀಸ್​​ನಲ್ಲಿ ನೊಣ ಪತ್ತೆ!

https://newsfirstlive.com/wp-content/uploads/2024/04/Dead-Fly.jpg

Load More