newsfirstkannada.com

ಅಚ್ಚರಿಯಾದ್ರೂ ಸತ್ಯ..! ಸತ್ತಿದ್ದಾನೆಂದು ಆಸ್ಪತ್ರೆಯಿಂದ ಮನೆಗೆ ತರ್ತಿದ್ದಾಗ ವ್ಯಕ್ತಿಗೆ ಮರುಜನ್ಮ ಕೊಟ್ಟ ರಸ್ತೆ ಗುಂಡಿಗಳು..!

Share :

Published January 13, 2024 at 8:23am

    ಸಾವನ್ನಪ್ಪಿದ್ದಾರೆ ಎಂದು ದರ್ಶನ್ ದೇಹವನ್ನು ಮನೆಗೆ ರವಾನಿಸುತ್ತಿದ್ರು

    ಮುಂದಿನ ಕಾರ್ಯಕ್ಕೆ ಜಮಾಯಿಸಿದ್ದ ಕುಟುಂಬಸ್ಥರು, ಸಂಬಂಧಿಕರು

    ಌಂಬುಲೆನ್ಸ್​ ರಸ್ತೆ ಗುಂಡಿಗಳಲ್ಲಿ ಇಳಿಯುತ್ತಿದ್ದಂತೆ ಆಶ್ಚರ್ಯ ಘಟನೆ

ಸಿಲಿಕಾನ್ ಸಿಟಿಯಲ್ಲಿ ರಸ್ತೆ ಗುಂಡಿಗಳಿಂದ ಅದೆಷ್ಟೋ ಜನರು ಕೊನೆಯುಸಿರೆಳೆದಿದ್ದಾರೆ. ಹದಗೆಟ್ಟ ರಸ್ತೆಗಳನ್ನು ನೋಡಿ ಜನರು ಬಿಬಿಎಂಪಿಗೆ ಹಿಡಿಶಾಪ ಹಾಕಿದ್ದಾರೆ. ಆದ್ರೆ ಈ ಕೇಸ್​ನಲ್ಲಿ ರಸ್ತೆ ಗುಂಡಿಗಳೇ ಸಾವನ್ನಪ್ಪಿದ್ದ ವ್ಯಕ್ತಿಗೆ ಪುನರ್ಜನ್ಮ ನೀಡಿವೆ.

ಸಿಲಿಕಾನ್ ಸಿಟಿ ರಸ್ತೆಗಳು ಅಂತಾರಾಷ್ಟ್ರೀಯ ಲೆವೆಲ್​ಗೂ ಸರಿಸಾಟಿಯಿಲ್ಲ. ಮೈಕೈ ನೋವಾಗಿದ್ರೆ ಅಥವಾ ದೇಹದ ಮೂಳೆ ಎಲ್ಲಾದ್ರೂ ಹಿಡ್ಕೊಂಡಿದ್ರೆ ಅದೆಲ್ಲ ಸಲೀಸಾಗಿ ಮಾಯವಾಗಬೇಕು. ಅಂತಹ ವ್ಯವಸ್ಥೆ ಬೆಂಗಳೂರಿನ ರಸ್ತೆಯಲ್ಲಿದೆ. ಜಸ್ಟ್​ ಸಿಲಿಕಾನ್ ಸಿಟಿಯ ರಸ್ತೆಗಳಲ್ಲಿ ಓಡಾಡಿದ್ರೆ ಸಾಕು ಮೈಕೈ ನೋವೆಲ್ಲ ಮಾಯವಾಗಿ ಹೊಸ ನೋವು ಬಂದ್​ಬಿಡುತ್ತೆ. ಅದರಲ್ಲೂ ಕೆಲವರಂತೂ ಪಾಪ ರಸ್ತೆಯಲ್ಲಿ ಸಂಚರಿಸಲು ಹೋಗಿ ಪ್ರಾಣ ಕಳೆದುಕೊಂಡಿದ್ದಾರೆ. ಬೆಂಗಳೂರಿನ ರಸ್ತೆ ಗುಂಡಿಗಳ ಪರಿಸ್ಥಿತಿ ಹೀಗಿರುವಾಗ ಇಲ್ಲಿ ರಸ್ತೆ ಗುಂಡಿಗಳೇ ಒಬ್ಬನಿಗೆ ಪುನರ್ಜನ್ಮ ನೀಡಿವೆ.

ವ್ಯಕ್ತಿಗೆ ಪುನರ್ಜನ್ಮ ಕೊಟ್ಟ ರಸ್ತೆ ಗುಂಡಿಗಳು

ಈ ಆಶ್ಚರ್ಯಕಾರಿ ಘಟನೆ ನಂಬಲಸಾಧ್ಯವಾದ್ರೂ ನೀವು ನಂಬಲೇಬೇಕು. ಅಷ್ಟಕ್ಕೂ ಈ ಘಟನೆ ನಡೆದಿರುವುದು ಹರ್ಯಾಣದಲ್ಲಿ. ಆಂಬ್ಯುಲೆನ್ಸ್ ಸಾವನ್ನಪ್ಪಿದ್ದಾನೆಂದು ವ್ಯಕ್ತಿಯ ಮೃತದೇಹವನ್ನು ಆಂಬುಲೆನ್ಸ್​ನಲ್ಲಿ ಕೊಂಡೊಯ್ಯುವಾಗ ರಸ್ತೆಯ ಗುಂಡಿ ಆತನಿಗೆ ಪುನರ್ಜನ್ಮ ನೀಡಿದೆ. ಌಂಬುಲೆನ್ಸ್​ ರಸ್ತೆ ಗುಂಡಿಗೆ ಇಳಿದು ಅಲ್ಲಾಡಿದ ತಕ್ಷಣವೇ ಸಾವನ್ನಪ್ಪಿದ್ದ ವ್ಯಕ್ತಿ ಜೀವಂತವಾಗಿದ್ದಾನೆ.

ರಸ್ತೆ ಗುಂಡಿಗಳಿಂದಲೇ ಪುನರ್ಜನ್ಮ!

  • ಜೀವರಕ್ಷಕ ಌಂಬುಲೆನ್ಸ್​ ಹರ್ಯಾಣದ ವ್ಯಕ್ತಿಗೆ ಅಕ್ಷರಶಃ ಜೀವರಕ್ಷಕ
  • ಸಾವನ್ನಪ್ಪಿದ್ದಾರೆಂದ ದರ್ಶನ್ ಸಿಂಗ್ ದೇಹವನ್ನು ಮನೆಗೆ ರವಾನೆ
  • ಮುಂದಿನ ಕಾರ್ಯಕ್ಕೆ ಜಮಾಯಿಸಿದ್ದ ಕುಟುಂಬಸ್ಥರು, ಸಂಬಂಧಿಕರು
  • ಌಂಬುಲೆನ್ಸ್​ ರಸ್ತೆ ಗುಂಡಿಗಳಲ್ಲಿ ಇಳಿಯುತ್ತಿದ್ದಂತೆ ಆಶ್ಚರ್ಯಕಾರಿ ಘಟನೆ
  • ಌಂಬುಲೆನ್ಸ್‌ನಲ್ಲಿ ದರ್ಶನ್ ಕೈ ಅಲ್ಲಾಡುತ್ತಿರುವುದು ಮೊಮ್ಮಗನ ಗಮನಕ್ಕೆ
  • ಹೃದಯ ಬಡಿತ ಗ್ರಹಿಸಿ ಚಾಲಕನಿಗೆ ಹತ್ತಿರದ ಆಸ್ಪತ್ರೆಗೆ ತೆರಳಲು ಸೂಚನೆ
  • ಪರೀಕ್ಷೆ ಮಾಡಿ ನೋಡಿದ ವೈದ್ಯರಿಂದ ಬದುಕಿದ್ದಾರೆಂದು ಘೋಷಣೆ
  • ಹೃದ್ರೋಗಿ ಸಿಂಗ್ ಸದ್ಯ ಕರ್ನಾಲ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ, ಸ್ಥಿತಿ ಚಿಂತಾಜನಕ
  • ಸಿಂಗ್ ಅವರ ಕುಟುಂಬ ಈ ಘಟನೆಯನ್ನು ಪವಾಡ ಎಂದು ಶ್ಲಾಘಿಸಿದೆ

ಇದೊಂದು ಪವಾಡ. ಈಗ ನನ್ನ ಅಜ್ಜ ಶೀಘ್ರವಾಗಿ ಗುಣಮುಖರಾಗಲಿ ಎಂದು ನಾವು ಆಶಿಸುತ್ತಿದ್ದೇವೆ ಎಂದು ದರ್ಶನ್ ಸಿಂಗ್ ಅವರ ಮೊಮ್ಮಗ ಸೇರಿದಂತೆ ಕುಟುಂಬಸ್ಥರು ಆಶಿಸುತ್ತಿದ್ದಾರೆ. ದೇವರ ದಯೆಯಿಂದ ನಮ್ಮ ತಾತ ಹುಷಾರಾಗುತ್ತಾರೆ ಅನ್ನೋ ಭರವಸೆ ಇದೆ ಅಂತ ದರ್ಶನ್ ಸಿಂಗ್ ಮೊಮ್ಮಗ ಹಾಗೂ ಅವರ ಕುಟುಂಬಸ್ಥರು ಪ್ರಾರ್ಥಿಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಚ್ಚರಿಯಾದ್ರೂ ಸತ್ಯ..! ಸತ್ತಿದ್ದಾನೆಂದು ಆಸ್ಪತ್ರೆಯಿಂದ ಮನೆಗೆ ತರ್ತಿದ್ದಾಗ ವ್ಯಕ್ತಿಗೆ ಮರುಜನ್ಮ ಕೊಟ್ಟ ರಸ್ತೆ ಗುಂಡಿಗಳು..!

https://newsfirstlive.com/wp-content/uploads/2024/01/DARSHAN_SINGH_2.jpg

Load More