ಕ್ಯಾನ್ಸರ್‌ಗಳಲ್ಲೇ ಲಂಗ್ ಕ್ಯಾನ್ಸರ್ 3ನೇ ಅತಿ ಭಯಾನಕ ರೋಗ
ಭಾರತದಲ್ಲಿ 72,510 ಶ್ವಾಸಕೋಶ ಕ್ಯಾನ್ಸರ್ ಪ್ರಕರಣಗಳು ಪತ್ತೆ
ವೈದ್ಯರು ಹೇಳಿದ ಲಕ್ಷಣಗಳು ನಿಮ್ಮಲ್ಲಿದ್ರೆ ಕೂಡಲೇ ಎಚ್ಚರ ವಹಿಸಿ
ಬೆಂಗಳೂರು: ಕ್ಯಾನ್ಸರ್ ಹೆಸರು ಕೇಳಿದ್ರೆ ಸಾಕು ಜನರು ಬೆಚ್ಚಿ ಬಿಳುತ್ತಿದ್ದಾರೆ. ಸದ್ದಿಲ್ಲದೆ ದೇಹ ಹೊಕ್ಕೋ ಈ ಕಾಯಿಲೆ, ಗಮನಕ್ಕೆ ಬರುವುದರೊಳಗೆ ಉಸಿರನ್ನೇ ನಿಲ್ಲಿಸಿ ಬಿಡುತ್ತೆ. ಇಂಥಾ ಮಾರಕ ಕಾಯಿಲೆ ಇದೀಗ ಕನ್ನಡದ ಖ್ಯಾತ ನಿರೂಪಕಿ ಅಪರ್ಣಾರನ್ನು ಬಲಿ ತೆಗೆದುಕೊಂಡಿದೆ. ಇದರ ಬೆನ್ನಲ್ಲೇ ಜನರಲ್ಲಿ ಆತಂಕ ಹೆಚ್ಚುತ್ತಿದೆ. ಈ ಕ್ಯಾನ್ಸರ್ ಬಗ್ಗೆ ಗೂಗಲ್ ನಲ್ಲಿ ಜಾಲಾಡ್ತಿದ್ದಾರೆ.
ಖ್ಯಾತ ನಿರೂಪಕಿ, ನಟಿ ಅಪರ್ಣಾ ಶ್ವಾಸಕೋಶ ಕ್ಯಾನ್ಸರ್ನಿಂದ 2 ವರ್ಷ ಕ್ಯಾನ್ಸರ್ ಜೊತೆ ಹೋರಾಡಿದ್ರು. ಡಾಕ್ಟರ್ 6 ತಿಂಗಳು ಟೈಮ್ ಕೊಟ್ರೆ ಅಪರ್ಣಾ ನಾನಾ.. ನೀನಾ..? ಅಂತ ಹೋರಾಡಿ 2 ವರ್ಷ ಬದುಕಿದ್ರು. ಆದ್ರೆ ಶ್ವಾಸಕೋಶ ಕೊಟ್ಟ ನಿರಂತರ ಬಾದೆಯಿಂದ ಹೋರಾಟದಲ್ಲಿ ಸೋತ ಅಪರ್ಣಾ ಮೊನ್ನೆ ಕೊನೆಯುಸಿರೆಳೆದಿದ್ರು. ಇದರ ಬೆನ್ನಲ್ಲೇ ಇಂಥಾ ಮಾರಕ ರೋಗದ ಬಗ್ಗೆ ತಿಳ್ಕೊಳ್ಳೋಕೆ ಹೆಚ್ಚಿನ ಮಂದಿ ಗೂಗಲ್ ಮೊರೆ ಹೋಗ್ತಿದ್ದಾರೆ. ಪಾಶ್ಚಿಮಾತ್ಯ ದೇಶಗಳಲ್ಲಿ ಶ್ವಾಸಕೋಶ ಕ್ಯಾನ್ಸರ್ ಪ್ರಮಾಣ ಕಡಿಮೆಯಾಗುತ್ತಿದ್ದು, ಭಾರತದಲ್ಲಿ ಇದರ ಪ್ರಮಾಣ ಏರಿಕೆಯಾಗುತ್ತಿದೆ. ಈ ಹಿಂದೆ 70 % ಜನರಲ್ಲಿ ಧೂಮಪಾನ ಮಾಡೋದ್ರಿಂದ ಈ ಶ್ವಾಸಕೋಶ ಕ್ಯಾನ್ಸರ್ ಬರುತ್ತೆ ಎನ್ನಲಾಗ್ತಿತ್ತು. ಆದ್ರೀಗ ಟಾಟಾ ಮೆಡಿಕಲ್ ಸೆಂಟರ್ನ ರಿಸರ್ಚ್ ಪ್ರಕಾರ ಶ್ವಾಸಕೋಶದ ಕ್ಯಾನ್ಸರ್ಗೆ ಒಳಗಾದ ಶೇ.50 ರಷ್ಟು ಮಂದಿ ಧೂಮಪಾನಿಗಳಲ್ಲ ಅನ್ನೋ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ: ಸಿಗರೇಟ್ ಸೇದದವರಿಗೆ ಲಂಗ್ ಕ್ಯಾನ್ಸರ್.. ಅಪರ್ಣಾ ಸಾವಿನ ಬೆನ್ನಲ್ಲೇ ಹೆಚ್ಚಿದ ಆತಂಕ; ಏನಿದು ಅಪಾಯ?
ಶಾಕಿಂಗ್ ಎನಿಸಿದರು ಇದು ನಿಜ. ಧೂಮಪಾನ ಮಾಡೋರಂತೆಯೇ ಧೂಮಪಾನ ಮಾಡದೇ ಇರೋರಲ್ಲೂ ಈ ಶ್ವಾಸಕೋಶ ಕ್ಯಾನ್ಸರ್ ಕಂಡು ಬಂದಿದೆ. ಇದಕ್ಕೆ ಕಾರಣ ವಾಯುಮಾಲಿನ್ಯ ಅಂತ ಹೇಳಲಾಗ್ತಿದೆ. ಅಷ್ಟೇ ಅಲ್ಲ ಕಾರ್ಖಾನೆಯಿಂದ ಹೊರ ಬರುವ ಕೆಮಿಕಲ್ ಮಿಶ್ರಿತ ಹೊಗೆ, ವೆಹಿಕಲ್ನಿಂದ ಬರುವ ಹೊಗೆ ಗಾಳಿಯಲ್ಲಿ ಸೇರಿಕೊಂಡು ಅಶುದ್ಧವಾಗ್ತಿದೆ. ಈ ಗಾಳಿಯನ್ನ ಸೇವಿಸುವುದರಿಂದ ಶ್ವಾಸಕೋಶಕ್ಕೆ ಹಾನಿಯಾಗ್ತಿದ್ದು, ಇದ್ರಿಂದಾಗಿ ಕ್ಯಾನ್ಸರ್ ಬರುತ್ತೆ ಎನ್ನಲಾಗ್ತಿದೆ. ಅಷ್ಟೇ ಅಲ್ಲ ಸ್ಮೋಕ್ ಮಾಡುವವರ ಪಕ್ಕ ಇರೋದು ಜೊತೆಗೆ ಹೆಚ್ಚು ಮೇಕಪ್ ಮಾಡಿಕೊಳ್ಳುವವರಿಗೂ ಈ ಕ್ಯಾನ್ಸರ್ ಹೆಚ್ಚಾಗಿ ಕಂಡು ಬರ್ತಿದೆ.
ಲಂಗ್ ಕ್ಯಾನ್ಸರ್ ಲಕ್ಷಣವೇನು?
ಸಾಕಷ್ಟು ವಿಧಗಳಲ್ಲಿ ಮನುಷ್ಯರಲ್ಲಿ ಕ್ಯಾನ್ಸರ್ ಕಾಣಿಸಿಕೊಳ್ಳುತ್ತದೆ. ಅದರಲ್ಲಿ ವಾಯು ಮಾಲಿನ್ಯ, ಧೂಮಪಾನ, ಆಹಾರ ಸೇವನೆಯಲ್ಲಿ ಬದಲಾವಣೆ, ಅವರಿಗಾಗಿ ಅವರು ಸಮಯ ಕೊಡದಿರುವುದು, ಒತ್ತಡ ಇನ್ನಿತರ ಅಂಶಗಳಿಂದ ಕ್ಯಾನ್ಸರ್ ಕಾಣಿಸಿಕೊಳ್ಳುತ್ತೆ. ದಿನಕ್ಕೆ 10ಕ್ಕೂ ಹೆಚ್ಚು ಜನರು ಕ್ಯಾನ್ಸರ್ನಿಂದ ಬಳಲುತ್ತಿದ್ದಾರೆ. ಅದರಲ್ಲೂ ಐದರಿಂದ ಆರು ಮಹಿಳೆಯರಲ್ಲಿ ಲಂಗ್ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿದೆ. ಏಕೆಂದರೆ ಹೆಣ್ಣು ಮಕ್ಕಳ ಮನೆಯಲ್ಲಿ ಪತಿ, ತಂದೆ, ಮಗ ಹೀಗೆ ಯಾರಾದರೂ ಧೂಮಪಾನ ಮಾಡಿದ್ರೆ, ಧೂಮಪಾನ ಮಾಡುವವರ ಪಕ್ಕದಲ್ಲಿ ನಿಂತುಕೊಂಡರೇ ಅದರಿಂದ ಕೂಡ ಈ ಎಫೆಕ್ಟ್ ಉಂಟಾಗುತ್ತದೆ. ಮುಖ್ಯವಾಗಿ ಒತ್ತಡ, ಡಯಟ್, ಮೇಕಪ್ ವಿಧಾನ, ಫ್ಯಾಮಿಲಿಯಿಂದ ಕಿರಿಕಿರಿ ಆದಾಗಲೂ ಬಹುತೇಕವಾಗಿ ಕ್ಯಾನ್ಸರ್ ಕಾಣಿಸಿಕೊಳ್ಳುತ್ತದೆ.
ಈ ಲಂಗ್ ತುಂಬಾ ಭಯಾನಕವಾಗಿದೆ. ಈ ಲಂಗ್ ಕ್ಯಾನ್ಸರ್ಗೆ ತುತ್ತಾದವರೂ ತುಂಬಾ ಕಷ್ಟವನ್ನು ಅನುಭವಿಸುತ್ತಾರೆ. ಶ್ವಾಸಕೋಶದಲ್ಲಿ ನೀರು ತುಂಬಿಕೊಂಡರೇ ಉಸಿರಾಟಕ್ಕೆ ತೊಂದರೆಯಾಗುತ್ತದೆ. ಲಂಗ್ನಿಂದ ಮೂಳೆಗಳಿಗೆ ಹೋದರೆ ತುಂಬಾ ಕಷ್ಟ. ಮೊದಲು ಇದರಲ್ಲಿ ಮೂರು ಭಾಗಗಳಾಗಿ ವಿಂಗಡಣೆ ಮಾಡುತ್ತೇವೆ. ಸ್ಟೇಜ್ 1 ಸರ್ಜರಿ, ಸ್ಟೇಜ್ 2 ಸರ್ಜರಿ, ಸ್ಟೇಜ್ 3 ಸರ್ಜರಿಯನ್ನು ಮಾಡುತ್ತೇವೆ. ರೇಡಿಯೊ ಥೆರಪಿ, ಕಿಮೋ ಥೆರಪಿಯನ್ನು, ಟಾರ್ಗೆಟ್ ಥೆರಪಿ ಮಾಡಬಹುದು. ಆದರೆ ಇದಕ್ಕೂ ಮುಂದೆ ಹೋದಾಗ ತುಂಬಾ ಕಷ್ಟವಾಗುತ್ತದೆ. ಯಾವುದಾದರೂ ವ್ಯಕ್ತಿ ಈ ಕ್ಯಾನ್ಸರ್ ಕಾಣಿಸಕೊಂಡರೇ ಅವರಿಗೆ ಹಿಮಿನೋ ಥೆರಪಿ ನೀಡುತ್ತೇವೆ. ಉದಾಹರಣೆಗೆ ನಟ ಸಂಜಯ್ ದತ್ ಅವರು ಕ್ಯಾನ್ಸರ್ ನಾಲ್ಕನೇ ಹಂತಕ್ಕೆ ಬಂದಾಗ ಅವರಿಗೆ ಹಿಮಿನೋ ಥೆರಪಿ ಮಾಡಿದ್ದಕ್ಕೆ ಅವರು ಈಗಲೂ ಆರೋಗ್ಯವಾಗಿದ್ದಾರೆ.
ಕ್ಯಾನ್ಸರ್ ಬಂದವಿಗೆ ಮೊದಲು ಕೀಮೋಥೆರಪಿ ಚಿಕಿತ್ಸೆ ನೀಡುತ್ತೇವೆ. ಈ ಕೀಮೋಥೆರಪಿಯಿಂದ ಸಾಕಷ್ಟ ಅಡ್ಡ ಪರಿಣಾಮಗಳು ಇವೆ. ಕೂದಲು ಉದುರುವುದು, ವಾಂತಿ ಬರುತ್ತೆ, ಬಾಯಲ್ಲಿ ಹುಣ್ಣು ಆಗುತ್ತೆ, ಮೈ ಕೈ ನೋವು ಆಗುತ್ತೆ. ಈಗ ಹಿಮಿನೋ ಥೆರಪಿ ಸಾಕಷ್ಟು ಉಪಾಯಕಾರಿಯಾಗಿದೆ. ಈ ಹಿಮಿನೋ ಥೆರಪಿಯನ್ನು ಎಲ್ಲರೂ ತೆಗೆದುಕೊಳ್ಳಲು ಆಗುವುದಿಲ್ಲ. ಈ ಹಿಮಿನೋ ಥೆರಪಿ ಯಾರ ದೇಹಕ್ಕೆ ತಡೆದುಕೊಳ್ಳುವ ಶಕ್ತಿ ಇರುತ್ತದೆ ಅವರಿಗೆ ಮಾತ್ರ ಇದನ್ನು ನೀಡುತ್ತೇವೆ. ಹಿಮಿನೋ ಥೆರಪಿಯೂ ಲಂಗ್ ಕ್ಯಾನ್ಸರ್ನಲ್ಲಿ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಲಂಗ್ ಕ್ಯಾನ್ಸರ್ ಬಂದವರಿಗೆ ಎರಡು ಹಿಮಿನೋ ಥೆರಪಿ ಕೊಟ್ಟು ರೋಗಿಗಳನ್ನು ಉಳಿಸಿಕೊಂಡಿರೋ ಉದಾಹರಣೆ ಇದೆ. ಈ ಹಿಮಿನೋ ಥೆರಪಿ ಚಿಕಿತ್ಸೆ ನೀಡಬೇಕು ಅಂದ್ರೆ ಒಂದು ವರ್ಷಕ್ಕೆ ಬರೋಬ್ಬರಿ 10 ಲಕ್ಷ ರೂಪಾಯಿ ಖರ್ಚು ಆಗುತ್ತೆ.
ಸೀನಿಯರ್ ಆಂಕಾಲಜಿಸ್ಟ್ ಡಾ.ಸಂಪತ್ ಕುಮಾರ್
ಶ್ವಾಸಕೋಶ ಕ್ಯಾನ್ಸರ್ ಪೀಡಿತರಿಗೆ ವಿಪರೀತ ಕೆಮ್ಮು ಇರುತ್ತೆ. ಜೊತೆಗೆ ಉಸಿರಾಟದ ತೊಂದರೆಯೂ ಆಗುತ್ತೆ, ತೂಕ ಇಳಿಕೆ ಆಗೋದು, ಕೆಮ್ಮಿದಾಗ ರಕ್ತಸ್ರಾವವಾಗುತ್ತೆ. ಜೊತೆಗೆ ಎದೆ ನೋವು, ತಲೆನೋವು, ನಿಶಕ್ತಿ, ಮುಖ ಊದಿಕೊಳ್ಳುವ ಲಕ್ಷಣಗಳು ಇರುತ್ತೆ ಅಂತಾರೆ ವೈದ್ಯರು. ಇನ್ನು, ಈ ಲಂಗ್ ಕ್ಯಾನ್ಸರ್ಗೆ ಟ್ರೀಟ್ಮೆಂಟ್ ಇಲ್ವಾ? ಇದ್ದರೆ ಯಾವಾಗ ಟ್ರೀಟ್ಮೆಂಟ್ ಕೊಟ್ರೆ ಈ ಕ್ಯಾನ್ಸರ್ ಕ್ಯೂರ್ ಆಗುತ್ತೆ ಅನ್ನೋ ಬಗ್ಗೆ ನ್ಯೂಸ್ ಫಸ್ಟ್ಗೆ ವೈದ್ಯರು ಮಾಹಿತಿ ಕೊಟ್ಟಿದ್ದಾರೆ. ಈ ಲಂಗ್ ಕ್ಯಾನ್ಸರ್ ಮಾರಕ. ವೈದ್ಯರು ಹೇಳಿದಂತೆ ಲಕ್ಷಣಗಳು ನಿಮ್ಮಲ್ಲಿದ್ರೆ ಎಚ್ಚರ ವಹಿಸಿ. ಜೊತೆಗೆ ಇಂಥಾ ಕ್ಯಾನ್ಸರ್ಗಳಿಂದ ದೂರ ಇರ್ಬೇಕು ಅಂದ್ರೆ ನಿಮಗೋಸ್ಕರ ನೀವು ಟೈಮ್ ಕೊಡಿ. ದಿನಕ್ಕೆ 2 ಗಂಟೆ ಸ್ಟ್ರೆಸ್ ಫ್ರೀಯಾಗಿರಿ ಅಂತ ಡಾಕ್ಟರ್ ಹೇಳಿದ ಕಿವಿಮಾತನ್ನ ಫಾಲೋ ಮಾಡಿ ಉತ್ತಮ ಆರೋಗ್ಯವನ್ನ ನಿಮ್ಮದಾಗಿಸಿಕೊಳ್ಳಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ