/newsfirstlive-kannada/media/post_attachments/wp-content/uploads/2024/07/Money.jpg)
ಕೇಂದ್ರ ಸರ್ಕಾರಿ ನೌಕರರಿಗೆ ಜುಲೈ, 2025ರಲ್ಲಿ ಮತ್ತೆ ತುಟ್ಟಿಭತ್ಯೆ ಏರಿಕೆಯಾಗಲಿದೆ. ದೇಶದಲ್ಲಿನ ಹಣದುಬ್ಬರದ ಅಂಕಿಅಂಶಗಳಿಗೆ ಅನುಗುಣವಾಗಿ ಕಾಲ ಕಾಲಕ್ಕೆ ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಏರಿಕೆ ಮಾಡಲಾಗುತ್ತೆ. ಕೇಂದ್ರ ಸರ್ಕಾರಿ ನೌಕರರ ತುಟ್ಟಿ ಭತ್ಯೆಯನ್ನು ಶೇ.55 ರಿಂದ ಶೇ.59ಕ್ಕೆ ಏರಿಕೆ ಮಾಡಲಾಗುತ್ತೆ. ಜುಲೈನಿಂದ ಈ ಏರಿಕೆ ಜಾರಿಯಾಗಲಿದೆ. ಈ ಬಗ್ಗೆ ಆಗಸ್ಟ್ ಮಧ್ಯಭಾಗ ಇಲ್ಲವೇ, ಹಬ್ಬಗಳ ಸೀಸನ್ ಆದ ಸೆಪ್ಟೆಂಬರ್, ಅಕ್ಟೋಬರ್ನಲ್ಲಿ ಕೇಂದ್ರ ಸರ್ಕಾರ ಕ್ಯಾಬಿನೆಟ್ನಲ್ಲಿ ತೀರ್ಮಾನ ಕೈಗೊಂಡು ಘೋಷಣೆ ಮಾಡಲಿದೆ.
ಇದನ್ನೂ ಓದಿ: ರಾಮಾಯಣದಲ್ಲಿ ಯಶ್ ರಾವಣ ಆದ್ರೆ.. ಹನುಮಾನ್, ಲಕ್ಷ್ಮಣ, ಸೂರ್ಪನಕಿ ಪಾತ್ರ ಮಾಡ್ತಿರೋದು ಯಾರು?
ಕೈಗಾರಿಕಾ ಕಾರ್ಮಿಕರ ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕದ ಆಧಾರದ ಮೇಲೆ ಡಿಎ ಅಥವಾ ತುಟ್ಟಿಯನ್ನು ಲೆಕ್ಕಾಚಾರ ಹಾಕಲಾಗುತ್ತೆ. ಮೇ 2025ರಲ್ಲಿ 0.5 ಪಾಯಿಂಟ್ ಏರಿಕೆಯಾಗಿ 144ಕ್ಕೆ ಏರಿಕೆಯಾಗಿದೆ. ಸೂಚ್ಯಂಕವು ಕಳೆದ 3 ತಿಂಗಳಿನಿಂದ ತೀವ್ರವಾಗಿ ಏರಿಕೆಯಾಗಿದೆ. ಇದರ ಆಧಾರದ ಮೇಲೆ ಜುಲೈ ತಿಂಗಳಲ್ಲಿ ಡಿಎ ಅಥವಾ ತುಟ್ಟಿ ಭತ್ಯೆಯನ್ನು ಶೇ.59ಕ್ಕೆ ಏರಿಕೆ ಮಾಡಬೇಕಾಗಿದೆ. ಡಿಎ ಅನ್ನು ವರ್ಷಕ್ಕೆ 2 ಭಾರಿ ಜನವರಿ ಮತ್ತು ಜುಲೈ ತಿಂಗಳಲ್ಲಿ ಪರಿಷ್ಕರಣೆ ಮಾಡಲಾಗುತ್ತೆ. ಕೈಗಾರಿಕಾ ಕಾರ್ಮಿಕರ ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕವನ್ನೇ ಮಾನದಂಡವಾಗಿ ಇಟ್ಟುಕೊಂಡು ಲೆಕ್ಕಾಚಾರ ಹಾಕಲಾಗುತ್ತೆ.
ಕೇಂದ್ರ ಸರ್ಕಾರವು 8ನೇ ವೇತನ ಆಯೋಗವನ್ನು ಯಾವಾಗ ರಚನೆ ಮಾಡುತ್ತೆ ಎಂಬ ಪ್ರಶ್ನೆ ಕೇಂದ್ರ ಸರ್ಕಾರಿ ನೌಕರರಲ್ಲಿದೆ. ಕೇಂದ್ರ ಸರ್ಕಾರ ಈಗಾಗಲೇ ಈ ವರ್ಷದ ಜನವರಿ ತಿಂಗಳಲ್ಲೇ 8ನೇ ವೇತನ ಆಯೋಗ ರಚನೆಯನ್ನು ಘೋಷಿಸಿದೆ. ಈ ಹಿಂದಿನ ಟ್ರೆಂಡ್, ನಿಯಮಗಳ ಆಧಾರದ ಮೇಲೆ ಹೇಳುವುದಾದರೇ, ವೇತನ ಆಯೋಗವು ತನ್ನ ವರದಿ ಸಲ್ಲಿಸಲು 18 ರಿಂದ 24 ತಿಂಗಳ ಸಮಯ ತೆಗೆದುಕೊಳ್ಳುತ್ತೆ. ಬಳಿಕ ಜಾರಿಗೊಳಿಸಲಾಗುತ್ತೆ. ಹೀಗಾಗಿ ಅದೇ ಸಮಯದ ಲೆಕ್ಕಾಚಾರದ ಮೇಲೆ ಹೇಳುವುದಾದರೇ, 8ನೇ ವೇತನ ಆಯೋಗದ ಶಿಫಾರಸ್ಸುಗಳನ್ನು 2027ರಲ್ಲಿ ಜಾರಿಗೊಳಿಸಲಾಗುತ್ತೆ. ಇದರರ್ಥ 8ನೇ ವೇತನ ಆಯೋಗದ ಶಿಫಾರಸ್ಸು ಜಾರಿ ಆಗುವವರೆಗೂ 7ನೇ ವೇತನ ಆಯೋಗದ ಶಿಫಾರಸ್ಸುಗಳ ಆಧಾರದ ಮೇಲೆ ಕೇಂದ್ರ ಸರ್ಕಾರಿ ನೌಕರರಿಗೆ ಡಿಎ ಏರಿಕೆ ಮಾಡಲಾಗುತ್ತೆ. ಈ ವರ್ಷವೂ ದೀಪಾವಳಿ ಹಬ್ಬದ ವೇಳೆಗೆ ಡಿಎ ಏರಿಕೆಯನ್ನು ಘೋಷಿಸಬಹುದು.
ಇದನ್ನೂ ಓದಿ:ಕೊಡವ ಸಮಾಜದಿಂದ ನಾನೇ ಮೊದಲ ಹೀರೋಯಿನ್.. ರಶ್ಮಿಕಾ ಮಂದಣ್ಣ ಎಡವಟ್ಟು!
7ನೇ ವೇತನ ಆಯೋಗದಲ್ಲಿ ಇದು ಕೊನೆಯ ಡಿಎ ಏರಿಕೆಯಾಗಲಿದೆ. ಏಕೆಂದರೆ, 7ನೇ ವೇತನ ಆಯೋಗದ ಅವಧಿಯೂ 2025ರ ಡಿಸೆಂಬರ್ಗೆ ಅಂತ್ಯವಾಗಲಿದೆ. ಈ ವರ್ಷದ ಜನವರಿಯಲ್ಲಿ 8ನೇ ವೇತನ ಆಯೋಗ ಘೋಷಿಸಲಾಗಿದೆ. ಆದರೆ, ಬಳಿಕ ಈ ನಿಟ್ಟಿನಲ್ಲಿ ಯಾವುದೇ ಬೆಳವಣಿಗೆ ಆಗಿಲ್ಲ. ಕೇಂದ್ರ ಸರ್ಕಾರವು 8ನೇ ವೇತನ ಆಯೋಗಕ್ಕೆ ಅಧ್ಯಕ್ಷರು, ಸದಸ್ಯರನ್ನು ನೇಮಿಸಿಲ್ಲ. 8ನೇ ವೇತನ ಆಯೋಗದ ಟರ್ಮ್ ಆಫ್ ರೆಫರೆನ್ಸ್ ಕೂಡ ರಚನೆಯಾಗಿಲ್ಲ. 8ನೇ ವೇತನ ಆಯೋಗದ ಶಿಫಾರಸ್ಸು ಜಾರಿ ವಿಳಂಬವಾಗುವುದರಿಂದ 2026ರ ಜನವರಿ 1ರಿಂದ ಕೇಂದ್ರ ಸರ್ಕಾರಿ ನೌಕರರಿಗೆ ಹೊಸ ವೇತನ ಶ್ರೇಣಿಯನ್ನು ಸರ್ಕಾರ ರೂಪಿಸಿ ಜಾರಿಗೊಳಿಸಬಹುದು. ಇದರರ್ಥ ಯಾವುದೇ ಸಂಬಳ, ಪೆನ್ಷನ್ ಏರಿಕೆಯನ್ನು ಹೊಸ ವೇತನ ಆಯೋಗದಡಿಯಲ್ಲಿ 2026ರ ಜನವರಿಯಿಂದ 8ನೇ ವೇತನ ಆಯೋಗ ಜಾರಿಯಾಗುವವರೆಗೂ ಸಂಬಳದ ಹಿಂಬಾಕಿಯಾಗಿ ನೀಡಲಾಗುತ್ತೆ. 2025ರ ಜುಲೈನ ಡಿಎ ಏರಿಕೆಯು ಕೇಂದ್ರ ಸರ್ಕಾರಿ ನೌಕರರಿಗೆ ಸ್ಪಲ್ಪ ರಿಲೀಫ್ ನೀಡಲಿದೆ. ಕೇಂದ್ರ ಸರ್ಕಾರಿ ನೌಕರರು ಮುಂದಿನ ವೇತನ ಆಯೋಗದ ಟೈಮ್ ಲೈನ್ ಬಗ್ಗೆ ಸ್ಪಷ್ಟತೆಯನ್ನು ಎದುರು ನೋಡುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ