/newsfirstlive-kannada/media/post_attachments/wp-content/uploads/2025/04/COCONUT-WATER.jpg)
ಡೆನ್ಮಾರ್ಕ್ನಲ್ಲಿ ಏಪ್ರಿಲ್ 4 ರಂದು ಒಂದು ವಿಚಿತ್ರ ಹಾಗೂ ಅತ್ಯಂತ ವಿರಳವಾದ ಪ್ರಕರಣವೊಂದು ನಡೆದಿದೆ. 69 ವರ್ಷದ ವ್ಯಕ್ತಿ ಎಳ ನೀರನ್ನು ಕುಡಿದ ಕಾರಣದಿಂದಾಗಿ ಮೃತಪಟ್ಟಿದ್ದಾರೆ.
ಈ ಒಂದು ಘಟನೆಯನ್ನು ಎಮರ್ಜಿಂಗ್ ಇನ್ಫೆಕ್ಷಿಯಸ್ ಡಿಸೀಸ್ ಜರ್ನಲ್ ವರದಿ ಮಾಡಿದೆ. ಎಕ್ಸ್ಪೈರ್ ಆದ ನೈಸರ್ಗಿಕ ಪದಾರ್ಥಗಳನ್ನು, ಅದು ಕೂಡ ಸ್ವಲ್ಪ ಪ್ರಮಾಣದ ಮಟ್ಟದಲ್ಲಿ ಸೇವಿಸಿದರು ಕೂಡ ಆರೋಗ್ಯಕ್ಕೆ ದೊಡ್ಡ ಅಪಾಯ ತಂದಿಡುತ್ತದೆ ಎಂದು ಎಚ್ಚರಿಸಿದೆ.
ಈ ವರದಿಯ ಪ್ರಕಾರ 69 ವರ್ಷದ ವ್ಯಕ್ತಿ ತುಂಬಾ ದಿನಗಳಿಂದ ಸಂಗ್ರಹಿಸಿ ಇಡಲಾಗಿದ್ದ ಎಳನೀರನ್ನು ಸ್ಟ್ರಾ ಮೂಲಕ ಕುಡಿದಿದ್ದಾನೆ. ಕೂಡಲೇ ಆತನಿಗೆ ಎಳನೀರಿನ ಸ್ವಾದ ಕೆಟ್ಟಿದ್ದು ಗಮನಕ್ಕೆ ಬಂದಿದೆ. ಒಂದು ನಾಲ್ಕು ಗುಟುಕು ಕುಡಿದ ವ್ಯಕ್ತಿ ಅಲ್ಲಿಗೆ ಅದನ್ನು ಚೆಲ್ಲಿದ್ದಾನೆ. ಸಾಯುವ ಮುಂಚೆ ವ್ಯಕ್ತಿ ಹೇಳಿದ ಪ್ರಕಾರ ಎಳನೀರನ್ನು ಕೊಚ್ಚಿ ಕೊಡುವಾಗ ಅದರಲ್ಲಿ ಲೋಳೆ ತರದ ವಸ್ತು ಮತ್ತು ಕೊಳೆತ ಸ್ಥಿತಿಯಲ್ಲಿದ್ದದ್ದು ಕಂಡು ಬಂದಿತ್ತಂತೆ.
ಇದನ್ನೂ ಓದಿ:ವಿಶ್ವದ ರೊಮ್ಯಾಂಟಿಕ್ ಫ್ರೂಟ್.. ಪ್ರಣಯಕ್ಕೆ ಸೂಕ್ತವಾದ ಹಣ್ಣು ಎಂದು ಗುರುತಿಸುವುದು ಯಾವುದನ್ನ ಗೊತ್ತಾ?
ಹೀಗೆ ನಾಲ್ಕೇ ನಾಲ್ಕು ಗುಟುಕು ಎಳನೀರು ಕುಡಿದ ವ್ಯಕ್ತಿಗೆ ತಲೆ ಸುತ್ತು ಮತ್ತು ವಾಂತಿಯಾಗಲು ಶುರುವಾಗಿದೆ. ಮೈಯೆಲ್ಲಾ ವಿಪರೀತವಾಗಿ ಬೆವರಲು ಆರಂಭಿಸಿದೆ. ತನ್ನ ಸಮತೋಲವನ್ನು ತಾನು ಕಾಯ್ದುಕೊಳ್ಳಲು ಆಗದೆ ವ್ಯಕ್ತಿ ಒದ್ದಾಡಿದ್ದಾನೆ. ಕೂಡಲೇ ಆತನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿ ಎಮ್ಆರ್ಐ ಸ್ಕ್ಯಾನ್ ಮಾಡಿ ನೋಡಿದಾಗ ಮೆದುಳಿನಲ್ಲಿ ಬಾವು ಬರುತ್ತಿರುವುದು ಕಂಡು ಬಂದಿದೆ. ಮೊಟೊಬೊಲಿಕ್ ಡಿಸ್ಫಂಕ್ಷನ್ ಎಂದು ವ್ಯಕ್ತಿಗೆ ಚಿಕಿತ್ಸೆ ನೀಡಲು ಆರಂಭಿಸಿದ್ದಾರೆ. ಆದರೆ ಎಳನೀರು ಕುಡಿದಾದ 26 ಗಂಟೆಯೊಳಗೆ ವ್ಯಕ್ತಿ ಮೃತಪಟ್ಟಿದ್ದಾನೆ. ಹೀಗೆ ಕೆಟ್ಟುಹೋದ ಎಳನೀರು ಕುಡಿದಿದ್ದರಿಂದ ಆತನಲ್ಲಿ ಬ್ರೈನ್ ಇನ್ಫೆಕ್ಷನ್ ಆಗಿದೆ ಎಂದು ವೈದ್ಯರು ಹೇಳಿದ್ದಾರೆ.
ಇದನ್ನೂ ಓದಿ:ಖರ್ಜೂರ ತಿನ್ನುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು.. ಇವರು ತಿನ್ನಲೇಬಾರದಾ..?
ಹೀಗಾಗಿ ವೈದ್ಯರು ಮತ್ತು ತಜ್ಞರು ಶೇಖರಿಸಿಟ್ಟ ಎಳನೀರು ಕುಡಿಯುವಾಗ ಎಚ್ಚರವಿರಲಿ. ಅದು ಹೆಚ್ಚು ಕಡಿಮೆ ಕೊಳೆತು ಹೋದ ಸ್ಥಿತಿಯಲ್ಲಿ ಇರುತ್ತದೆ. ಕೊಚ್ಚಲಾಗಿರುವ ಎಳನೀರನ್ನು ಸೇವಿಸದೇ ಇದ್ದಾಗ ಅದನ್ನು ಕೂಡಲೇ ಫ್ರಿಡ್ಜ್ನಲ್ಲಿ ಇಡಬೇಕಾಗುತ್ತದೆ. ಮೂರರಿಂದ ಐದು ಗಂಟೆಗಳ ಕಾಲ ಅದನ್ನು ಆಚೆ ತೆಗೆಯಬಾರದು ಎಂದು ಹೇಳಿದ್ದಾರೆ. ಹೀಗಾಗಿ ಎಳನೀರು ಕುಡಿಯುವ ಮುಂಚೆ ಎಚ್ಚರಿಕೆ ಇರಲಿ. ಅದನ್ನು ಕೊಚ್ಚುವಾಗ ಸರಿಯಾಗಿ ಗಮನಿಸಿ ನೋಡಿ, ಲೋಲೆಯಂತಹ ಪದಾರ್ಥ ಹಾಗೂ ಕೆಟ್ಟ ವಾಸನೆ ಅದಲ್ಲಿ ಕಂಡು ಬಂದರೆ ಅಪ್ಪಿತಪ್ಪಿಯೂ ಕುಡಿಯಬೇಡಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ