newsfirstkannada.com

25 ವರ್ಷದ ಹಿಂದೆ 2,400 ಮಂದಿ ಸಾವು; ಮತ್ತೆ ಭೂಕಂಪಕ್ಕೆ ತುತ್ತಾದ ತೈವಾನ್‌; ಸಾವಿನ ಸಂಖ್ಯೆ ಏರಿಕೆ

Share :

Published April 3, 2024 at 3:11pm

Update April 3, 2024 at 3:16pm

    25 ವರ್ಷಗಳ ಬಳಿಕ ಮತ್ತೆ ಪ್ರಬಲ ಭೂಕಂಪಕ್ಕೆ ತುತ್ತಾದ ತೈವಾನ್!

    ಸೆಪ್ಟೆಂಬರ್ 1999ರಲ್ಲಿ ಬರೋಬ್ಬರಿ 2,400 ಮಂದಿ ದಾರುಣ ಸಾವು

    ಜಪಾನ್ & ಫಿಲಿಪೀನ್ಸ್​​ನಲ್ಲಿ ಸುನಾಮಿ ಸಾಧ್ಯತೆಯ ಎಚ್ಚರಿಕೆ ಸಂದೇಶ

25 ವರ್ಷಗಳ ಬಳಿಕ ಸಂಭವಿಸಿರೋ ಪ್ರಬಲ ಭೂಕಂಪಕ್ಕೆ ತೈವಾನ್ ಸಂಪೂರ್ಣ ನಡುಗಿ ಹೋಗಿದೆ. ತೈವಾನ್‌ ದೇಶದ ಹಲವು ಕಡೆ ಬಹಮಹಡಿ ಕಟ್ಟಡಗಳು ಮಕ್ಕಳ ಆಟಿಕೆ ಸಾಮಾನಿನಂತೆ ಧರೆಗೆ ವಾಲಿವೆ. ಕಟ್ಟಡಗಳ ಅವಶೇಷದಲ್ಲಿ ಸಿಲುಕಿರುವವರ ರಕ್ಷಣಾ ಕಾರ್ಯ ಭರದಿಂದ ಸಾಗಿದೆ.

ಸದ್ಯದ ಮಾಹಿತಿ ಪ್ರಕಾರ ತೈವಾನ್‌ನಲ್ಲಿ ಸಂಭವಿಸಿದ ಭೂಕಂಪಕ್ಕೆ 7 ಮಂದಿ ಸಾವನ್ನಪ್ಪಿದ್ದಾರೆ. 736ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಕಳೆದ 25 ವರ್ಷಗಳಲ್ಲೇ ತೈವಾನ್ ಜನ ಕಾಣದಂಥ ಭೂಕಂಪ ಇದಾಗಿದ್ದು, ರಿಕ್ಟರ್ ಮಾಪಕದಲ್ಲಿ 7.7ರಷ್ಟು ತೀವ್ರತೆ ದಾಖಲಾಗಿದೆ.

ಇದನ್ನೂ ಓದಿ: Tsunami alert: ಭಯಾನಕ ಭೂಕಂಪ, ವಾಲಿದ ಕಟ್ಟಡಗಳು, ಸುನಾಮಿ ಎಚ್ಚರಿಕೆ

25 ವರ್ಷದ ಹಿಂದೆ ತೈವಾನ್‌ ಇದಕ್ಕಿಂತಲೂ ಘೋರ ಭೂಕಂಪಕ್ಕೆ ತುತ್ತಾಗಿತ್ತು. ಸೆಪ್ಟೆಂಬರ್ 1999ರಲ್ಲಿ 7.6 ತೀವ್ರತೆಯ ಭೂಕಂಪ ಸಂಭವಿಸಿದ್ದು, ಬರೋಬ್ಬರಿ 2,400 ಮಂದಿ ಸಾವನ್ನಪ್ಪಿದ್ದರು. ಎರಡೂವರೆ ದಶಕಗಳ ಬಳಿಕ ಮತ್ತೆ ಭಾರೀ ಕಂಪನ ಸಂಭವಿಸಿದೆ. 26 ಕ್ಕೂ ಹೆಚ್ಚು ಕಟ್ಟಡಗಳು ಕುಸಿತಗೊಂಡಿದ್ದು, ಅವಶೇಷಗಳಡಿ ಮತ್ತಷ್ಟು ಜನ ಸಿಲುಕಿರೋ ಸಾಧ್ಯತೆಯಿದೆ ಅಂತ ಹೇಳಲಾಗ್ತಿದೆ.

ಬೆಳಗ್ಗೆ 8 ಗಂಟೆಯ ಸಮಯದಲ್ಲಿ ಈ ಪ್ರಬಲ ಭೂಕಂಪ ಸಂಭವಿಸಿದೆ. ತೈವಾನ್ ಭೂಕಂಪನದಿಂದ ಹಲವು ಬೃಹತ್ ಕಟ್ಟಡಗಳು ನೆಲಸಮವಾಗಿದೆ. ಹಲವು ಪ್ರದೇಶಗಳಲ್ಲಿ ಭೂ ಕುಸಿತ, ಮನೆಗಳು ಧರಾಶಾಹಿ ಆಗಿರುವ ದೃಶ್ಯ ಕಂಡು ಬಂದಿದೆ. ಜಪಾನ್ & ಫಿಲಿಪೀನ್ಸ್​​ನಲ್ಲಿ ಸುನಾಮಿ ಸಾಧ್ಯತೆಯ ಅಲರ್ಟ್ ನೀಡಲಾಗಿದೆ. ತೈವಾನ್​ನಲ್ಲಿ ಸಂಭವಿಸಿದ ಭೂಕಂಪದಿಂದಾಗಿ ಜನರನ್ನ ಕರಾವಳಿ ಪ್ರದೇಶದಿಂದ ಬೇರೆಡೆಗೆ ಸ್ಥಳಾಂತರಿಸಲು ಅಲ್ಲಿನ ಸರ್ಕಾರ ಸೂಚನೆ ನೀಡಿದೆ

ಸೋಷಿಯಲ್ ಮೀಡಿಯಾದಲ್ಲಿ ತೈವಾನ್ ಭೂಕಂಪದ ಹಲವು ದೃಶ್ಯಗಳು ವೈರಲ್ ಆಗಿದ್ದು, ಭೂಮಿ ನಡುಗಿದ ಅಬ್ಬರಕ್ಕೆ ಜನ ಬೆಚ್ಚಿ ಬಿದ್ದಿದ್ದಾರೆ. ವ್ಯಕ್ತಿಯೊಬ್ಬ ಸ್ವಿಮ್ಮಿಂಗ್​ ಪೂಲ್​ ಮಾಡಲು ನೀರಿಗೆ ಇಳಿದಿದ್ದಾನೆ.. ಆತನು ನೀರಿನಲ್ಲಿ ಅತ್ತ-ಇತ್ತ ಅಲ್ಲಾಡುತ್ತಿದ್ದಾನೆ. ಮೆಟ್ರೋ ರೈಲಿನಲ್ಲಿ ಪ್ರಯಾಣಿಸುತ್ತಿದ್ದವರು ಅಪಾಯದಿಂದ ಪಾರಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

25 ವರ್ಷದ ಹಿಂದೆ 2,400 ಮಂದಿ ಸಾವು; ಮತ್ತೆ ಭೂಕಂಪಕ್ಕೆ ತುತ್ತಾದ ತೈವಾನ್‌; ಸಾವಿನ ಸಂಖ್ಯೆ ಏರಿಕೆ

https://newsfirstlive.com/wp-content/uploads/2024/04/Taiwan-Earthquake.jpg

Load More