/newsfirstlive-kannada/media/post_attachments/wp-content/uploads/2024/11/DEVADAT_PADIKAL.jpg)
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಕನ್ನಡಿಗ ದೇವದತ್ತ ಪಡಿಕ್ಕಲ್ ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದಾರೆ. ನಾಳೆ ನಡೆಯಲಿರುವ ಮ್ಯಾಚ್ನಲ್ಲೂ ಅವರಿಂದ ದೊಡ್ಡ ಸ್ಕೋರ್ ಎದುರು ನೋಡುತ್ತಿದ್ದಾರೆ ಅಭಿಮಾನಿಗಳು.
ಇದರ ಮಧ್ಯೆ ಪಡಿಕ್ಕಲ್ ಅಭಿಮಾನಿಗಳಿಗಾಗಿ ಆರ್ಸಿಬಿ ಫ್ರಾಂಚೈಸಿ, ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದೆ. ಆರ್ಸಿಬಿ ಇನ್ಸೈಡರ್ ಸ್ಟೋರಿಸ್ನಲ್ಲಿ ದೇವದತ್ತ ಪಡಿಕ್ಕಲ್, ಮುಕ್ತವಾಗಿ ಮಾತನ್ನಾಡಿದ್ದಾರೆ.
ಇದನ್ನೂ ಓದಿ: ಮತ್ತೆ CSK ಸೋಲಿಸಿದ ಆರ್ಸಿಬಿ.. ಆಫ್ ದಿ ಫೀಲ್ಡ್ನಲ್ಲೂ ಬೆಂಗಳೂರೇ ನಂಬರ್ ಒನ್..!
ಮಾತುಕತೆಯ ಆರಂಭದಲ್ಲೇ ಮಿಸ್ಟರ್ ನಾಗ್ಸ್ ವಿರುದ್ಧ ಬೌಲಿಂಗ್ ಮಾಡೋದಾಗಿ ಚಾಲೆಂಜ್ ಹಾಕಿದ್ದಾರೆ. ನೀವು ಬ್ಯಾಟಿಂಗ್ಗೆ ಬನ್ನಿ, ನಾನು ಬಾಲ್ ಮಾಡುತ್ತೇನೆ ಎಂದು ತಮಾಷೆ ಮಾಡಿದ್ದಾರೆ. ಅಲ್ಲದೇ, ಈ ಹಿಂದೆ ಎಲ್ಎಸ್ಜಿ ಮತ್ತು ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಯಲ್ಲಿ ಆಡಿದ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ಮತ್ತೆ ಆರ್ಸಿಬಿಗೆ ಕಂಬ್ಯಾಕ್ ಮಾಡಿರುವ ಬಗ್ಗೆ ಮಾತನಾಡಿ, ಒದು ಒಳ್ಳೆಯ ಅನುಭವ. ತುಂಬಾ ಖುಷಿ ಇದೆ ಎಂದರು. ಇದೇ ವೇಳೆ ಇನ್ಸ್ಟಾಗ್ರಾಮ್ನಲ್ಲಿ ಇರುವ ಫೋಟೋಗಳ ಬಗ್ಗೆ ನಾಗ್ಸ್ ಪ್ರಶ್ನೆ ಮಾಡಿದ್ದಾರೆ. ಯಾಕೆ ನೀವು ಕೋರಿಯನ್ ಬಾಯ್ ಆಗಿದ್ದು ಎಂದು ನಕ್ಕಿದ್ದಾರೆ. ಅದಕ್ಕೆ ಉತ್ತರಿಸಿದ ಪಡಿಕ್ಕಲ್ ಸದ್ಯ ಇರೋ ಟ್ರೆಂಡ್ ಅದೇ. ಅದಕ್ಕೆ ಆ ರೀತಿಯ ಬಟ್ಟೆಗಳನ್ನ ಹಾಕಿದ್ದೀನಿ ಎಂದಿದ್ದಾರೆ. ಆಗ, ನಿಮ್ಮ ಈ ರೀತಿಯ ಫೋಟೋಗಳನ್ನು ನೋಡಿ DMS ಬಂದಿಲ್ವಾ ಅಂತಾ ಕೇಳಿದಾಗ ‘ಹಾಗಲ್ಲ ಏನೂ ಇಲ್ಲ. ನಾನು ಸಿಂಪಲ್ ಹುಡುಗ’ ಎಂದಿದ್ದಾರೆ. ನಂತರ ನಾಗ್ಸ್ ಪಡಿಕ್ಕಲ್ ಅವರ ಪೋಸ್ಟ್ಗೆ ಬಂದಿರುವ ಕಾಮೆಂಟ್ಸ್ ಓದಿದ್ದಾರೆ. ಕೊನೆಗೆ ಇಬ್ಬರು, ‘ಆರ್ಸಿಬಿಯಲ್ಲಿರೋ ಸುಖ ಗೊತ್ತೇ ಇರಲಿಲ್ವ.. ’ ಅಂತಾ ಇಬ್ಬರು ಹಾಡಿದ್ದಾರೆ. ಇಬ್ಬರ ನಡುವಿನ ಮಾತುಕತೆ ಸಖತ್ ಫನ್ನಿಯಾಗಿದ್ದು, ವೀಕ್ಷಕರಿಗೆ ಮಸ್ತ್ ಎಂಟರ್ಟೈನ್ ಮಾಡ್ತಿದೆ.
ಇದನ್ನೂ ಓದಿ: RCB ಪರ ಚೊಚ್ಚಲ ಪಂದ್ಯ ಆಡಲು ಕನ್ನಡಿಗ ರೆಡಿ.. ದೊಡ್ಡ ನಿರೀಕ್ಷೆಯಲ್ಲಿ ಕರ್ನಾಟಕದ ಅಭಿಮಾನಿಗಳು..!
𝐍𝐚𝐦𝐦𝐚 𝐃𝐃𝐏 𝐦𝐞𝐞𝐭𝐬 𝐌𝐫. 𝐍𝐚𝐠𝐬 🤝
In this hilarious episode of @bigbasket_com presents RCB Insider, Mr. Nags forces Dev to do weird festival wishes, checks his DMs and plays cricket with him. 😂
Watch now! 🎥#PlayBold#ನಮ್ಮRCB#IPL2025pic.twitter.com/OurNUEANDB— Royal Challengers Bengaluru (@RCBTweets) April 1, 2025
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್