ಪಾಕ್​ಗೆ ಚೀನಾ ನೀಡಿದ್ದ 2 ಕ್ಷಿಪಣಿ ಛಿದ್ರಛಿದ್ರ.. ಗೋಲ್ಡನ್ ಟೆಂಪಲ್ ಟಾರ್ಗೆಟ್​ ಮಾಡಿದ್ದ ಪಾಪಿಸ್ತಾನ್..?

author-image
Ganesh
Updated On
ಪಾಕ್​ಗೆ ಚೀನಾ ನೀಡಿದ್ದ 2 ಕ್ಷಿಪಣಿ ಛಿದ್ರಛಿದ್ರ.. ಗೋಲ್ಡನ್ ಟೆಂಪಲ್ ಟಾರ್ಗೆಟ್​ ಮಾಡಿದ್ದ ಪಾಪಿಸ್ತಾನ್..?
Advertisment
  • ಕಾಲು ಕೆದರಿ ಯುದ್ಧಕ್ಕೆ ಬರುತ್ತಿದೆ ಪಾಪಿ ಪಾಕಿಸ್ತಾನ
  • ಭಾರತದ ಏರ್​ ಡಿಫೆನ್ಸ್​ ಸಿಸ್ಟಮ್​ನಿಂದ ತಕ್ಕ ಉತ್ತರ
  • ಪಾಕ್​​ ಕ್ಷಿಪಣಿ ದಾಳಿ ಕಂಡು ಗ್ರಾಮಸ್ಥರು ಏನಂದ್ರು..?

ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ದಶಕಗಳಿಂದ ನೆಲೆಯೂರಿದ್ದ ಭಯೋತ್ಪಾದಕ ನೆಲೆಗಳ ಮೇಲೆ ಭಾರತ ಆಪರೇಷನ್ ಸಿಂಧೂರ್ ನಡೆಸಿದೆ. ಬೆನ್ನಲ್ಲೇ ಎರಡು ದೇಶಗಳ ನಡುವೆ ಯುದ್ಧದ ವಾತಾವರಣ ನಿರ್ಮಾಣ ಆಗಿದೆ. ಉಗ್ರರ ಸದೆಬಡಿದಿರೋದನ್ನು ಸಹಿಸದ ಪಾಕಿಸ್ತಾನ, ಭಾರತದತ್ತ ಕಾಲು ಕೆದರಿ ಯುದ್ಧಕ್ಕೆ ಬರುತ್ತಿದೆ.

ಇದನ್ನೂ ಓದಿ: ಎಲ್ಲಾ ಪೀಸ್ ಪೀಸ್..​! ಮುರಿದುಬಿದ್ದ ಭಯದ ಮನೆಗಳು.. ಎಲ್ಲೆಲ್ಲೂ ಸ್ಮಶಾನ ಗಾಬರಿ..!

ಅಂತೆಯೇ ಭಾರತದ ಮೇಲೆ ಪಾಕಿಸ್ತಾನ ಕ್ಷಿಪಣಿ ದಾಳಿಗೆ ಪ್ರಯತ್ನ ಮಾಡಿರೋದು ಇಂದು ಬೆಳಕಿಗೆ ಬಂದಿದೆ. ಇದು ಭಾರತದ ಏರ್​ ಡಿಫೆನ್ಸ್ ಸಿಸ್ಟಮ್​​ಗೆ ಗೊತ್ತಾಗಿದ್ದು, ಕ್ಷಣಾರ್ಧದಲ್ಲಿ ಹೊಡೆದು ಹಾಕಿದೆ. ಪಂಜಾಬ್​ನ ಅಮೃತಸರ-ಬಾಟಲಾ ಬಳಿಯ ಜೆಥುವಾಲ್ ಗ್ರಾಮದ ಬಳಿ ಪಾಕ್​​ ಮಿಸೈಲ್​ ಅನ್ನು ಹೊಡೆದು ಹಾಕಲಾಗಿದೆ. ಪಾಕಿಸ್ತಾನದ ಕ್ಷಿಪಣಿಯು ಗ್ರಾಮದ ಹೊಲದಲ್ಲಿ ಪತ್ತೆಯಾಗಿದ್ದು, ಇದನ್ನು ನೋಡಿದ ಸ್ಥಳೀಯರು ಒಂದು ಕ್ಷಣ ಗಾಬರಿಯಾಗಿದ್ದಾರೆ.

ಇದನ್ನೂ ಓದಿ: ಆಪರೇಷನ್ ಸಿಂಧೂರ್​​ಗೆ ಬೆಂಗಳೂರು ಕನೆಕ್ಷನ್.. ಉಗ್ರರ ನೆಲೆ ಧ್ವಂಸ ಮಾಡಿದ್ದು ಕರ್ನಾಟಕದ ಡ್ರೋಣ್..!

ಪಾಕಿಸ್ತಾನದ ಕ್ಷಿಪಣಿಯು ಛಿದ್ರಛಿದ್ರವಾಗಿ ಬಿದ್ದಿದೆ. ಅದರ ಕೆಲವು ಭಾಗಗಳು ಅನೇಕ ಸ್ಥಳಗಳಲ್ಲಿ ಬಿದ್ದಿವೆ. ಕೆಲವು ಸಣ್ಣಪುಟ್ಟ ಪಾರ್ಟ್ಸ್​ ಗ್ರಾಮದಲ್ಲಿರುವ ಮನೆ ಮೇಲೂ ಬಿದ್ದಿದೆ. ಯಾವುದೇ ಪ್ರಾಣ ಹಾನಿ ಆಗಿಲ್ಲ. ಮಧ್ಯರಾತ್ರಿ ಸುಮಾರು 1.30ರ ಸುಮಾರಿಗೆ ಕ್ಷಿಪಣಿ ಬಂದು ಬಿದ್ದಿದೆ ಅಂತಾ ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಭಾರತದ ಮೇಲೆ ಮಿಸೈಲ್ ದಾಳಿಗೆ ಪಾಕ್ ಯತ್ನ.. ಹೊಡೆದುರುಳಿಸಿದ ನಮ್ಮ ಏರ್​ ಡಿಫೆನ್ಸ್​ ಸಿಸ್ಟಮ್..!

publive-image

ನಿಗೂಢವಾದ ಶಬ್ದ ಕೇಳಿದ ಜನರು ನಿದ್ದೆಯಿಂದ ಎದ್ದು ಗಾಬರಿ ಆಗಿದ್ದಾರೆ. ಈ ಶಬ್ಧವು ಪಂಜಾಬ್​ನ ಅಮೃತಸರ ಸಿಟಿವರೆಗೂ ಕೇಳಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ನೆಲಕ್ಕೆ ಐದು ಫೀಟ್ ಉದ್ದದ ಸಿಲಿಂಡರ್ ಆಕಾರದ ಕ್ಷಿಪಣಿ ಇದಾಗಿದೆ. ಅದು ನಮ್ಮ ಹೊಲದಲ್ಲಿ ಬಿದ್ದಿದೆ ಎಂದು ಬಾಲದೇವ್ ಸಿಂಗ್ ಅನ್ನೋರು ತಿಳಿಸಿದ್ದಾರೆ.

ಅಲ್ಲಿನ ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಮೈದಾನದಲ್ಲಿ ಸಿಲಿಂಡರ್ ಆಕಾರದ ಕ್ಷಿಪಣಿ ಬಿದ್ದಿದೆ. ಆದರೆ ನೆಲಕ್ಕೆ ಬಿದ್ದಿರುವ ಕ್ಷಿಪಣಿಯು ಯಾವುದೇ ಹಾನಿ ಆಗಿಲ್ಲ. ಅದು ಬಿದ್ದಾಗ ಸ್ಫೋಟಗೊಂಡಿಲ್ಲ. ಹೊಲದಲ್ಲಿ ಬಿದ್ದ ಕ್ಷಿಪಣಿಯನ್ನ ಕಂಡು ಕೃಷಿಕರು ನಮಗೆ ಮಾಹಿತಿ ನೀಡಿದರು. ಕೂಡಲೇ ಸ್ಥಳಕ್ಕೆ ಬಂದು ಅದನ್ನು ಪರೀಕ್ಷೆಗೆ ಒಳಪಡಿಸಿದಾಗ ಅಸಲಿ ವಿಚಾರ ಗೊತ್ತಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಆಪರೇಷನ್ ಸಿಂಧೂರ್​ ವೇಳೆ ಆಗಿದ್ದೇನು? ಪಾಕ್​​ನ ಅಸಲಿ ಬಂಡವಾಳ ಬಯಲು ಮಾಡಿದ ಪಾಕಿಸ್ತಾನಿ ಪ್ರಜೆ..!

publive-image

ತನಿಖೆ ವೇಳೆ ಅಸಲಿ ವಿಚಾರ ಗೊತ್ತಾಗಿದ್ದೇನು?

ಅಂದ್ಹಾಗೆ ಪಾಕಿಸ್ತಾನ ಉಡಾಯಿಸಿದ್ದು ಕೇವಲ ಒಂದು ಕ್ಷಿಪಣಿ ಅಲ್ಲ. ಎರಡು ಕ್ಷಿಪಣಿಗಳನ್ನ ಭಾರತದತ್ತ ಹಾರಿಸಿತ್ತು. ಪಾಕಿಸ್ತಾನ ಹಾರಿಸಿದ್ದ ಕ್ಷಿಪಣಿಗಳು ಪಾಕಿಸ್ತಾನದಲ್ಲ. ಪಾಕಿಸ್ತಾನಕ್ಕೆ ಚೀನಾ ನೀಡಿರುವ ಮಿಸೈಲ್ ಅದಾಗಿದೆ. ಕೆಲವು ವರದಿಗಳ ಪ್ರಕಾರ, ಅಮೃತಸರದಲ್ಲಿರುವ ಗೋಲ್ಡನ್ ಟೆಂಪಲ್ ಟಾರ್ಗೆಟ್ ಮಾಡಿ ಉಡಾಯಿಸಲಾಗಿತ್ತು ಎನ್ನಲಾಗಿದೆ. ಆದರೆ, ಅದಕ್ಕೆ ಭಾರತ ಏರ್​ ಡಿಫೆನ್ಸ್ ಸಿಸ್ಟಮ್​​ ದಿಟ್ಟ ಉತ್ತರ ನೀಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment