newsfirstkannada.com

ಒಂದು ಕೋಟಿಗೂ ಹೆಚ್ಚು ಸಾಲ.. ಸಾಲಗಾರರ ಕಾಟಕ್ಕೆ ಮನನೊಂದು ಗೃಹಿಣಿ ಆತ್ಮಹತ್ಯೆ

Share :

Published March 20, 2024 at 12:00pm

  ಸಾಲ ಮಾಡಿಕೊಂಡಿದ್ದ 23 ವರ್ಷದ ಗೃಹಿಣಿ ಆತ್ಮಹತ್ಯೆಗೆ ಶರಣು

  5 ವರ್ಷದ ಕೆಳಗೆ ಎಂಜನಿಯರನ್ನು ಪ್ರೀತಿಸಿ ವಿವಾಹವಾಗಿದ್ದ ಮಹಿಳೆ

  ಒಂದು‌ ಕೋಟಿಗೂ ಹೆಚ್ಚು ಸಾಲ ಮಾಡಿಕೊಂಡು ನೇಣಿಗೆ ಕೊರಳೊಡ್ಡಿದ ಗೃಹಿಣಿ

ಚಿತ್ರದುರ್ಗ: ಸಾಲಗಾರರ ಕಾಟಕ್ಕೆ ಮನನೊಂದು ಗೃಹಿಣಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಪಟ್ಟಣದಲ್ಲಿ ಬೆಳಕಿಗೆ ಬಂದಿದೆ. ಇಲ್ಲಿನ ಬಸವ ಲೇಔಟ್​ ನಿವಾಸಿ ರಂಜಿತಾ (23) ಮೃತ ದುರ್ದೈವಿ.

ರಂಜಿತಾ ಒಂದು‌ ಕೋಟಿಗೂ ಹೆಚ್ಚು ಸಾಲ ಮಾಡಿಕೊಂಡಿದ್ದರು. 5 ವರ್ಷದ ಕೆಳಗೆ ದರ್ಶನ್ ಎಂಬವರನ್ನು ವಿವಾಹವಾಗಿದ್ದರು. ಆಕೆಯ ಪತಿ ದರ್ಶನ್ ನೀರಾವರಿ ಇಲಾಖೆಯಲ್ಲಿ ಎಂಜನಿಯರ್ ಆಗಿದ್ದರು.

ರಂಜಿತಾ ಮೀಟರ್ ಬಡ್ಡಿ ಲೆಕ್ಕದಲ್ಲಿ ಸಾಲ ಮಾಡಿಕೊಂಡಿದ್ದರು ಎಂಬ ಶಂಕೆ ವ್ಯಕ್ತವಾಗಿದ್ದು, ಸಾಲ ಕೊಟ್ಟವರು ಹಣ ವಾಪಸ್ ಕೊಡುವಂತೆ ಪೀಡಿಸುತ್ತಿದ್ದರು ಎಂದು ಹೇಳಲಾಗುತ್ತಿದೆ. ಹೀಗಾಗಿ ರಂಜಿತಾ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಒಂದು ಕೋಟಿಗೂ ಹೆಚ್ಚು ಸಾಲ.. ಸಾಲಗಾರರ ಕಾಟಕ್ಕೆ ಮನನೊಂದು ಗೃಹಿಣಿ ಆತ್ಮಹತ್ಯೆ

https://newsfirstlive.com/wp-content/uploads/2024/03/Mysore-2.jpg

Load More