ಪೋಷಕರ ಜೇಬಿಗೆ ಬಿತ್ತು ಕತ್ತರಿ.. ರಾಜ್ಯದಲ್ಲಿ ಖಾಸಗಿ ಶಾಲಾ ಶುಲ್ಕ ಹೆಚ್ಚಳಕ್ಕೆ ಕೃಪಾ ನಿರ್ಧಾರ; ಎಷ್ಟು?

author-image
admin
Updated On
ಮಕ್ಕಳನ್ನು ಶಾಲೆಗೆ ಸೇರಿಸೋ ಮುನ್ನ ಎಚ್ಚರ! ಪೋಷಕರು ಓದಲೇಬೇಕಾದ ಸ್ಟೋರಿ ಇದು
Advertisment
  • ಹಾಲು, ನೀರು, ಕರೆಂಟ್‌ ಬಿಲ್ ಏರಿಕೆ ಬೆನ್ನಲ್ಲೇ ಮತ್ತೊಂದು ಶಾಕ್‌!
  • ಶೇಕಡಾ 15ರಿಂದ 20ರಷ್ಟು ಶುಲ್ಕ ಹೆಚ್ಚಿಸಲು ಶಾಲೆಗಳ ತೀರ್ಮಾನ
  • ಖಾಸಗಿ ಶಾಲಾ ಒಕ್ಕೂಟ ಕೃಪಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಮಾಹಿತಿ

ಬೆಂಗಳೂರು: ಹಾಲು, ನೀರು, ಕರೆಂಟ್‌ ಬಿಲ್ ಏರಿಕೆಯ ಬೆನ್ನಲ್ಲೇ ನಿಮ್ಮ ಮಕ್ಕಳ ಸ್ಕೂಲ್‌ ಫೀಸ್‌ ಕೂಡ ದುಬಾರಿ ಆಗುತ್ತಿದೆ. ರಾಜ್ಯದಲ್ಲಿ ಶೇಕಡಾ 15ರಿಂದ 20ರಷ್ಟು ಶುಲ್ಕ ಹೆಚ್ಚಿಸಲು ತೀರ್ಮಾನ ಮಾಡಲಾಗಿದೆ ಎಂದು ಖಾಸಗಿ ಶಾಲಾ ಒಕ್ಕೂಟ ಕೃಪಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಅವರು ಈ ಬಗ್ಗೆ ನ್ಯೂಸ್ ಫಸ್ಟ್‌ಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಚಿತ್ರದುರ್ಗದಲ್ಲಿ ಅಪರೂಪದ ದೃಶ್ಯ.. ಮಾಲೀಕನ ಜೊತೆ ವಾಕಿಂಗ್ ಮಾಡುತ್ತೆ ಪ್ರೀತಿಯ ಹುಂಜ..! 

ರಾಜ್ಯದಲ್ಲಿ ಡಿಸೇಲ್, ಪೆಟ್ರೋಲ್ ಹಾಗೂ ವಿದ್ಯುತ್ ದರ ಏರಿಕೆ ಆಗಿದೆ. ಎಲ್ಲದರ ಬೆಲೆ ಕೂಡ ಜಾಸ್ತಿ ಆಗಿದೆ. ಹೀಗಾಗಿ ನಾವು ಕೂಡ ಶುಲ್ಕ ಹೆಚ್ಚಳ ಮಾಡಬೇಕಾದ ಪರಿಸ್ಥಿತಿಗೆ ಸಿಲುಕಿದ್ದೇವೆ. ಕಾನೂನಿನಲ್ಲೇ ಶೇಕಡಾ 15ರಷ್ಟು ಶುಲ್ಕ ಹೆಚ್ಚಳ ಮಾಡಲು ಅವಕಾಶ ಇದೆ. ಹೀಗಾಗಿ ಶಾಲಾ ವಾಹನ ಶುಲ್ಕ ಕೂಡ ಹೆಚ್ಚಳವಾಗಲಿದೆ ಎಂದು ಕೃಪಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ತಿಳಿಸಿದ್ದಾರೆ.

publive-image

ಖಾಸಗಿ ಶಾಲೆಗಳಲ್ಲಿ ಕೆಲಸ ಮಾಡುವ ಶಿಕ್ಷಕರಿಗೆ ನಾವು ಸಂಬಳ ಹೆಚ್ಚಳ ಮಾಡಬೇಕು. ಕಟ್ಟಡದ ತೆರಿಗೆ ಜಾಸ್ತಿ ಆಗಿದೆ. ಡಿಸೇಲ್‌ ದರ ಏರಿಕೆಯಿಂದ ಸಾರಿಗೆ ಖರ್ಚು ಹೆಚ್ಚಾಗಿದೆ. ಇದರಿಂದ ಅನಿವಾರ್ಯವಾಗಿ ನಾವು ಶಾಲಾ ಮಕ್ಕಳ ಶುಲ್ಕ ಮತ್ತು ಶಾಲಾ ಮಕ್ಕಳ ವ್ಯಾನ್ ದರ ಕೂಡ ಜಾಸ್ತಿ ಮಾಡುತ್ತಿದ್ದೇವೆ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment