ಅಬ್ಬಾ.. ಭಾರತದಲ್ಲಿ 5 ಲಕ್ಷ ಜನರ ಸಾವಿಗೆ ಕಾರಣವಾದ ರಣಹದ್ದುಗಳು; ಶಾಕಿಂಗ್ ವರದಿ ಬಹಿರಂಗ!

author-image
Gopal Kulkarni
Updated On
ಅಬ್ಬಾ.. ಭಾರತದಲ್ಲಿ 5 ಲಕ್ಷ ಜನರ ಸಾವಿಗೆ ಕಾರಣವಾದ ರಣಹದ್ದುಗಳು; ಶಾಕಿಂಗ್ ವರದಿ ಬಹಿರಂಗ!
Advertisment
  • ರಣಹದ್ದುಗಳ ಸಂತತಿ ನಾಶದಿಂದ ಜೀವ ಕಳೆದುಕೊಂಡ ಜನರೆಷ್ಟು?
  • ಮನುಷ್ಯನ ಆರೋಗ್ಯಕ್ಕೂ ರಣಹದ್ದುಗಳಿಗೂ ಇದೆ ಒಂದು ನಂಟು
  • 1994ರಲ್ಲಿ ರಣಹದ್ದುಗಳಿಗೆ ಮರಣಶಾಸನ ಬರೆಯಿತು ಆ ಒಂದು ಔಷಧಿ

ಪಕ್ಷಿ ಸಂಕುಲಗಳಲ್ಲಿ ಅನೇಕ ಬಗೆಯ ಪಕ್ಷಿಗಳ ಸಂತತಿ ಕ್ಷೀಣಿಸುತ್ತಾ ಬರುತ್ತಿವೆ. ಗುಬ್ಬಿಯಿಂದ ಹಿಡಿದು ಹಲವಾರು ಪಕ್ಷಿಗಳು ನಮಗೆ ಮೊದಲಿನಷ್ಟು ಕಾಣ ಸಿಗೋದಿಲ್ಲ. ಜಾಗತೀಕರಣ, ಹವಾಮಾನದಲ್ಲಾಗುತ್ತಿರುವ ಬದಲಾವಣೆ. ಮಾನವನ ಸ್ವಯಂಕೃತ ಅಪರಾಧಗಳಿಂದಾಗಿ ನಾವು ಅಮೂಲ್ಯ ಪಕ್ಷಿ ಸಂಕುಲಗಳನ್ನು ಕಳೆದುಕೊಳ್ಳುತ್ತಿದ್ದೇವೆ. ಅಂತಹ ಪಕ್ಷಿಗಳ ಸಾಲಿಗೆ ಬಂದು ಸೇರುತ್ತೆ ರಣಹದ್ದುಗಳು. ಪ್ರಮುಖವಾಗಿ ಭಾರತದಲ್ಲಿ ರಣಹದ್ದುಗಳ ಸಂತತಿ ಕ್ಷೀಣಿಸುತ್ತಾ ಬರುತ್ತಿದೆ. ಇದು ಕೇವಲ ಪಕ್ಷಿ ಸಂತತಿಗೆ ಮಾತ್ರವಲ್ಲ ಮಾನವ ಕುಲಕ್ಕೂ ಸಹ ದೊಡ್ಡ ನಷ್ಟವನ್ನುಂಟು ಮಾಡಿದೆ ಅನ್ನುತ್ತಿದೆ ಅಮೆರಿಕಾದ ಎಕಾನಾಮಿಕ್ ರೀವಿವ್ ಬಿಡುಗಡೆ ಮಾಡಿರುವ ಒಂದು ವರದಿ.

ಇದನ್ನೂ ಓದಿ:ಮಳೆಗಾಲದಲ್ಲಿ ಹೆಚ್ಚಾಗೋ ಅಲರ್ಜಿಗೆ ಏನು ಮಾಡಬೇಕು? ಪೋಷಕರೇ ಮಕ್ಕಳ ಬಗ್ಗೆ ಎಚ್ಚರ!

publive-image

ಜಾನುವಾರುಗಳಿಗೆ ನೀಡುವ ಔಷಧಿಗಳೇ ರಣಹದ್ದುಗಳಿಗೆ ಮರಣಶಾಸನ..!

ಭಾರತದಲ್ಲಿ ರಣಹದ್ದುಗಳ ಸಂತತಿ ಕ್ಷೀಣಿಸಲು ಮೊದಲು ಆರಂಭವಾಗಿದ್ದೇ 1994 ರಿಂದ ಎಂದು ಈ ಅಧ್ಯಯನ ಹೇಳುತ್ತದೆ. ಪ್ರಮುಖವಾಗಿ ಆ ವರ್ಷದಿಂದಲೇ ನಾವು ಜಾನುವಾರುಗಳಿಗೆ ಡೈಕ್ಲೋಫೆನಾಕ್ ಅನ್ನೋ ಔಷಧಿಯನ್ನು ನೀಡಲು ಶುರು ಮಾಡಿದ್ದು. ಈ ಒಂದು ಔಷಧಿ ಆ ಪಕ್ಷಿಗಳ ಸಂಕುಲದ ನಿರ್ನಾಮಕ್ಕೆ ಮೊದಲ ಶಾಸನ ಬರೆದಿದ್ದು. ಸತ್ತ ಜಾನುವಾರುಗಳನ್ನು ತಿಂದ ಈ ಪಕ್ಷಿಗಳಲ್ಲಿಯೂ ಆ ಔಷಧದ ಪರಿಣಾಮದಿಂದಾಗಿ ಅನೇಕ ಸಮಸ್ಯೆಗಳು ಕಂಡು ಬಂದು ಅವುಗಳ ಅವನತಿ ಆರಂಭವಾಯ್ತು. ರಣಹದ್ದುಗಳ ಅವನತಿ ಆರಂಭವಾದ ಕ್ಷಣದಿಂದ ದೇಶದಲ್ಲಿ ಪ್ರಾಣಿಗಳ ಮೃತದೇಹಗಳು ಹಾಗೆಯೇ ಬಿದ್ದು ಕೊಳೆಯಲು ಆರಂಭಿಸಿದವು ಇವು ಅನೇಕ ರೋಗರುಜಿನಗಳನ್ನು ಪಸರಿಸಿದವು. ಇದೇ ಒಂದು ಕಾರಣದಿಂದ ಕಳೆದ 2000 ನೇ ಇಸವಿಯಿಂದ 2005ರವರೆಗೆ ಅಂದ್ರೆ ಕೇವಲ ಒಂದು ವರ್ಷದಲ್ಲಿ 5 ಲಕ್ಷ ಜನರು ತಮ್ಮ ಜೀವವನ್ನು ಕಳೆದುಕೊಂಡಿದ್ದಾರೆ ಎಂದು ಹೇಳುತ್ತದೆ ಅಧ್ಯಯನದ ಸಹ ಲೇಖಕ ಇಯಾಲ್ ಫ್ರ್ಯಾಂಕ್ ಹೇಳುತ್ತಾರೆ.

ಇದನ್ನೂ ಓದಿ: ಪೊದೆಯಲ್ಲಿ ಯುವತಿಯ ಬರ್ಬರ ಹತ್ಯೆ.. ಅತ್ಯಂತ ಹೇಯ ಕೃತ್ಯಕ್ಕೆ ಬೆಚ್ಚಿ ಬಿದ್ದ ಪೊಲೀಸರು; ಆಗಿದ್ದೇನು? 

ರಣಹದ್ದುಗಳನ್ನು ಪರಿಸರದ ನಿರ್ಮಲೀಕರಣದಲ್ಲಿ ಪ್ರಮುಖ ಪಾತ್ರವಹಿಸುವ ಪಕ್ಷಿಗಳು ಎಂದೇ ಗುರುತಿಸಲಾಗುತ್ತದೆ. ಏಕೆಂದರೆ ಅವು ಸತ್ತ ಪ್ರಾಣಿಗಳಲ್ಲಿನ ಪ್ರಾಣಘಾತಕದಂತಹ ಬ್ಯಾಕ್ಟೀರಿಯಾ ಮತ್ತು ರೋಗ ಪಸರಿಸುವಂತ ವೈರಸ್​ಗಳನ್ನು ತಡೆಯುತ್ತಿದ್ದವು. ಇದರಿಂದ ಮಾರಣಾಂತಿಕ ಕಾಯಿಲೆಗಳು ಮನುಷ್ಯರಿಗೆ ಹರಡದಂತೆ ಕಾಯುತ್ತಿದ್ದವು.

publive-image
ಅದು ಮಾತ್ರವಲ್ಲ ನಾಯಿಗಳಿಗೆ ರೇಬಿಸ್ ಚುಚ್ಚುಮದ್ದುಗಳನ್ನು ನೀಡುವುದನ್ನು ಶುರು ಮಾಡಿದ್ದು ಕೂಡ ರಣಹದ್ದುಗಳ ಸಂತತಿಯ ನಾಶಕ್ಕೆ ಕಾರಣವಾಯ್ತು ಎಂದು ಹೇಳಲಾಗುತ್ತಿದೆ. ಒಟ್ಟಾರೆ 2000 ರಿಂದ 2005ರವರೆಗೆ ಒಟ್ಟು 1 ಲಕ್ಷಕ್ಕೂ ಅಧಿಕ ರಣಹದ್ದುಗಳು ಸಾವನ್ನಪ್ಪಿವೆ. ಆದ್ರೆ ಅವುಗಳ ಸಂತತಿ ಕ್ಷೀಣಿಸಿದ ಕಾಣವಾಗಿಯೇ ಸುಮಾರು 5 ಲಕ್ಷ ಜನರು ರಣಹದ್ದುಗಳು ತಡೆಯಬಹುದಾದ ಕಾಯಿಲೆ ಬಂದು ಮೃತಪಟ್ಟಿದ್ದಾರೆ ಎಂದು ಈ ಅಧ್ಯಯನದಲ್ಲಿ ಹೇಳಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment