/newsfirstlive-kannada/media/post_attachments/wp-content/uploads/2025/02/STRESSFULL-LIFE.jpg)
ನಮ್ಮಲ್ಲಿ ಅನೇಕ ಜನರು ವೃತ್ತಿ ಜೀವನ ಹಾಗೂ ವೈಯಕ್ತಿಕ ಜೀವನ ಎರಡನ್ನೂ ಸಮತೂಗಿಸುವಲ್ಲಿ ಎಡವುತ್ತಾರೆ. ಹಲವು ಸಮಯ ಗೊಂದಲಕ್ಕೆ ಸಿಲುಕಿ ಒತ್ತಡದ ಬದುಕನ್ನು ತಮ್ಮದಾಗಿಸಿಕೊಳ್ಳುತ್ತಾರೆ. ಇತ್ತ ವೃತ್ತಿ ಜೀವನವನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ಮಾಡದೇ, ವೈಯಕ್ತಿಕ ಬದುಕಲ್ಲೂ ಹಲವು ಸಮಸ್ಯೆಗಳನ್ನು ಸೃಷ್ಟಿಮಾಡಿಕೊಂಡು ಒದ್ದಾಡುತ್ತಿರುತ್ತಾರೆ. ಆದ್ರೆ ಇದಕ್ಕೆ ಒಂದು ರಾಮಬಾಣ ಇದೆ. ಅದು 8+8+8 ಎಂಬ ನಿಯಮ. ಇದು ನಿಮ್ಮ ದಿನನಿತ್ಯದ ಕಾರ್ಯವನ್ನು ಸರಳಗೊಳಿಸುತ್ತದೆ. ಯಾವುದೇ ರೀತಿಯ ಒತ್ತಡಗಳನ್ನು ಹೇರದೆ ಸರಳವಾಗಿ ನಿಮ್ಮ ದಿನನಿತ್ಯ ಕಾರ್ಯಗಳನ್ನು ಸರಾಗಗೊಳಸುತ್ತದೆ.
8+8+8 ನಿಯಮ ಅಂದ್ರೆ ಇಷ್ಟ 8 ಗಂಟೆಗಳ ಕಾಲ ನಿದ್ದೆ. 8 ಗಂಟೆಗಳ ಕಾಲ ಕೆಲಸ ಹಾಗೂ ಉಳಿದ 8 ಗಂಟೆಗಳ ಕಾಲ ನಿಮ್ಮ ವೈಯಕ್ತಿಕ ಬದುಕಿನೊಂದಿಗೆ ಕಳೆಯುವುದು ಉದಾಹರಣೆಗೆ ಪತ್ನಿಯ ಜೊತೆ ಆಚೆ ಹೋಗುವುದು. ಮಕ್ಕಳೊಂದಿಗೆ ಸಮಯ ಕಳೆಯುವುದು. ಸಿನಿಮಾ, ಪಾರ್ಟಿ ಈ ರೀತಿಯಾಗಿ ನಿಮ್ಮ ಬದುಕನ್ನು ಈ ಎಂಟರ ನಂಟಿನೊಳಗೆ ಬೆಸೆದುಕೊಂಡರೆ ಅತ್ಯಂತ ಸರಳವಾಗಿ ಜೀವನವನ್ನು ನಿಭಾಯಿಸಬಹುದು.
ಇದನ್ನೂ ಓದಿ: UnionBudget2025: ಆದಾಯ ತೆರಿಗೆದಾರರಿಗೆ ಬಿಗ್ ರಿಲೀಫ್.. ₹12 ಲಕ್ಷದವರೆಗೆ ಟ್ಯಾಕ್ಸ್ ಕಟ್ಟುವಂತಿಲ್ಲ!
ಈ ಒಂದು ಪರಿಕಲ್ಪನೆ ಕೇಳಲು ತುಂಬಾ ಸುಂದರವಾಗಿದೆ ಹಾಗೂ ಸರಳವಾಗಿಯೂ ಇದೆ. ಆದ್ರೆ ಅದನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳುವುದೇ ಪ್ರಮುಖ ವಿಷಯ. ಸರಿಯಾದ ಶಿಸ್ತು ಹಾಗೂ ಯೋಜನೆಯೊಂದಿಗೆ ಈ ಒಂದು ರೂಢಿಯನ್ನು ಅಳವಡಿಸಿಕೊಂರೆ ಇದು ನಿಜಕ್ಕೂ ಅದ್ಭುತವಾಗಿ ವರ್ಕೌಟ್ ಆಗುತ್ತದೆ.
ಇದನ್ನೂ ಓದಿ:ಬರೋಬ್ಬರಿ 33 ಕೆಜಿ ತೂಕ ಇಳಿಸಿ ಫುಲ್ ಫಿಟ್ ಆದ ನವಜೋತ್ ಸಿಂಗ್ ಸಿಧು; ಏನಿದರ ಗುಟ್ಟು?
ಅದರಲ್ಲೂ ಭಾರತದಲ್ಲಿ ಜನರು ಕೆಲಸಕ್ಕಾಗಿ ಬಹುದೂರದ ಪ್ರಯಾಣ ಮಾಡಬೇಕಾಗುತ್ತದೆ. ಹೆಚ್ಚಿನ ಹೊತ್ತು ಕಚೇರಿಯಲ್ಲಿ ಕಳೆಯುವ ಅನಿವಾರ್ಯತೆ ಇರುತ್ತದೆ. ಅದರ ಜೊತೆಗೆ ಕುಟುಂಬದ ಜವಾಬ್ದಾರಿಯೂ ಇರುತ್ತದೆ. ಹೀಗಾಗಿ ಕೆಲವೊಂದು ಬಾರಿ ಈ ನಿಯಮವನ್ನು ಅಳವಡಿಸಿಕೊಳ್ಳುವುದು ಅಷ್ಟು ಸರಳವಾಗಿ ಸಾಧ್ಯವಿಲ್ಲ. ಆದರೂ ಅದರಲ್ಲಿ ಒಂದಿಷ್ಟು ಸಮಯವನ್ನು ಮ್ಯಾನೇಜ್ ಮಾಡಿಕೊಳ್ಳಲೇಬೇಕಾಗುತ್ತದೆ. ಶಾಂತಿಯುತ ಬದುಕು ನಮ್ಮದಾಗಿಸಿಕೊಳ್ಳಲು ಕನಿಷ್ಠ 8 ಗಂಟೆ ನಿದ್ರಿಸಲೇಬೇಕು. ಅದರಿಂದ ಮನಸ್ಸು ಪ್ರಫುಲ್ಲವಾಗುವುದರ ಜೊತೆ ಇಡೀ ದಿನ ಚಟುವಟಿಕೆಯಿಂದ ಇರಬಹುದು.ಹೀಗಾಗಿ ಸಾಧ್ಯವಾದಷ್ಟು 8+8+8 ಬದುಕಿನ ನಿಯಮ ನಿಮ್ಮದಾಗಲಿ. ಒತ್ತಡಮುಕ್ತ, ಒದ್ದಾಟದ ಮುಕ್ತ ಬದುಕು ನಿಮ್ಮದಾಗಲಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ