ಟ್ರಂಪ್​ ಗೆಲುವಿಗೆ ಎಲಾನ್​ ಮಸ್ಕ್ ಪ್ರಮುಖ ಪಾತ್ರವಹಿಸಿದ್ದು ಹೇಗೆ? ಯುಎಸ್​​ ಅಧ್ಯಕ್ಷನ ಬಗ್ಗೆ ಟೆಸ್ಲಾ ಸಂಸ್ಥಾಪಕ ಅಂದು ಹೇಳಿದ್ದೇನು?

author-image
Gopal Kulkarni
Updated On
ಟ್ರಂಪ್​ ಗೆಲುವಿಗೆ ಎಲಾನ್​ ಮಸ್ಕ್ ಪ್ರಮುಖ ಪಾತ್ರವಹಿಸಿದ್ದು ಹೇಗೆ? ಯುಎಸ್​​ ಅಧ್ಯಕ್ಷನ ಬಗ್ಗೆ ಟೆಸ್ಲಾ ಸಂಸ್ಥಾಪಕ ಅಂದು ಹೇಳಿದ್ದೇನು?
Advertisment
  • ಟೆಸ್ಲಾ ಸಂಸ್ಥಾಪಕ ಹಾಗೂ ಡೊನಾಲ್ಡ್​ ಟ್ರಂಪ್ ಸ್ನೇಹ ಗಾಢವಾಗಿದ್ದು ಯಾವಾಗ?
  • ಈ ಚುನಾವಣೆಯಲ್ಲಿ ಡೊನಾಲ್ಡ್​ ಟ್ರಂಪ್​ಗೆ ಬೆನ್ನೆಲುಬಾಗಿ ನಿಂತಿದ್ದು ಹೇಗೆ ಮಸ್ಕ್?
  • ಡೊನಾಲ್ಡ್​ ಟ್ರಂಪ್ ಕ್ಯಾಬಿನೆಟ್​ನಲ್ಲಿ ಎಲಾನ್ ಮಸ್ಕ್​ಗೆ ಸಿಗಲಿದೆಯಾ ಸ್ಥಾನಮಾನ?

ಅಮೆರಿಕಾದಲ್ಲಿ ಈಗ ಡೋನಾಲ್ಡ್​ ಟ್ರಂಪ್ ವಿಜಯೋತ್ಸವ ಮುಗಿಲು ಮುಟ್ಟಿದೆ. ರಿಪಬ್ಲಿಕನ್ ಪಾರ್ಟಿ, ಡೆಮಾಕ್ರಟಿಕ್ ಪಕ್ಷವನ್ನು ಮಣ್ಣು ಮುಕ್ಕಿಸಿ ಸ್ಪಷ್ಟ ಬಹುಮತದ ವಿಜಯದೊಂದಿಗೆ ಕೇಕೆ ಹಾಕಿದೆ. ತಮ್ಮ ಎದುರಾಳಿ ಕಮಲಾ ಹ್ಯಾರಿಸ್​ರನ್ನ ಪರಾಜಯಗೊಳಿಸಿ ತಮ್ಮ ವಿಜಯದ ಭಾಷಣ ಮಾಡಿದ್ದಾರೆ ಡೊನಾಲ್ಡ್​ ಟ್ರಂಪ್. ಸದ್ಯ ಈ ಡೊನಾಲ್ಡ್ ಟ್ರಂಪ್ ವಿಜಯ ಅವರ ಒಂದು ಗಾಢವಾದ ಸ್ನೇಹವನ್ನು ಚರ್ಚೆಯ ಮುನ್ನೆಲೆಗೆ ಬಂದಿದೆ. ಟೆಸ್ಲಾದ ಸಂಸ್ಥಾಪಕ ಎಲಾನ್ ಮಸ್ಕ್ ಡೊನಾಲ್ಡ್ ಟ್ರಂಪ್​ಗೆ ಈ ಚುನಾವಣೆಯಲ್ಲಿ ಬೆನ್ನೆಲುಬಾಗಿ ನಿಂತಿದ್ದರು. ಹೆಜ್ಜೆ ಹೆಜ್ಜೆಗೂ ಟ್ರಂಪ್​ ಅವರಿಗೆ ಬೆಂಬಲ ನೀಡುತ್ತಾ ಬಂದಿದ್ದರು. ಸದ್ಯ ಸ್ಪಷ್ಟ ಬಹುಮತದೊಂದಿಗೆ ಮುಂದಿನ ಅಧ್ಯಕ್ಷರಾಗಲು ಸಜ್ಜಾಗಿರುವ ಟ್ರಂಪ್ ವಿಚಾರವಾಗಿ ಮಾತನಾಡಿರುವ ಎಲಾನ್ ಮಸ್ಕ್ ಅಮೆರಿಕಾದ ಮುಂದಿನ ದಿನಗಳು ಅದ್ಭುತವಾಗಿ ಸಾಗಲಿದೆ ಎಂದು ಎಂದ ಹೇಳಿದ್ದಾರೆ.

ಇದನ್ನೂ ಓದಿ:ಭಾರೀ ನಿರೀಕ್ಷೆ ಮೂಡಿಸಿದ್ದ ಕಮಲಾ ಹ್ಯಾರಿಸ್ ಸೋಲು; ಅಸಲಿ ಕಾರಣಗಳೇನು ಗೊತ್ತಾ?

ಎಲಾನ್​ ಮಸ್ಕ್ ವಿಶ್ವದ ಅತ್ಯಂತ ಶ್ರೀಮಂತರಲ್ಲಿ ಒಬ್ಬರು. ಈ ಬಾರಿಯ ಯುಎಸ್​ನ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್​ ಟ್ರಂಪ್​ಗೆ ದೊಡ್ಡದಾಗಿ ಬೆಂಬಲ ನೀಡಿದ್ದರು. ಅವರು ಪದೇ ಪದೇ ತಮ್ಮ ಎಕ್ಸ್ ಖಾತೆಯಲ್ಲಿ ಅಮೆರಿಕಾದ ಜನ ಯಾಕೆ ಡೊನಾಲ್ಡ್ ಟ್ರಂಪ್​ರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕು ಎಂಬುದರ ಬಗ್ಗೆ ಪೋಸ್ಟ್​ ಹಾಕುತ್ತಿದ್ದರು. 2022ರಲ್ಲಿ ಟ್ವಿಟರ್​ ಎಕ್ಸ್ ಎಂಬ ನಾಮಪದವನ್ನು ಹೊತ್ತುಕೊಂಡು ಜಗತ್ತಿನ ಎದುರಿಗೆ ಬಂದಾಗ ಟ್ರಂಪ್ ಹಾಗೂ ಎಲಾನ್ ಮಸ್ಕ್ ಅವರ ಗಾಢ ಸ್ನೇಹ ಆರಂಭವಾಯ್ತು. ಎಕ್ಸ್ ಖಾತೆ ಶುರುವಾದಾಗ ಎಲಾನ್ ಮಸ್ಕ್ ಮಾಡಿದ ಮೊದಲ ಕೆಲಸವೆಂದರೆ ಬ್ಯಾನ್ ಆಗಿದ್ದ ಡೊನಾಲ್ಡ್ ಟ್ರಂಪ್ ಅವರ ಖಾತೆಯನ್ನ ರಿಸ್ಟೋರ್ ಮಾಡಿದ್ದು. ಈ ವೇಳೆ ಅವರು ಶೇಕಡಾ 51.8 ಅಂದ್ರೆ 1 ಕೋಟಿ 50 ಲಕ್ಷ ಎಕ್ಸ್ ಖಾತೆ ಬಳಕೆದಾರರು ಡೊನಾಲ್ಡ್​ ಟ್ರಂಪ್ ಮೇಲೆ ಹೇರಲಾಗಿರುವ ನಿಷೇಧವನ್ನು ತೆಗೆಯಬೇಕು ಎಂದು ಕೇಳಿಕೊಂಡಿದ್ದರು ಈ ಕಾರಣದಿಂದಾಗಿ ಟ್ರಂಪ್ ಅವರ ಅಕೌಂಟ್​ನ್ನು ರಿಸ್ಟೋರ್ ಮಾಡಲಾಗಿದೆ ಎಂದು ಹೇಳಿದ್ದರು.

publive-image

ಇದನ್ನೂ ಓದಿ: US ELECTION 2024: ಇಂಡಿಯನ್ ಅಮೆರಿಕನ್ ವೋಟು ಪಡೆಯುವಲ್ಲಿ ಕಮಲಾ ಹ್ಯಾರಿಸ್ ಎಡವಿದ್ದು ಎಲ್ಲಿ?

ಟ್ರಂಪ್ ಅಭಿಮಾನಿಗಳು ವಾಷಿಂಗ್ಟನ್ ಡಿಸಿಯಲ್ಲಿ ಕೋಲಾಹಲ ಎಬ್ಬಿಸಿದ ಸಮಯದಲ್ಲಿ ಅವರ ಟ್ವಿಟರ್ ಖಾತೆಯನ್ನು ಬ್ಯಾನ್ ಮಾಡಲಾಗಿತ್ತು. ಆ ಸಮಯದಲ್ಲಿ ಡೊನಾಲ್ಡ್ ಟ್ರಂಪ್ ಮಾಡಿದ್ದ ಪೋಸ್ಟ್​ಗಳು ಕ್ರೌರ್ಯವನ್ನು ವೈಭವಿಕರಿಸುವಂತಿವೆ ಎಂಬ ಆರೋಪದ ಮೇಲೆ ಅವರ ಟ್ವಿಟರ್ ಖಾತೆಯನ್ನು ಬ್ಯಾನ್ ಮಾಡಲಾಗಿತ್ತು.
ಇದೆಲ್ಲವೂ ಕಳೆದು ಈಗ ನಾಲ್ಕು ವರ್ಷಗಳಾಗಿವೆ. ಕಳೆದ ಎರಡು ವರ್ಷಗಳಿಂದ ಡೊನಾಲ್ಡ್ ಟ್ರಂಪ್ ಮತ್ತೆ ಎಕ್ಸ್ ಖಾತೆಯಲ್ಲಿ ಆ್ಯಕ್ಟಿವ್ ಆಗಿದ್ದಾರೆ. ಅಂದಿನಿಂದ ಟ್ರಂಪ್ ಬೆನ್ನ ಹಿಂದೆ ನಿಂತ ಎಲಾನ್ ಮಸ್ಕ್ ಈ ಚುನಾವಣೆಯವರೆಗೂ ಅವರಿಗೆ ಬೆಂಬಲ ನೀಡುವ ವಿಷಯದಲ್ಲಿ  ಹಿಂದೆ ಸರಿದಿಲ್ಲ. ಅನೇಕ ಸಂದರ್ಶನಗಳಲ್ಲಿ, ನೂರಾರು ಪೋಸ್ಟ್​ಗಳಲ್ಲಿ ಟ್ರಂಪ್ ಪರವಾಗಿ ಎಲಾನ್ ಮಸ್ಕ್ ಮಾತನಾಡಿದ್ದಾರೆ. ಅವರ ಹಲವು ಱಲಿಗಳಲ್ಲಿ ಎಲಾನ್ ಮಸ್ಕ್ ಪಾಲ್ಗೊಂಡಿದ್ದು ಇದೆ. ಒಂದು ವೇಳೆ ಡೊನಾಲ್ಡ್​ ಟ್ರಂಪ್ ಗೆದ್ದರೆ ನನಗೆ ಕ್ಯಾಬಿನೆಟ್​ ಸ್ಥಾನಮಾನ ಇಲ್ಲವೇ ಸಲಹೆಗಾರರ ಸ್ಥಾನಮಾನ ಸಿಗುವ ಗ್ಯಾರಂಟಿ ಇದೆ ಎಂದು ಕೂಡ ಎಲಾನ್ ಮಸ್ಕ್ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment