ಪ್ರಧಾನಿ ಮನೆಗೆ ಬಂದ ಹೊಸ ಅತಿಥಿ.. ಮೋದಿ ಕೆನ್ನೆಗೆ ಮುತ್ತಿಕ್ಕಿದ ದೀಪಜ್ಯೋತಿ

author-image
AS Harshith
Updated On
ಪ್ರಧಾನಿ ಮನೆಗೆ ಬಂದ ಹೊಸ ಅತಿಥಿ.. ಮೋದಿ ಕೆನ್ನೆಗೆ ಮುತ್ತಿಕ್ಕಿದ ದೀಪಜ್ಯೋತಿ
Advertisment
  • ಹೊಸ ಅತಿಥಿಯನ್ನು ಬರ ಮಾಡಿಕೊಂಡ ಪ್ರಧಾನಿ ಮೋದಿ
  • ದೀಪಜ್ಯೋತಿ ಎಂದು ಹೆಸರಿಡಲು ಕಾರಣವೇನು ಗೊತ್ತಾ?
  • ದೀಪಜ್ಯೋತಿಯನ್ನು ಎತ್ತಿ ಮುದ್ದಾಡಿ, ಮುತ್ತಿಕ್ಕಿದ ಮೋದಿ

ಪ್ರಧಾನಿ ನರೇಂದ್ರ ಮೋದಿ ನಿವಾಸಕ್ಕೆ ಹೊಸ ಅತಿಥಿಯ ಆಗಮನವಾಗಿದೆ. ಸಂತಸದಿಂದ ಮೋದಿಯವರು ಅತಿಥಿಯನ್ನು ಆಗಮಿಸಿಕೊಂಡಿದ್ದಾರೆ. ಎತ್ತಿಕೊಂಡು ಮುದ್ದಾಡಿ ಮುತ್ತಿಟ್ಟಿದ್ದಾರೆ. ಸದ್ಯ ಆ ಕ್ಯೂಟ್​​ ಅತಿಥಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಪ್ರಧಾನಿ ಮೋದಿಯವರಿಗೆ ಮಕ್ಕಳೆಂದರೆ ಮಾತ್ರವಲ್ಲ, ಪ್ರಾಣಿಗಳ ಮೇಲೂ ವಿಶೇಷ ಪ್ರೀತಿ. ಇದೀಗ ದೆಹಲಿಯ ಲೋಕ ಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಿ ನಿವಾಸದಲ್ಲಿರುವ ಹಸುವೊಂದು ಮುದ್ದಾದ ಕರುವಿಗೆ ಜನ್ಮ ನೀಡಿದೆ. ಆ ಕರುವಿಗೆ ದೀಪಜ್ಯೋತಿ ಎಂದು ಹೆಸರಿಡಲಾಗಿದೆ.

ಇದನ್ನೂ ಓದಿ: ದರ್ಶನ್​​ಗೆ ಅಧಿಕಾರಿಗಳು ವಾರ್ನಿಂಗ್.. ಬಳ್ಳಾರಿ ಜೈಲಿಗೆ ಬಂದರೂ ಬುದ್ಧಿ ಕಲಿಯಲಿಲ್ಲ ಎಂದು ಬೇಸರ.. ಆಗಿದ್ದೇನು..?


">September 14, 2024

ದೀಪಜ್ಯೋತಿ ಕರುವಿನ ಹಣೆಯಲ್ಲಿ ಬಿಳಿಯಾಕಾರದ ಚಿತ್ರವೊಂದು ಮೂಡಿದ್ದು, ಅದಕ್ಕೆ ದೀಪಜ್ಯೋತಿ ಎಂದು ಹೆಸರಿಡಲಾಗಿದೆ ಎನ್ನಲಾಗುತ್ತಿದೆ. ಮುದ್ದಾದ ಕರುವಿನ ಜೊತೆಗೆ ಪ್ರಧಾನಿ ಮೋದಿಯವರು ಕಾಲ ಕಳೆದಿದ್ದಾರೆ. ಕರುವನ್ನು ದೇವರ ಮನೆಗೆ ಕರೆದೊಯ್ದು ಪೂಜೆ ಸಲ್ಲಿಸಿದ್ದಾರೆ. ಮಾತ್ರವಲ್ಲದೆ ಗೋವು ಸರ್ವಸುಖ ಪ್ರದಾ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment