newsfirstkannada.com

‘ದೀಪಕ್ ಚಹರ್ ಡ್ರಗ್ ಇದ್ದಂತೆ’ ಎಂದ ಮಹೇಂದ್ರ ಸಿಂಗ್ ಧೋನಿ.. ಮಾಹಿ ಹೀಗ್ಯಾಕೆ ಕರೆದರು..?

Share :

Published July 12, 2023 at 10:20am

    ಚಹರ್​ನ ಬೈತಾರೆ, ಸತಾಯಿಸ್ತಾರೆ ಧೋನಿ

    ಯಾರೆ ತಪ್ಪು ಮಾಡಿದ್ರೂ ಚಹರ್​ಗೆ ಬೈಗುಳ

    CSK ತಂಡದ ಸ್ಟಾರ್ ಬೌಲರ್ ಚಹರ್

ಸಿಎಸ್​ಕೆ ತಂಡದ ವೇಗಿ ದೀಪಕ್​ ಚಹರ್​ ಅವರನ್ನು ಧೋನಿ ಡ್ರಗ್​ ಎಂದು ಕರೆದಿದ್ದಾರೆ. ಧೋನಿ ಯಾಕೆ ಹೀಗೆ ಕರೆದರು ಅನ್ನೋದು ನಿಮ್ಮೆಲ್ಲರ ಪ್ರಶ್ನೆ ಇರಬಹುದು. ಅದಕ್ಕೆ ಉತ್ತರ ಇದೆ. ಇವರಿಬ್ಬರದ್ದು ಒಂಥರಾ ವಿಶಿಷ್ಠ, ವಿಚಿತ್ರ ಸಂಬಂಧ!

ಮಾಂತ್ರಿಕ ಎಮ್​​.ಎಸ್​​ ಧೋನಿಗೆ ವಿಶ್ವದಾದ್ಯಂತ ಅಸಂಖ್ಯ ಅಭಿಮಾನಿಗಳ ದಂಡೇ ಇದೆ. ಭಾರತದಲ್ಲಂತೂ ಧೋನಿ ಹೋದಲ್ಲಿ ಬಂದಲ್ಲಿ ಜಾತ್ರೆಯೇ ನಡೆಯುತ್ತೆ. ಬಹುಶಃ ಧೋನಿಗೆ ಮರುಳಾಗದವರೇ ಇಲ್ಲ. ಮಾಹಿಯ ಒಂದೊಂದು ಗುಣಕ್ಕೆ ಕ್ಲೀನ್​ ಬೋಲ್ಡ್​ ಆದವರು ಅದೆಷ್ಟೋ ಮಂದಿ.

ಸಹ ಆಟಗಾರನಿಗೆ ಮಾಹಿ ಕ್ಲೀನ್​ಬೋಲ್ಡ್​

ಹೌದು.. ಧೋನಿಯ ಆಟ, ನಾಯಕತ್ವ, ನಡೆ-ನುಡಿ ಹೀಗೆ ಒಂದೊಂದು ಗುಣಕ್ಕೆ ಫಿದಾದ ಜನರ ಸಂಖ್ಯೆ ದೊಡ್ಡದಿದೆ. ದಿಗ್ಗಜ ಕ್ರಿಕೆಟಿಗರಿಂದ ಹಿಡಿದು ಯುವ ಆಟಗಾರರವರೆಗೆ ಮಾಹಿ ಮಾಹಿ ಫೇವರಿಟ್​​. ಮಾಹಿಯನ್ನ ಕಣ್ತುಂಬಿಕೊಳ್ಳೋ ಒಂದೇ ಒಂದು ಹಂಬಲದಿಂದ ಮೈದಾನಕ್ಕೆ ಬರೋ ಅದೆಷ್ಟೋ ಅಭಿಮಾನಿಗಳಿದ್ದಾರೆ. ಧೋನಿ ಮಾತ್ರ ದೀಪಕ್​ ಚಹರ್​ಗೆ ಅಡಿಕ್ಟ್​ ಆಗಿಬಿಟ್ಟಿದ್ದಾರಂತೆ. ಹೌದು.. ಸ್ವತಃ ಎಮ್​.ಎಸ್​ ಧೋನಿಯೇ ಹೇಳಿಕೊಂಡಿರೋ ವಿಚಾರ ಇದು. ಚಹರ್​ ಒಂದು ರೀತಿಯ ಡ್ರಗ್​​ ಇದ್ದಂಗೆ. ಆತ ಇಲ್ಲ ಅಂದ್ರೆ ಆತನ ಬಗ್ಗೆ ಯೋಚಿಸ್ತೀವಿ. ಆತ ಇದ್ರೆ ಯಾಕೆ ಇಲ್ಲಿ ಇದ್ದಾನೆ ಅಂತ ಯೋಚಿಸ್ತೀವಿ ಎಂದು ಮಾಹಿ ಹೇಳಿಕೊಂಡಿದ್ದಾರೆ.

ಸಿಎಸ್​ಕೆ ತಂಡದಲ್ಲೇ ಇವರಿಬ್ಬರದ್ದು ವಿಶೇಷ ಬಾಂಧವ್ಯ

ಸಿಎಸ್​ಕೆ ತಂಡದಲ್ಲಿ ದಿಗ್ಗಜರೇ ಬಂದು ಹೋಗಿದ್ದಾರೆ. ಆದ್ರೆ ಕ್ಯಾಪ್ಟನ್​ ಧೋನಿ ಯಾರೊಂದಿಗೂ ಈ ರೀತಿ ಇದ್ದಿದ್ದನ್ನು ನೋಡೋಕೆ ಸಾಧ್ಯನೇ ಇಲ್ಲ. ಇವರಿಬ್ಬರು ನೋಡೋಕೆ ಸೀರಿಯಸ್ಸಾಗೆ ಇರ್ತಾರೆ. ಆದರೆ ಇದೇ ಗ್ಯಾಪ್​ ಅಲ್ಲಿ ಪರಸ್ಪರ ಕಾಲೆಳೆದುಕೊಳ್ಳೋದು, ಕಾಮಿಡಿ ಮಾಡೋದು, ಸಿಟ್ಟನ್ನು ಹೊರಗಾಕೋದು ಎಲ್ಲಾ ನಡೆದು ಹೋಗಿರುತ್ತದೆ.

ಟ್ರಾವೆಲಿಂಗ್​ನಲ್ಲೂ ಧೋನಿಗೆ ಚಹರ್​ ಪಾರ್ಟನರ್​

ಚಹರ್​ ಡ್ರಗ್​ ಅಂತಾ ಧೋನಿ ಸುಮ್ಮನೆ ಹೇಳಿಲ್ಲ. ಆನ್​ ಫೀಲ್ಡ್​ನಿಂದ ಹಿಡಿದು ಆಫ್​ ಫೀಲ್ಡ್​ನಲ್ಲೂ ಧೋನಿಗೆ ಚಹರ್​ ಸದ್ಯ ಬೆಸ್ಟ್​ ಪಾರ್ಟ್​ನರ್​​ ಆಗಿದ್ದಾರೆ. ಐಪಿಎಲ್​ ವೇಳೆ ಟ್ರಾವೆಲಿಂಗ್​ ಮಾಡೋವಾಗಲೂ ಧೋನಿಗೆ ಚಹರ್​ ಪಾರ್ಟನರ್!

ಬೈತಾರೆ, ಸತಾಯಿಸ್ತಾರೆ ಈ ಧೋನಿ

ಚಹರ್​ ಹಾಗೂ ಧೋನಿಯದ್ದು ವಿಚಿತ್ರವಾದ ಬಾಂಡ್​. ಐಪಿಎಲ್​ ಫೈನಲ್​ ಪಂದ್ಯದ ಘಟನೆ ನಿಮಗೂ ನೆನಪಿರುತ್ತೆ. ಜೆರ್ಸಿಗೆ ಸೈನ್​ ಮಾಡಿಸಿಕೊಳ್ಳಲು ಕಾದ ಚಹರ್​ನ ಧೋನಿ ಎಷ್ಟು ಸತಾಯಿಸಿದ್ರು ಅನ್ನೋದು. ಕೇವಲ ಸತಾಯಿಸೋದು ಮಾತ್ರವಲ್ಲ.. ಸಣ್ಣ ಯಡವಟ್ಟಾದ್ರೂ ಧೋನಿ ಸಿಕ್ಕಾಪಟ್ಟೆ ಬೈತಾರಂತೆ. ಆ ಯಡವಟ್ಟನ್ನು ದೀಪಕ್​ ಚಹರೇ ಮಾಡಬೇಕಂತಿಲ್ಲ.. ಬೇರೆಯವರೂ ಮಾಡಿದ್ರೂ, ಬೈಗುಳ ಚಹರ್​ಗೆ ಫಿಕ್ಸ್​. ಆದ್ರೆ ಅದರ ಹಿಂದೂ ಪ್ರೀತಿಯಿದೆ.

‘ಒಂದು ಪಂದ್ಯದಲ್ಲಿ ನಾನು ಅವರ ಪಕ್ಕ ಫೀಲ್ಡಿಂಗ್​ ಮಾಡ್ತಿದ್ದೆ. ಕೆಲ ಬಾಲ್​ ಆದ ಮೇಲೆ ನನಗೆ ಬೈದರು. ನನಗೆ ಅರ್ಥ ಆಯ್ತು. ಬೇರೆ ಯಾರ ಮೇಲೊ ಸಿಟ್ಟು ಬಂದಿದೆ ಎಂದು. ಆಗ ನಾನು ಏನು ಹೇಳಲಿಲ್ಲ. ಡ್ರೆಸ್ಸಿಂಗ್​ ರೂಮ್​ಗೆ ಹೋದ ಬಳಿಕ ಮಾಹಿ ಭಾಯ್​ ವಿಚಾರ ಹೇಳಿ ಎಂದೆ. ಎಲ್ಲರ ಸಿಟ್ಟನ್ನು ನನ್ನ ಮೇಲೆ ಯಾಕೆ ಹೊರ ಹಾಕ್ತೀರಿ ಎಂದು ಕೇಳಿದೆ. ಆಗ ಪ್ರೀತಿಯನ್ನೂ ಮಾಡುತ್ತೇನೆ ಅಲ್ವಾ ಎಂದ್ರು. ಹಾಗೆ ಹೇಳಿದ ಮೇಲೆ ನಾನು ಏನ್​ ಹೇಳೋಕೆ ಆಗುತ್ತೆ’
ದೀಪಕ್ ಚಹಾರ, ವೇಗಿ

ಧೋನಿ ಚಹರ್​ನ ಯಾಕೆ ಡ್ರಗ್​ ಅಂದ್ರು ಅನ್ನೋ ಪ್ರಶ್ನೆ ಅವರಿಬ್ಬರ ನಡುವಿನ ವಿಶೇಷ ಬಾಂಧವ್ಯವೇ ಉತ್ತರವಾಗಿದೆ. ಇವರಿಬ್ಬರ ನಡುವಿನ ಈ ಸ್ಪೆಷಲ್​ ಬಾಂಡಿಂಗ್​ ಮುಂದೆಯೂ ಹೀಗೆ ಮುಂದುವರೆಯಲಿ ಅನ್ನೋದೆ ಅಭಿಮಾನಿಗಳ ಆಶಯ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

‘ದೀಪಕ್ ಚಹರ್ ಡ್ರಗ್ ಇದ್ದಂತೆ’ ಎಂದ ಮಹೇಂದ್ರ ಸಿಂಗ್ ಧೋನಿ.. ಮಾಹಿ ಹೀಗ್ಯಾಕೆ ಕರೆದರು..?

https://newsfirstlive.com/wp-content/uploads/2023/07/DHONI-3.jpg

Load More