newsfirstkannada.com

ಪವರ್​ಫುಲ್​ ಬಿಸಿಸಿಐಗೇ ಪಂಚ್​​ ಕೊಟ್ಟ ತ್ರಿಮೂರ್ತಿಗಳು; ಆ ಮೂವರೂ ಆಡಿದ್ದೇ ಆಟ..!

Share :

Published February 18, 2024 at 11:34am

    ಸಿಎಸ್​​ಕೆ IPL ಪ್ರಚಾರ ಕಾರ್ಯದಲ್ಲಿ ಮೂವರು ಬ್ಯುಸಿ

    ತ್ರಿಮೂರ್ತಿಗಳು ಬಿಸಿಸಿಐಗೆ ಡೋಂಟ್​ಕೇರ್ ಅಂತಿರೋದ್ಯಾಕೆ..?

    ಸೂಪರ್ ಸ್ಟಾರ್ ಅಹಂನಲ್ಲಿದ್ದಾರಾ ತ್ರಿಮೂರ್ತಿಗಳು.?

ಟೀಮ್ ಇಂಡಿಯಾ ಆಟಗಾರರ ಪಾಲಿಗೆ ಬಿಸಿಸಿಐ ಹೇಳಿದ್ದೆ ವೇದವಾಕ್ಯ. ಯಾರೇ ಆದ್ರೂ ಚಾಚು ತಪ್ಪದೇ ಪಾಲಿಸಬೇಕು. ಇಂಥ ಪವರ್ ಹೌಸ್​ಗೆ​ ಈ​ ತ್ರಿಮೂರ್ತಿಗಳು ಸೆಡ್ಡು ಹೊಡೆದಿದ್ದಾರೆ. ಬಾಸ್​​ಗಳು ಖಡಕ್ ವಾರ್ನಿಂಗ್ ಕೊಟ್ರೂ ಕೂಡ ಕ್ಯಾರೇ ಅಂತಿಲ್ಲ. ಬಿಸಿಸಿಐ ಮಾತಿಗೆ ಡೋಂಟ್​ಕೇರ್ ಅಂತಿರೋ ಆ ಆಟಗಾರರು ಯಾರು? ಕಾರಣ ಏನು?

ಬಿಸಿಸಿಐ.. ಮೋಸ್ಟ್​​​​ ಪವರ್​ಫುಲ್​ ಕ್ರಿಕೆಟ್ ಮಂಡಳಿ. ಇಂಟರ್​ನ್ಯಾಷನಲ್​ ಕ್ರಿಕೆಟ್​ ಕೌನ್ಸಿಲ್​​​ಗೂ ಬಿಸಿಸಿಐ ಹೇಳಿದ್ದೆ ವೇದವಾಕ್ಯ. ಇನ್ನು ಭಾರತೀಯ ಪ್ಲೇಯರ್ಸ್​ ಗಳಂತೂ ಬಿಸಿಸಿಐ ಬಿಗ್​ಬಾಸ್​ಗಳು ಹಾಕಿದ ಗೆರೆಯನ್ನ ದಾಟಂಗಿಲ್ಲ. ಆಟಗಾರರನ್ನ ಮಾತಿನಲ್ಲೆ ಗಿರಗಿಟ್ಲೆ ಆಡಿಸೋ ಪವರ್​​ ಹೌಸ್​​​ ಬಿಸಿಸಿಐ, ಇದೀಗ ಪವರ್ ಕಳೆದುಕೊಂಡಂತೆ ಕಾಣ್ತಿದೆ.

ರಣಜಿ ಕಡೆ ಮುಖ ಮಾಡದ ಕಿಶನ್​, ಶ್ರೇಯಸ್, ಚಹರ್
ಯಂಗ್​ಗನ್​ ಇಶಾನ್ ಕಿಶನ್​​​, ಶ್ರೇಯಸ್ ಅಯ್ಯರ್ ಹಾಗೂ ದೀಪಕ್ ಚಹರ್​ಗೆ ಸದ್ಯ ಟೀಮ್ ಇಂಡಿಯಾದಲ್ಲಿ ಸ್ಥಾನವಿಲ್ಲ. ತಂಡದಿಂದ ಹೊರಬಿದ್ದಿರುವ ಇವರಿಗೆ ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ ರಣಜಿ ಟ್ರೋಫಿ ಆಡುವಂತೆ ಖಡಕ್​ ವಾರ್ನಿಂಗ್ ನೀಡಿದ್ದಾರೆ. ನಕರಾ ಮಾಡಿದ್ರೆ ನಡೆಯಲ್ಲ. ಹೇಳಿದ್ದನ್ನ ಫಾಲೋ ಮಾಡ್ಲೇಬೇಕು ಅಂತ ಕಡ್ಡಿಮುರಿದಂತೆ ಹೇಳಿದ್ರು. ಇಷ್ಟಾದ್ರು ಜಯ್​ ಶಾ ಮಾತಿಗೆ ತ್ರಿಮೂರ್ತಿಗಳು ಕ್ಯಾರೇ ಅಂದಿಲ್ಲ.

ಕಿಶನ್​ ರಣಜಿಗೆ ಚಕ್ಕರ್, DY ಪಾಟೀಲ್​ ಟೂರ್ನಿಗೆ ಹಾಜರ್​​​​..?
ದಕ್ಷಿಣ ಆಫ್ರಿಕಾ ಪ್ರವಾಸದಿಂದ ಅರ್ಧಕ್ಕೆ ವಾಪಾಸಾದ ಡೇರಿಂಗ್ ಬ್ಯಾಟರ್ ಇಶಾನ್ ಕಿಶನ್​​​​​ಗೆ ಬಿಸಿಸಿಐ ರಣಜಿ ಟ್ರೋಫಿ ಆಡುವಂತೆ ಸೂಚಿಸಿತ್ತು. ಆದರೆ ಕಿಶನ್​​​ ಬಿಗ್​​ಬಾಸ್​ಗಳ ಮಾತಿಗೆ ಸೊಪ್ಪು ಹಾಕಿಲ್ಲ. ರಣಜಿಗೆ ಚಕ್ಕರ್​​ ಹಾಕಿ ಮುಂಬೈ ಕ್ರಿಕೆಟ್​ ಅಸೋಸಿಯೇಶನ್​ ನಡೆಸೋ ಡಿವೈ ಪಾಟೀಲ್​​ ಟಿ20 ಟೂರ್ನಿ ಆಡಲು ಸಿದ್ಧತೆ ನಡೆಸಿದ್ದಾರೆ. ಆ ಮೂಲಕ ಬಿಗ್​​ಬಾಸ್​ಗಳ ಕಣ್ಣು ಮತ್ತಷ್ಟು ಕೆಂಪಾಗುವಂತೆ ಮಾಡಿದ್ದಾರೆ.

ಮುಂಬೈ ಪರ ಆಡದೇ ಶ್ರೇಯಸ್ ಮೊಂಡುತನ
ಶ್ರೇಯಸ್ ಅಯ್ಯರ್​ ಕಥೆ ಕೂಡ ಭಿನ್ನವಾಗಿಲ್ಲ. ಇಂಗ್ಲೆಂಡ್​​​ ಸರಣಿಯ ಕೊನೆ ಮೂರು ಪಂದ್ಯಗಳಿಂದ ಹೊರಬಿದ್ದ ಶ್ರೇಯಸ್​​​ ರಣಜಿ ಆಡಲು ಹಿಂದೇಟು ಹಾಕಿದ್ದಾರೆ. ಹೆಡ್​​ಕೋಚ್​ ರಾಹುಲ್​​ ದ್ರಾವಿಡ್​​​ ಮಾತಿಗೂ ಬೆಲೆ ಕೊಟ್ಟಿಲ್ಲ. ಮುಂಬೈ ಪರ ಶಾರ್ದುಲ್ ಠಾಕೂರ್​​​ ಹಾಗೂ ಅಜಿಂಕ್ಯಾ ರಹಾನೆ ರಣಜಿ ಆಡ್ತಿದ್ರೂ ಶ್ರೇಯಸ್ ದಿಕ್ಕರಿಸಿದ್ದಾರೆ.

ಸಿಎಸ್​​ಕೆ ಪರ IPL ಪ್ರಚಾರದಲ್ಲಿ ಚಹರ್ ಬ್ಯುಸಿ
ಫ್ಯಾಮಿಲಿ ಸಮಸ್ಯೆ ಅಂತಾ ಸೌತ್​ ಆಫ್ರಿಕಾ-ಅಫ್ಘಾನಿಸ್ತಾನ ಸರಣಿಯಿಂದ ಹಿಂದೆ ಸರಿದ ವೇಗಿ ದೀಪಕ್ ಚಹರ್​ ಕೂಡ ಬಾಸ್​ಗಳ ಮಾತಿಗೆ ಸೊಪ್ಪು ಹಾಕಿಲ್ಲ. ತಂಡಕ್ಕೆ ಮರಳಲು ರೆಡ್​ಬಾಲ್ ಕ್ರಿಕೆಟ್​​​ ಆಡುವಂತೆ ಬಿಸಿಸಿಐ ಸೂಚಿಸಿದೆ. ಚಹರ್, ರಣಜಿ ಟ್ರೋಫಿ ಆಡೋದನ್ನು ಬಿಟ್ಟು ಚೆನ್ನೈ ಸೂಪರ್​​ ಕಿಂಗ್ಸ್​ನ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ.

ತ್ರಿಮೂರ್ತಿಗಳು ಬಿಸಿಸಿಐಗೆ ಡೋಂಟ್​ಕೇರ್ ಅಂತಿರೋದ್ಯಾಕೆ?
ಇಶಾನ್​ ಕಿಶನ್​​​, ಶ್ರೇಯಸ್ ಅಯ್ಯರ್ ಹಾಗೂ ದೀಪಕ್ ಚಹರ್​ ಬಿಸಿಸಿಐ ಮಾತನ್ನ ಗಾಳಿಗೆ ತೂರಿದಿದ್ದಾರೆ. ಸ್ವಲ್ವನೂ ಭಯದ ಇಲ್ಲ ರೀತಿಯಲ್ಲಿ ವರ್ತಿಸ್ತಿದ್ದಾರೆ. ಬಿಸಿಸಿಐ ಒಂದು ಮಾತು ಹೇಳಿದ್ರೆ ಅದನ್ನ ಕಟ್ಟುನಿಟ್ಟಾಗಿ ಪಾಲಿಸೋ ಆಟಗಾರರಿದ್ದಾರೆ. ಆದ್ರೆ ಈ ಮೂವರು ಅದಕ್ಕೆ ತದ್ಧಿರುದ್ಧ. ತಾವು ಸೂಪರ್ ಸ್ಟಾರ್​​​​​​ ಅನ್ನೋ ಅಹಂ ಈ ರೀತಿ ಮಾಡಿಸ್ತಿದೆಯಾ ? ಅಥವಾ ಅತಿಯಾದ ಆತ್ಮವಿಶ್ವಾಸ ಇದಕ್ಕೆಲ್ಲಾ ಕಾರಣನಾ? ಉತ್ತರ ನಿಗೂಢ.

ರಣಜಿ ಟ್ರೋಫಿ ತಿರಸ್ಕಾರಕ್ಕೆ ಕಾರಣ ಏನೇ ಇದ್ರೂ, ಇವರ ಭವಿಷ್ಯಕ್ಕೆ ಈ ನಿರ್ಧಾರ ಕುತ್ತು ತರೋದ್ರಲ್ಲಿ ಅನುಮಾನವಿಲ್ಲ. ಇವರ ನಡೆಯಿಂದ ಈಗಾಗ್ಲೆ ಬಿಗ್​ಬಾಸ್​ಗಳು ಕೆರಳಿ ಕೆಂಡವಾಗಿದ್ದಾರೆ. ಮುಂದಾದ್ರೂ ಇವರು ಬಿಸಿಸಿಐ ಮಾತನ್ನು ಪಾಲಿಸ್ತಾರಾ? ಅಥವಾ ಇದೇ ರೀತಿ ಮೊಂಡುತನವನ್ನ ಮುಂದುವರೆಸ್ತಾರಾ? ಅನ್ನೋದು ಸದ್ಯ ಕುತೂಹಲ ಮೂಡಿಸಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಪವರ್​ಫುಲ್​ ಬಿಸಿಸಿಐಗೇ ಪಂಚ್​​ ಕೊಟ್ಟ ತ್ರಿಮೂರ್ತಿಗಳು; ಆ ಮೂವರೂ ಆಡಿದ್ದೇ ಆಟ..!

https://newsfirstlive.com/wp-content/uploads/2023/11/BCCI-3.jpg

Load More