newsfirstkannada.com

ಹೇಗಿದ್ದ ಹೇಗಾದ ಗೊತ್ತಾ.. ದಾಸ ಪುರಂದರ ನಟ; ಹೊಸ ಲುಕ್​ನಲ್ಲಿ ದೀಪಕ್ ಸುಬ್ರಮಣ್ಯ

Share :

Published February 8, 2024 at 3:28pm

  ಇದು ಧಾರಾವಾಹಿಯಾ ಅಥವಾ ಸಿನಿಮಾನಾ ಅಂತ ಪ್ರಶ್ನೆ ಕೇಳಿದ ಫ್ಯಾನ್ಸ್​​

  ನಟ ದೀಪಕ್ ಸುಬ್ರಮಣ್ಯ ಅವರ ನೂತನ ಲುಕ್​ಗೆ ಫ್ಯಾನ್ಸ್​ ಫುಲ್ ಫಿದಾ

  ದಾಸಪುರಂದರ ಧಾರಾವಾಹಿ ನಂತರ ಗ್ಯಾಪ್​ ತೆಗೆದುಕೊಂಡಿದ್ದ ದೀಪಕ್​

ತುಂಬು ಕುಟುಂಬದ ಏರಿಳಿತಗಳನ್ನು ಬಿತ್ತರಿಸುತ್ತಿರೋ ಲಕ್ಷ್ಮೀ ನಿವಾಸ ಧಾರಾವಾಹಿ ವೀಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಅದ್ಭುತವಾದ ಮೇಕಿಂಗ್​ ಮೂಲಕ ವೀಕ್ಷಕರು ಇಷ್ಟಪಡುವ ರೀತಿಯಲ್ಲಿ ಕಂಟೆಂಟ್ ನೀಡುತ್ತಿದೆ ಈ ತಂಡ. ಸಿನಿಮಾ ರೇಂಜ್​ಗಿದೆ ಈ ಧಾರಾವಾಹಿ ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿವೆ. ಈ ಬೆನ್ನಲ್ಲೆ ಹೊಸ ತಿರುವು ಪಡೆದುಕೊಳ್ತಿದೆ ಈ ಧಾರಾವಾಹಿ. ಕುಟುಂಬದ ಹಿರಿಮಗಳು ಭಾವನಾ ಮದುವೆ ಸಂಭ್ರಮಕ್ಕೆ ಬರ ಸಿಡಿಲು ಬಡದಂತಾಗಿ ಇಡೀ ಕುಟುಂಬ ನೋವಿನಲ್ಲಿದೆ.

ಮಗು ಜೊತೆ ಜೀವನವನ್ನ ಕಳೆಯಲು ನಿರ್ಧಾರ ಮಾಡಿದ್ದಾಳೆ ಭಾವನಾ. ಇತ್ತ ಭಾವನಾಳನ್ನು ಕಂಡ ಸಿದ್ದೇಗೌಡರ ಹೃದಯದಲ್ಲಿ ಪ್ರೀತಿಯ ತಂಗಾಳಿ ಬೀಸುತ್ತಿದೆ. ಮತ್ತೊಂದು ಕಡೆ ಹೊಸ ಹೀರೋ ಎಂಟ್ರಿ ಆಗಿದೆ. ಹೌದು, ದೊಡ್ಡ ತಾರಾಬಳಗವಿರೋ ಲಕ್ಷ್ಮೀ ನಿವಾಸಕ್ಕೆ ಹೆಜ್ಜೆ ಇಟ್ಟಿದ್ದಾರೆ ದಾಸ ಪರಂದರರು. ಇದೇನು? ಇಲ್ಯಾಕೆ ಬರ್ತಾರೆ ದಾಸರು ಅಂದ್ರಾ? ಅಂದ್ರೆ ಈ ಹಿಂದೆ ದಾಸಪುರಂದರ ಧಾರಾವಾಹಿಯಲ್ಲಿ ಅಭಿನಯಿಸಿದ್ದ ನಟ ದೀಪಕ್​ ಈಗ ಲಕ್ಷ್ಮೀ ನಿವಾಸಕ್ಕೆ ಹೊಸ ರೂಪದಲ್ಲಿ ವಿಭಿನ್ನವಾಗಿ ಎಂಟ್ರಿ ಕೊಟ್ಟಿದ್ದಾರೆ. ಆಧ್ಯಾತ್ಮಿಕ, ಪೌರಿಣಿಕ ಹಿನ್ನೆಲೆಯುಳ್ಳ ಕತೆಗಳಲ್ಲಿ ನಟಿಸಿದ್ದ ದೀಪಕ್​ ಹೊಸ ಲುಕ್​ ವೀಕ್ಷಕರನ್ನ ಸೇಳೆಯುತ್ತಿದೆ. ಇವರು ಯಾರು? ಎಲ್ಲೋ ನೋಡಿದ ಹಾಗೆ ಇದೇಯಲ್ಲ! ಬಾಲಿವುಡ್​ ಹೀರೋನಾ ಅಂತಾ ಪ್ರಶ್ನೆ ಮಾಡುತ್ತಿದ್ದಾರೆ. ಈ ನಿಮ್ಮ ಪ್ರಶ್ನೆಗೆ ಉತ್ತರ ಖಂಡಿತ ದೀಪಕ್​ ಕನ್ನಡದವ್ರೇ. ಥಿಯೇಟರ್​ ಡ್ರಾಮಾಗಳಲ್ಲಿ ಹೆಚ್ಚು ಆ್ಯಕ್ಟಿವ್​ ಆಗಿರೋ ನಟ.

ಇದನ್ನು ಓದಿ: ಹೋಗಿ ಬಾ ಭೈರವ.. ಇಡೀ ಕುಟುಂಬದ ಪ್ರೀತಿಯ ನಾಯಿ ಸಾವಿಗೆ ನಟ ಜಗ್ಗೇಶ್‌ ಕಣ್ಣೀರು

ದಾಸಪುರಂದರ ಧಾರಾವಾಹಿ ನಂತರ ಗ್ಯಾಪ್​ ತೆಗೆದುಕೊಂಡಿದ್ದ ದೀಪಕ್​ ಮತ್ತೇ ಬಣ್ಣ ಹಚ್ಚಿದ್ದಾರೆ. ಲಕ್ಷ್ಮೀ ನಿವಾಸ ಕತೆಯಲ್ಲಿ ಶ್ರೀನಿವಾಸ ಕುಟುಂಬದ ಕೊನೆ ಮಗಳು ಅಂದ್ರೆ ಜಾಹ್ನವಿಯನ್ನ ಮದುವೆ ಆಗೋ ಪ್ರಸ್ತಾಪ ಇಟ್ಟಿದ್ದಾರೆ ಜಯಂತ್​. ಇತ್ತ ಜಾಹ್ನವಿಗೆ ಪ್ರೇಮ ನೀವೇದನೆ ಮಾಡಲು ಹೊರಟಿದ್ದ ಕಾಲೇಜಿನ ಗೆಳಯ ವಿಶ್ವನಿಗೆ ನಿರಾಸೆ ಎದುರಾಗಿದೆ. ಜಾಹ್ನವಿ ಬದುಕಲ್ಲಿ ಸ್ಥಾನ ಜಯಂತ್​ಗಾ ಅಥವಾ ವಿಶ್ವನಿಗಾ ಅಂತಾ ಪ್ರಶ್ನೆ ಎದುರಾಗಿದೆ. ಒಟ್ಟಿನಲ್ಲಿ ಲಕ್ಷ್ಮೀ ನಿವಾಸ ಹಲವು ಆಯಮಗಳಲ್ಲಿ ಗಮನ ಸೇಳೆಯುತ್ತಿದೆ. ಕತೆ ಅದ್ಭುತವಾಗಿ ಮೂಡಿ ಬರುತ್ತಿದೆ. ರಾಯಲ್​ ಆಗಿ ಎಂಟ್ರಿ ಕೊಟ್ಟಿರೋ ಜಯಂತ್​ನ ಉದ್ದೇಶ ಏನು? ಹೀರೋನಾ ಇಲ್ಲ ವಿಲನ್​? ಅಂತಾ ಮುಂದಿನ ದಿನಗಳಲ್ಲಿ ತಿಳಿಯಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹೇಗಿದ್ದ ಹೇಗಾದ ಗೊತ್ತಾ.. ದಾಸ ಪುರಂದರ ನಟ; ಹೊಸ ಲುಕ್​ನಲ್ಲಿ ದೀಪಕ್ ಸುಬ್ರಮಣ್ಯ

https://newsfirstlive.com/wp-content/uploads/2024/02/serial-6.jpg

Load More