Breaking: ರೂಲ್ಸ್​ ಬ್ರೇಕ್ ಮಾಡಿದ್ರೆ ಅಷ್ಟೇ..! ದೀಪಾವಳಿ ಹಬ್ಬಕ್ಕೆ ಪಟಾಕಿ ಹೊಡೆಯಲು ಟೈಂ ನಿಗದಿ..!

author-image
Ganesh
Updated On
ವರುಷಕ್ಕೆ ಬರುವುದು ಹರುಷದಿ ದೊಡ್ಡಬ್ಬ! ಬೂರೆ ರೂಪದಲ್ಲಿ ಬರುವ ನಮ್ಮ ಬಲ್ಲಾಳ ಬಲೀಂದ್ರ..!
Advertisment
  • ಈ ಬಾರಿ ಎಷ್ಟು ಗಂಟೆ ನೀವು ಪಟಾಕಿ ಸುಡಬಹುದು?
  • ಸಂಭ್ರಮದಲ್ಲಿ ಹೆಚ್ಚು ಕಾಲ ಪಟಾಕಿ ಹೊಡೆಯಂಗಿಲ್ಲ
  • ರಾಜ್ಯ ಸರ್ಕಾರದಿಂದ ಅಧಿಕೃತವಾಗಿ ಗೈಡ್ ಲೈನ್ಸ್ ಜಾರಿ

ಬೆಂಗಳೂರು: ಬೆಳಕಿನ ಹಬ್ಬ ದೀಪಾವಳಿ ಬಂದೇ ಬಿಟ್ಟಿದೆ. ಹಬ್ಬದ ಕಳೆ ಮನೆ, ಮಾರುಕಟ್ಟೆಗಳು, ಬೀದಿಗಳಲ್ಲಿ ದಿನೇ ದಿನೆ ಕಾಣುತ್ತಿದ್ದು, ಸಂಭ್ರಮಿಸಲು ಜನರು ಎದುರು ನೋಡುತ್ತಿದ್ದಾರೆ. ದೀಪಾವಳಿಯಲ್ಲಿ ದೀಪದ ಜೊತೆಗೆ ಪಟಾಕಿ ಹಚ್ಚಿ ಸಂಭ್ರಮಿಸುತ್ತೇವೆ. ಇದೀಗ ಪಟಾಕಿ ಹಚ್ಚಿ ಸಂಭ್ರಮಿಸಲು ರಾಜ್ಯ ಸರ್ಕಾರ ಗುಡುವು ನೀಡಿದ್ದು, ಕೇವಲ 2 ಗಂಟೆ ಮಾತ್ರ ಪಟಾಕಿ ಹೊಡೆಯಲು ಸರ್ಕಾರ ಅನುಮತಿ ನೀಡಿದೆ. ರಾತ್ರಿ 8 ರಿಂದ 10 ಗಂಟೆತನಕ ಮಾತ್ರ ಪಟಾಕಿ ಹೊಡೆಯಲು ಅವಕಾಶ ನೀಡಲಾಗಿದೆ. 10 ಗಂಟೆ ನಂತರ ನೀವು ಪಟಾಕಿ ಸುಟ್ಟರೆ, ನಿಮ್ಮ ಮೇಲೆ ಕೇಸ್ ಬೀಳಲಿದೆ.

ಇದನ್ನೂ ಓದಿ:ದೀಪಾವಳಿ ಭರ್ಜರಿ ಆಫರ್​.. ಗ್ಯಾಲಕ್ಸಿ F55 ಸ್ಮಾರ್ಟ್​ಫೋನ್​ ಮೇಲೆ 8700 ರೂಪಾಯಿ ರಿಯಾಯಿತಿ!

ಏನ್ ಹೇಳ್ತಿದೆ ರಾಜ್ಯ ಸರ್ಕಾರ..?
ರಾಜ್ಯ ಸರ್ಕಾರದಿಂದ ಅಧಿಕೃತವಾಗಿ ಗೈಡ್​ಲೈನ್ಸ್​ ಜಾರಿ ಮಾಡಿದ್ದು, ಅದರಲ್ಲೂ ಗ್ರೀನ್ ಪಟಾಕಿ‌ ಮಾತ್ರ ಸಿಡಿಸಬೇಕು ಎಂದು ಸಿಸಿಬಿ ಜಂಟಿ ಆಯುಕ್ತ ಚಂದ್ರಗುಪ್ತ ಆದೇಶ ಹೊರಡಿಸಿದ್ದಾರೆ. ಒಂದು ನಿಯಮ ಉಲ್ಲಂಘಿಸಿದ್ದರೆ ಪರಿಸರ ಸಂರಕ್ಷಣೆ ಕಾಯ್ದೆ, ಶಬ್ದ ಮಾಲಿನ್ಯ ನಿಯಂತ್ರಣ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗುತ್ತದೆ.

ಇದನ್ನೂ ಓದಿ:ದೀಪಾವಳಿ ಹಬ್ಬಕ್ಕೆ ಸ್ಪೆಷಲ್​ ಆಫರ್​.. ಗ್ಯಾಜೆಟ್​ಗಳ ಮೇಲೆ ಶೇ.75%ರಷ್ಟು ರಿಯಾಯಿತಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment