/newsfirstlive-kannada/media/post_attachments/wp-content/uploads/2024/11/Deepavali-1.jpg)
ದೀಪಾವಳಿ ಹಬ್ಬ ಅಂದ್ರೆ ಅದೇನೋ ಸಡಗರ, ಸಂಭ್ರಮ. ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಹಬ್ಬಕ್ಕೆ ಗ್ರ್ಯಾಂಡ್ ವೆಲ್ಕಮ್ ಸಿಕ್ಕಿದೆ. ಪೂಜೆ-ಪುನಸ್ಕಾರಗಳ ಮಧ್ಯೆ ಎಲ್ಲೆಲ್ಲೂ ಪಟಾಕಿ ಸದ್ದು ಮಾರ್ಧನಿಸ್ತಿದೆ. ಆದರೆ ಇದೇ ಸದ್ದು ಕೆಲವರ ಜೀವನವನ್ನೇ ಕತ್ತಲಾಗಿಸಿದೆ. ಪಟಾಕಿ ಗಾಯಗಳಿಂದ ಕಣ್ಣಿನ ಆಸ್ಪತ್ರೆಗಳಿಗೆ ದಾಖಲಾಗುವವರ ಸಂಖ್ಯೆಯನ್ನ ಹೆಚ್ಚಿಸಿದೆ.
ದೀಪಾವಳಿ ಅಂದ್ರೆ ದೀಪದಿಂದ ದೀಪ ಹಚ್ಚುವ ಹಬ್ಬ. ಅಜ್ಞಾನವೆಂಬ ಅಂಧಕಾರ ಅಳಿಸಿ, ಸುಜ್ಞಾನವೆಂಬ ಬೆಳಕು ಮೂಡಿಸಿ, ಹರುಷದ ಹೊನಲು ಹರಿಸುವ ಬೆಳಕಿನ ಹಬ್ಬ. ಪ್ರತಿಯೊಬ್ಬರ ಬಾಳಲ್ಲಿ ಸುಖ, ಶಾಂತಿ ತರುವ ಹಬ್ಬ. ಆದ್ರೆ ಇದೇ ದೀಪಾವಳಿ ಕೆಲವರ ಬಾಳಲ್ಲಿ ಕತ್ತಲು ಆವರಿಸುವಂತೆ ಮಾಡಿದೆ.
ಪಟಾಕಿ ಸಿಡಿಸಲು ಹೋಗಿ ಅನಾಹುತ
ನಾಡಿನೆಲ್ಲೆಡೆ ದೀಪಾವಳಿ ಹಬ್ಬದ ಸಡಗರ, ಸಂಭ್ರಮ ಮನೆ ಮಾಡಿದೆ. ಎಲ್ಲರ ಮನೆಯಲ್ಲಿ ಮನೆಯ ಹಿರಿಯರು ದೀಪ ಬೆಳಗಿಸಿ ಸಂಭ್ರಮ ಪಟ್ರೆ, ಮಕ್ಕಳು ಹಾಗೂ ಯುವಕರಿಗೆ ಪಟಾಕಿ ಹೊಡೆಯುವ ಸಂಭ್ರಮ. ಆದ್ರೆ ಪಟಾಕಿ ಸಿಡಿಸುವ ಬರದಲ್ಲಿ ಬಾಳಿನ ಬೆಳಕಿಗೆ ಅಂಧಕಾರ ತಂದುಕೊಂಡಿದ್ದಾರೆ. ರಾಜಧಾನಿ ಬೆಂಗಳೂರಲ್ಲಿ ಕಳೆದ 2 ದಿನಗಳಿಂದ ಪಟಾಕಿಯಿಂದ ಗಾಯಗೊಂಡವರ ಸಂಖ್ಯೆ ಏರಿಕೆ ಆಗುತ್ತಲೇ ಇದೆ. ನಿನ್ನೆ ಆರು ಮಕ್ಕಳು, ಇಬ್ಬರು ವಯಸ್ಕರರು ಗಾಯಗೊಂಡಿದ್ದು, ಮಿಂಟೋ ಆಸ್ಪತ್ರೆಯಲ್ಲಿ ಪಟಾಕಿ ಸಿಡಿತದಿಂದ ದಾಖಲಾದವರ ಸಂಖ್ಯೆ 22ಕ್ಕೆ ಏರಿಕೆ ಆಗಿದೆ.
ಇದನ್ನೂ ಓದಿ: 18 ವರ್ಷ ಆದವರಿಗೆ ಭರ್ಜರಿ ಗುಡ್ನ್ಯೂಸ್; ಲಕ್ಷಕ್ಕೆ 2 ಲಕ್ಷ ಲಾಭ; ಹೇಗೆ?
ನಾರಾಯಣ ನೇತ್ರಾಲಯದಲ್ಲಿ 15 ಕೇಸ್ ದಾಖಲು
ಬೆಂಗಳೂರು ಒಂದರಲ್ಲೇ 30ಕ್ಕೂ ಮಂದಿ ಪಟಾಕಿಯಿಂದ ಗಾಯಗೊಂಡಿದ್ದಾರೆ ಎನ್ನಲಾಗಿದೆ. ನಾರಾಯಣ ನೇತ್ರಾಲಯದಲ್ಲಿ ಪಟಾಕಿಯಿಂದ ಗಾಯಗೊಂಡ 15 ಪ್ರಕರಣಗಳು ದಾಖಲಾಗಿವೆ. 15 ಮಂದಿಯಲ್ಲಿ ಓರ್ವನಿಗೆ ಗಂಭೀರ ಗಾಯಗಳಾಗಿದ್ದು, ವೈದ್ಯರು ಕಣ್ಣಿನ ಸರ್ಜರಿಗೆ ಮುಂದಾಗಿದ್ದಾರೆ.
ಪಟಾಕಿ ಹಚ್ಚಲು ಹೋಗಿ ಇಡೀ ಅಂಗಡಿಗೆ ಬೆಂಕಿ!
ಅತ್ತ ರಾಯಚೂರಿನಲ್ಲೂ ಪಟಾಕಿ ಅವಘಡ ಸಂಭವಿಸಿದೆ. ಸದರಬಜಾರ್ನಲ್ಲಿ ಪಟಾಕಿ ಕಿಡಿಯಿಂದ ಇಡೀ ಅಂಗಡಿಯೇ ಭಸ್ಮವಾಗಿದೆ. ಬೆಂಕಿ ನಂದಿಸಲು ಸ್ಥಳೀಯರು ಹರಸಾಹಸಪಟ್ಟಿದ್ದಾರೆ. ಅದೇ ವೇಳೆ ಭುವನೇಶ್ವರಿ ಮೆರವಣಿಗೆ ಹೊರಟಿತ್ತು. ಅದೃಷ್ಟ ವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ಇದನ್ನೂ ಓದಿ: ಮಾನಸಿಕ ಕಿರಿಕಿರಿ, ಹಣದ ತೊಂದರೆ, ಬೇಸರ, ಸ್ನೇಹಿತರ ಮಧ್ಯ ಮನಸ್ತಾಪ; ಇಲ್ಲಿದೆ ನಿಮ್ಮ ರಾಶಿ ಭವಿಷ್ಯ
ಒಟ್ಟಾರೆ, ದೀಪಾವಳಿ ಹಬ್ಬದಂದು ಪಟಾಕಿ ಹಚ್ಚುವಾಗ ಎಚ್ಚರ ಅಂತ ವೈದ್ಯರು ಅದೆಷ್ಟೇ ಸಲಹೆ ಕೊಟ್ರೂ ಜನರ ನಿರ್ಲಕ್ಷ್ಯದಿಂದ ಪಟಾಕಿ ಅನಾಹುತಗಳು ಹೆಚ್ಚಾಗುತ್ತಿವೆ. ಇವತ್ತು ಬಲಿಪಾಡ್ಯಮಿ ಇದ್ದು ಪೋಷಕರು ಎಚ್ಚೆತ್ತುಕೊಂಡ್ರೆ ಇಂತಹ ಅವಘಡಗಳನ್ನು ತಪ್ಪಿಸಬಹುದಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ