ಸ್ಕೂಟರ್​ನಲ್ಲಿ ತೆರಳುವಾಗ ಈರುಳ್ಳಿ ಬಾಂಬ್​ ಸ್ಫೋಟ.. ಓರ್ವ ಸಾ*ವು, ಆರು ಮಂದಿಗೆ ಗಾಯ

author-image
AS Harshith
Updated On
ಸ್ಕೂಟರ್​ನಲ್ಲಿ ತೆರಳುವಾಗ ಈರುಳ್ಳಿ ಬಾಂಬ್​ ಸ್ಫೋಟ.. ಓರ್ವ ಸಾ*ವು, ಆರು ಮಂದಿಗೆ ಗಾಯ
Advertisment
  • ಸ್ಕೂಟರ್​ನಲ್ಲಿ ಪಟಾಕಿ ತೆಗೆದುಕೊಂಡು ಹೋಗುತ್ತಿದ್ದಾಗ ಅವಘಡ
  • ಈರುಳ್ಳಿ ಬಾಂಬ್​ ಸಿಡಿದು ಸಾವನ್ನಪ್ಪಿದ ಸ್ಕೂಟರ್​ ಸವಾರ
  • ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆ.. ಎಲ್ಲವೂ ಛಿದ್ರ ಛಿದ್ರ

ದೀಪಾವಳಿ ಹಬ್ಬದಂದು ಪಟಾಕಿ ಸಿಡಿದು ಓರ್ವ ಸಾವನ್ನಪ್ಪಿದ ಘಟನೆ ನಡೆದಿದೆ. ಆಂಧ್ರಪ್ರದೇಶದ ಎಲೂರು ಜಿಲ್ಲೆಯಲ್ಲಿ ಈ ಅವಘಡ ನಡೆದಿದೆ. ಘಟನೆಯಲ್ಲಿ ಆರು ಮಂದಿ ಗಾಯಗೊಂಡಿದ್ದಾರೆ.

ಸಾವನ್ನಪ್ಪಿರುವ ವ್ಯಕ್ತಿಯನ್ನು ಸುಧಾಕರ್​ ಎಂದು ಗುರುತಿಸಾಗಿದೆ. ಸುಧಾಕರ್​ ದೀಪಾವಳಿ ಹಬ್ಬದ ವಿಶೇಷವಾಗಿ ಸ್ನೇಹಿತನೊಂದಿಗೆ ತನ್ನ ಸ್ಕೂಟರ್​ನಲ್ಲಿ ಈರುಳ್ಳಿ ಬಾಂಬ್​​ ಸಾಗಿಸುತ್ತಿದ್ದರು. ಹೀಗೆ ಸಾಗಿಸುತ್ತಿದ್ದಾಗ ಸ್ಕೂಟರ್​ ಸ್ಥಳೀಯ ದೇವಸ್ಥಾನದ ಬಳಿ ತಲುಪುತ್ತಿದ್ದಂತೆ ಸ್ಫೋಟಗೊಂಡಿದೆ.

ಇದನ್ನೂ ಓದಿ: ಬೆಂಗಳೂರಲ್ಲಿ ಕೊ*ಲೆ, ಸೇಲಂನಲ್ಲಿ ಮೃತದೇಹ; ಸಾಫ್ಟ್‌ವೇರ್ ದಂಪತಿ ಕೃತ್ಯಕ್ಕೆ ಬೆಚ್ಚಿ ಬಿದ್ದ ಪೊಲೀಸರು!

[caption id="attachment_94831" align="alignnone" width="800"]ಈರುಳ್ಳಿ ಬಾಂಬ್ ಈರುಳ್ಳಿ ಬಾಂಬ್[/caption]

ಈರುಳ್ಳಿ ಬಾಂಬ್​ ಸಿಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಧ್ಯಾಹ್ನಾ 12.17ಕ್ಕೆ ಈ ದುರಂತ ಸಂಭವಿಸಿದೆ. ಕಿರಿದಾದ ರಸ್ತೆಯ ಪಕ್ಕ ನಿಂತಿದ್ದ ಜನರಿಗೂ ಸ್ಫೋಟದಿಂದ ಗಾಯಗಳಾಗಿವೆ.


">October 31, 2024

ಇದನ್ನೂ ಓದಿ: AI ನೆರವಿಂದ ಮೂವರು ಉಗ್ರರು ಫಿನಿಶ್​.. ಕಾಶ್ಮೀರದಲ್ಲಿ ಸೇನೆಯ ಈ ಆಪರೇಷನ್​ ರಣರೋಚಕ!

ಬಾಂಬ್​ ಸ್ಫೋಟಗೊಂಡತೆ ಹೊಗೆ ಆವೃತವಾಗಿದೆ. ಸ್ಕೂಟರ್​ನ ಬಿಡಿ ಭಾಗಗಳು ಛಿದ್ರ ಛಿದ್ರವಾಗಿ ಬಿದ್ದಿದೆ. ಇಬ್ಬರು ಆ ಸ್ಥಳದಿಂದ ಓಡೋಡಿ ಬರುವ ದೃಶ್ಯ ಸಿಟಿಕ್ಯಾಮೆರಾದಲ್ಲಿ ಸೆರೆಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment