/newsfirstlive-kannada/media/post_attachments/wp-content/uploads/2024/10/jio-1-1.jpg)
ದೀಪಾವಳಿ ಹಬ್ಬದ ಸಂಭ್ರಮದಲ್ಲಿರುವ ಜನತೆಗೆ ರಿಲಯನ್ಸ್​ ಭರ್ಜರಿ ಆಫರ್​ ಘೋಷಿಸಿದೆ. ಹಲವು ಕೊಡುಗೆಗಳನ್ನು ನೀಡಿದೆ. ಅದರಂತೆಯೇ ಇದೀಗ ಜಿಯೋಭಾರತ್​ ಕೆ1 ಕಾರ್ಬನ್​ ಮತ್ತಯ ಜಿಯೋ ಭಾರತ್​ ವಿ2 4G ಫೋನನ್ನು ಆಕರ್ಷಕ ಬೆಲೆಗೆ ಮಾರಾಟ ಮಾಡುತ್ತಿದೆ.
​
ದೀಪಾವಳಿ ಧಮಾಕಾ ಆಫರ್​ನಲ್ಲಿ ಜಿಯೋಭಾರತ್​​ 4ಜಿ ಫೀಚರ್​ ಪೋನ್​ ಮೇಲೆ 300 ರೂಪಾಯಿ ರಿಯಾಯಿತಿ ನೀಡಿದೆ. 999 ರೂಪಾಯಿ ಮುಖ ಬೆಲೆಯ ಫೋನನ್ನು​ 300 ರೂಪಾಯಿ ಕಡಿತ ಬೆಲೆಗೆ ಮಾರಾಟ ಮಾಡುತ್ತಿದೆ.
ಜಿಯೋಭಾರತ್​ ಕೆ1 ಕಾರ್ಬಲ್​ ಮತ್ತು ಜಿಯೋ ಭಾರತ್ V2 ಫೋನನ್ನು 699 ರೂಪಾಯಿಗೆ ಮಾರಾಟ ಮಾಡುತ್ತಿದೆ. ಇದು ಸೀಮಿತ ಅವಧಿಯ ಕೊಡುಗೆಯಾಗಿದೆ.
ಇದನ್ನೂ ಓದಿ: Explained: ಮಧ್ಯಂತರ, ಮೆಡಿಕಲ್​ ಜಾಮೀನು ಎಂದರೇನು? ಜಾಮೀನು ಕುರಿತಾದ ಮಾಹಿತಿ ಇಲ್ಲಿದೆ
ಜಿಯೋಭಾರತ್​ ಕೆ1 ಕಾರ್ಬನ್​ ಮತ್ತು ಜಿಯೋ ಭಾರತ್​ ವಿ2 ಫೀಚರ್​ ಫೋನ್​ 1.77 ಇಂಚಿನ ಬಣ್ಣದ ಪರದೆಯನ್ನು ಹೊಂದಿದೆ. ಇದರಲ್ಲಿ ಮೈಕ್ರೋ ಎಸ್​ಡಿ ಕಾರ್ಡ್​​ ಸ್ಲಾಟ್​ ನೀಡಲಾಗಿದೆ. 128ಜಿಬಿ ತನಕ ಸಂಗ್ರಹಣೆಯನ್ನು ವಿಸ್ತರಿಸಿದೆ. 1000mAh ಬ್ಯಾಟರಿಯ ಈ ಫೋನ್​ 4ಜಿ ನೆಟ್​ವರ್ಕ್​ನಲ್ಲಿ ಕಾರ್ಯನಿರ್ವಹಿಸುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us