/newsfirstlive-kannada/media/post_attachments/wp-content/uploads/2024/10/DEEPAVALI-SWEETS-5.jpg)
ಪ್ರಸಿದ್ಧ ದೀಪಾವಳಿ ಸಿಹಿತಿಂಡಿಗಳಲ್ಲಿ ಗುಲಾಬ್ ಜಾಮೂನ್, ಜಲೇಬಿ, ಹಲ್ವಾ, ರಸಗುಲ್ಲಾ, ಕರಂಜಿ (ಕರ್ಜಿಕಾಯಿ), ಹೋಳಿಗೆ ಸೇರಿವೆ. ಸಂಸ್ಕರಿಸಿದ ಸಕ್ಕರೆಯ ಬದಲಿಗೆ ಖರ್ಜೂರ, ಬೆಲ್ಲ ಅಥವಾ ತೆಂಗಿನಕಾಯಿ ಇಂದ ಮಾಡಿದ ನೈಸರ್ಗಿಕ ಸಿಹಿ ತಿಂಡಿಗಳನ್ನು ನೀವು ಖರೀದಿಸಬಹುದು.
/newsfirstlive-kannada/media/post_attachments/wp-content/uploads/2024/10/DEEPAVALI-SWEETS-4.jpg)
ಎಚ್ಚರ!
ಸಿಹಿತಿಂಡಿಗಳನ್ನು ಖರೀದಿಸುವಾಗ ನೀವು ಒಂದು ವಿಷಯ ನೆನಪಿನಲ್ಲಿಡಿ. ಸಿಹಿತಿನಿಸುಗಳು ತಾಜಾವಾಗಿ ಕಂಡರೂ ಕೆಲವೊಮ್ಮೆ ಕೆಟ್ಟ ವಾಸನೆ ಬರುತ್ತಿರುತ್ತದೆ. ಅಂತಹ ಸಿಹಿತಿಂಡಿಗಳನ್ನು ಖರೀದಿಸಬೇಡಿ. ನೀವು ಸಿಹಿತಿಂಡಿಗಳನ್ನು ಖರೀದಿಸಿದ ನಂತರ ಗಾಳಿಯಾಡದ ಬಾಟಲಿ ಅಥವಾ ಪಾತ್ರೆಯಲ್ಲಿ ಇರಿಸಿ.
ಇದನ್ನೂ ಓದಿ:ದೀಪಾವಳಿ ಸಂಭ್ರಮ.. ಮನೆಯ ಮುಂದೆ ಈ ಬಾರಿ ಡಿಫ್ರೆಂಟ್ ರಂಗೋಲಿ ಇರಲಿ..! 10 ಫೋಟೋಗಳು
/newsfirstlive-kannada/media/post_attachments/wp-content/uploads/2024/10/DEEPAVALI-SWEETS-3.jpg)
ಇನ್ನು ಮಾರುಕಟ್ಟೆಯಲ್ಲಿ ಸಿಹಿ ತಿಂಡಿಗಳ ರಾಶಿಯೇ ಕಾಣಸಿಗುತ್ತವೆ. ಅಂಗಡಿಗಳಲ್ಲಿ ವರ್ಣರಂಜಿತ ಮತ್ತು ರುಚಿಕರವಾದ ಸಿಹಿ ತಿಂಡಿಗಳನ್ನು ಅಲಂಕರಿಸಿ ಇಟ್ಟಿರುತ್ತಾರೆ. ಜೊತೆ ಜೊತೆಗೆ ಕಲಬೆರಕೆ ದಂಧೆಯೂ ಜೋರಾಗಿ ನಡೆಯುತ್ತಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ಒಂದು ತಪ್ಪು ಹಬ್ಬದ ಸಂತೋಷದಲ್ಲಿ ಸಮಸ್ಯೆಗಳನ್ನು ತರಬಹುದು. ಹಾಗಾಗಿ ಮಾರುಕಟ್ಟೆಗೆ ಹೋದಾಗ ಈ ವಿಷಯಗಳನ್ನು ನೆನಪಿನಲ್ಲಿಡಿ.
/newsfirstlive-kannada/media/post_attachments/wp-content/uploads/2024/10/DEEPAVALI-SWEETS-2.jpg)
ನಕಲಿ ಸಿಹಿ ತಿಂಡಿಗಳಿಂದ ದೂರವಿರಿ
ಸಿಹಿತಿಂಡಿಗಳನ್ನು ಖರೀದಿಸಲು ಮಾರುಕಟ್ಟೆಗೆ ಹೋದರೆ ಬಣ್ಣ ಬಣ್ಣದ ತಿನಿಸುಗಳಿಗೆ ಆಕರ್ಷಣೆ ಆಗೋದು ಬೇಡ. ಕಲಬೆರಕೆ ಸಿಹಿ ತಿಂಡಿಗಳನ್ನು ಮುಟ್ಟಲೇಬೇಡಿ. ಅಂತಹ ಸಿಹಿ ತಿಂಡಿಗಳು ಅಲರ್ಜಿ, ಕಿಡ್ನಿ ರೋಗ ಮತ್ತು ಉಸಿರಾಟದ ಸಮಸ್ಯೆಯನ್ನುಂಟು ಮಾಡುತ್ತವೆ. ಅವು ನಿಮ್ಮ ಹಬ್ಬದ ಸಂಭ್ರಮವನ್ನೇ ಕಿತ್ತುಕೊಳ್ಳಬಹುದು. ಬಣ್ಣಬಣ್ಣದ ಸಿಹಿ ತಿಂಡಿಗಳನ್ನು ಖರೀದಿಸುವುದು ಮತ್ತು ತಿನ್ನುವುದರಿಂದ ದೂರವಿರಿ.
/newsfirstlive-kannada/media/post_attachments/wp-content/uploads/2024/10/DEEPAVALI-SWEETS-1.jpg)
ಸಿಲ್ವರ್ ವರ್ಕ್‌ಗೆ ಮೋಸ ಹೋಗ್ಬೇಡಿ
ಮಾರುಕಟ್ಟೆಯಲ್ಲಿ ಅನೇಕ ಸಿಹಿ ತಿಂಡಿಗಳ ಮೇಲೆ ಬೆಳ್ಳಿಯ ಲೇಪ ಗೋಚರಿಸುತ್ತವೆ. ಅವು ತುಂಬಾ ಪ್ರಕಾಶಮಾನವಾಗಿ ಮತ್ತು ಆಕರ್ಷಕವಾಗಿ ಕಾಣುತ್ತವೆ. ಇದರಿಂದ ಮೋಸ ಹೋಗಬೇಡಿ ಇಂದಿನ ದಿನಗಳಲ್ಲಿ ಕಲಬೆರಕೆಯವರು ಸಿಹಿ ಪದಾರ್ಥ ಚೆನ್ನಾಗಿ ಕಾಣಲು ವಿಷಕಾರಿ ವಸ್ತುಗಳನ್ನು ಬಳಸುತ್ತಾರೆ. ಇವು ಆರೋಗ್ಯಕ್ಕೆ ಅಪಾಯಕಾರಿ. ಆದ್ದರಿಂದ ಇಂತಹ ಸಿಹಿತಿಂಡಿಗಳನ್ನು ತ್ಯಜಿಸಬೇಕು. ಪೇಟೆಯಿಂದ ಸಿಹಿ ತಿಂಡಿಗಳನ್ನು ಖರೀದಿಸುವ ಬದಲಿಗೆ, ಮನೆಯಲ್ಲೇ ಮಾಡಿದ ಸಿಹಿ ಪದಾರ್ಥಗಳನ್ನು ತಿನ್ನೋದು ಉತ್ತಮ. ಇದರಿಂದ ನಿಮ್ಮ ಆರೋಗ್ಯ ಕೂಡ ಚೆನ್ನಾಗಿರುತ್ತದೆ.
/newsfirstlive-kannada/media/post_attachments/wp-content/uploads/2024/10/DEEPAVALI-SWEETS.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us